ಬಿಗ್ ಬಾಸ್ ಅಭಿಮಾನಿಗಳ ಕಾಯುವಿಕೆ ಕೊನೆಗೊಂಡಿದೆ. ಅಭಿನಯ ಚಕ್ರವರ್ತಿ ಸುದೀಪ್ ನಿರೂಪಣೆಯಲ್ಲಿ ಬಿಗ ಬಾಸ್ ನೋಡುವುದೆ ಚಂದಾ. ಹೊಚ್ಚ ಹೊಸ ಸೀಸನ್ ಗಾಗಿ ಕಾತುರರಾಗಿದ್ದ ಕೋಟ್ಯಂತರ ವೀಕ್ಷಕರಿಗೆ ಕಿಚ್ಚ ತಮ್ಮ ಸ್ಪರ್ಧಿಗಳೊಂದಿಗೆ ದರ್ಶನ ಕೊಟ್ಟಿದ್ದಾರೆ. 12 ನೇ ಸೀಸನ್, ಈ ಹಿಂದಿನ ಎಲ್ಲಾ ಸೀಸನ್‌ಗಿಂತ ಅದ್ದೂರಿಯಾಗಿ ಮೂಡಿ ಬರೋದು ಖಚಿತಗೊಂಡಿದೆ. ಆರಂಭವೇ ಅತ್ಯದ್ಭುತ ಎಂದವರಿಗೀಗ ಬಿಗ್ ಬಾಸ್ ಶಾಕ್ ಕೊಟ್ಟಿದ್ದಾರೆ. ಎಂಟ್ರಿ ಆಗುತ್ತಲೇ ಓರ್ವರ ಎಲಿಮಿನೇಶನ್ ಪ್ರೊಸೆಸ್ ಶುರುವಾಗಿದೆ. ಹೋಗೋದ್ಯಾರು? ಎಂಬುದಕ್ಕೆ ಉತ್ತರ ಇಂದು ರಾತ್ರಿ ಪ್ರಸಾರ ಕಾಣಲಿರುವ ಸಂಚಿಕೆಯಲ್ಲಿ ತಿಳಿದುಬರಲಿದೆ.
ಕಳೆದ 11 ಸೀಸನ್‌ಗಳಲ್ಲಿ ಇಲ್ಲಿವರೆಗೂ ಇಷ್ಟೊಂದು ಜನ ಮನೆ ಒಳಗೆ ಹೋಗಿರಲಿಲ್ಲ. ಈ ಸಲ ಬೇರೇನೆ ಇರುತ್ತದೆ ಅಂತ ಬಿಗ್ ಬಾಸ್ ಹೋಸ್ಟ್ ಸುದೀಪ್ ಪ್ರೋಮೋದಲ್ಲಿಯೇ ಮೊದಲೇ ಹೇಳಿದ್ದಾರೆ. ಅದಕ್ಕೆನೆ 19 ಜನ ಮನೆ ಒಳಗೆ ಹೋಗಿ ಆಶ್ಚರ್ಯ ಮೂಡಿಸಿದ್ದಾರೆ. ಆದರೆ, ಜಂಟಿ ಯಾಗಿ ಒಂದಷ್ಟು ಜನ ಒಳಗೆ ಹೋಗಿದ್ದಾರೆ. ಒಂಟಿ ಆಗಿ ಇನ್ನೂ ಕೆಲವು ಸ್ಪರ್ಧಿಗಳು ಮನೆಗೆ ಪ್ರವೇಶ ಮಾಡಿದ್ದಾರೆ. ಆದರೆ, ಕೊನೆಯಲ್ಲಿ ಉಳಿದ ಮೂರು ಜನ ಒಂಟಿನೂ ಇಲ್ಲ. ಜಂಟಿನೂ ಇಲ್ಲ ಅನ್ನುವ ಹಾಗೆ ದೊಡ್ಮನೆಗೆ ಕಾಲಿಟ್ಟಿದ್ದಾರೆ.
ಬಿಗ್ ಬಾಸ್ ಮನೆಯಿಂದ ಮೊದಲ ದಿನವೇ ಯಾರ್ ಹೋಗ್ತಾರೆ ಅನ್ನೋ ಪ್ರಶ್ನೆ ಇದೆ. ಗಾಯಕ ಮಾಳು ನಿಪನಾಳ, ಸ್ಪಂದನಾ ಹಾಗೂ ಚಿಕ್ಕ ಹುಡುಗಿ ರಕ್ಷಿತಾ ಶೆಟ್ಟಿ ಇದ್ದಾರೆ. ಈ ಮೂವರಲ್ಲಿ ಒಬ್ಬರು ಮನೆಗೆ ಹೋಗ್ತಾರಾ? ಅಥವಾ ಜಂಟಿ ಇಲ್ವೆ ಒಂಟಿ ಆಗಿರೋರಲ್ಲಿಯೇ ಯಾರಾದ್ರು ಮನೆಗೆ ಹೋಗ್ತಾರಾ ಅನ್ನೋ ಪ್ರಶ್ನೆ ಇದೆ. ಇನ್ನು ಮೊದಲ ದಿನ ಎಲಿಮಿನೇಟ್ ಆದವರನ್ನು ಬಿಗ್ ಬಾಸ್ ಸೀಕ್ರೆಟ್ ರೂಮ್ನಲ್ಲಿರಿಸೋ ಸಾಧ್ಯತೆ ಹೆಚ್ಚಿದೆ. ಇತ್ತೀಚೆಗೆ ಆರಂಭಗೊಂಡ ಬಿಗ್ ಬಾಸ್ನಲ್ಲಿಯೂ ಈ ಪ್ರಕ್ರಿಯೆ ನಡೆದಿತ್ತು. ಅವರನ್ನು ಮನೆಗೆ ವಾಪಾಸ್ ಕಳಿಸಿ, ಬಿಗ್ ಬಾಸ್ ಸರ್ಪೈಸ್ ಜೊತೆಗೆ ಶಾಕ್ ಕೊಟ್ಟಿದ್ದರು. ಹಾಗಾಗಿ, ಕನ್ನಡದ ಬಿಗ್ ಬಾಸ್ನಲ್ಲಿಯೂ ಈ ಅವಕಾಶ ಹೆಚ್ಚಿದೆ ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ. ಏಕೆಂದರೆ ಆಟ ನೋಡದೇ ಮೊದಲ ದಿನವೇ ಸ್ಪರ್ಧಿಗಳನ್ನು ಕಳಿಸಿರೋದು ಬಿಗ್ ಬಾಸ್ ಇತಿಹಾಸದಲ್ಲಿಲ್ಲ.
ಇನ್ನೊಂದು ವಿಚಾರವೆಂದರೆ ಊಹೆಯಾ ಪ್ರಕಾರ ಯಾರು ನಾಮಿನೇಟ್ ಆಗದೆ, ಮುಂದಿನ ವಾರಕ್ಕೆ ಡೈರೆಕ್ಟ್ ನಾಮೀನೆಷನ್ ಆಗುವ ಸಾಧ್ಯತೆಗಳು ಕೂಡ ಇದೆ. ಇದಕ್ಕೆಲ್ಲಾ ಉತ್ತರ ಇವತ್ತಿನ ಬಿಗ್ ಬಾಸ್ ಸಂಚಿಕೆಯಲ್ಲಿ ಸಿಗಲಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ

