Sunday, September 8, 2024

Latest Posts

ಯುದ್ಧದ ಬಗ್ಗೆ ಉಕ್ರೇನ್ ಅಧ್ಯಕ್ಷನ ಪತ್ನಿಯ ಮೊದಲ ಪ್ರತಿಕ್ರಿಯೆ..

- Advertisement -

ತಮ್ಮ ದೇಶದಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಮೊದಲ ಬಾರಿ ಯುಕ್ರೇನ್ ಅಧ್ಯಕ್ಷನ ಪತ್ನಿ, ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಒಲೆನಾ ಝೆಲೆನ್ಸ್ಕಿ ಈ ಬಗ್ಗೆ ಬರೆದುಕೊಂಡಿದ್ದು, ಕೇವಲ ಒಂದು ವಾರದ ಹಿಂದೆ ನಡೆದ ಘಟನೆ ನಂಬಲು ಅಸಾಧ್ಯವಾಗದ್ದು. ನಮ್ಮ ದೇಶ ಶಾಂತವಾಗಿತ್ತು. ಹಳ್ಳಿ, ಪಟ್ಟಣದಲ್ಲಿದ್ದವರೆಲ್ಲ ಆರಾಮವಾಗಿ ಜೀವನ ನಡೆಸುತ್ತಿದ್ದರು. ಆದ್ರೆ ಫೆಬ್ರವರಿ 24ರಂದು ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿತ್ತು.

ಟ್ಯಾಂಕ್‌ಗಳು ಉಕ್ರೇನಿಯನ್ ಗಡಿಯನ್ನು ದಾಟಿದವು. ವಿಮಾನಗಳು ನಮ್ಮ ವಾಯುಪ್ರದೇಶವನ್ನು ಪ್ರವೇಶಿಸಿದವು. ಕ್ಷಿಪಣಿ ಲಾಂಚರ್‌ಗಳು ನಗರಗಳನ್ನು ಸುತ್ತುವರಿದವು. ಇದನ್ನು ವಿಶೇಷ ಕಾರ್ಯಾಚರಣೆ ಎಂದು ಕರೆಯುತ್ತಾರೆ. ಆದ್ರೆ ಇದು ವಾಸ್ತವವಾಗಿ ಉಕ್ರೇನಿಯನ್ ನಾಗರಿಕರ ಸಾಮೂಹಿಕ ಹತ್ಯೆ. ಮೊದಲು ರಷ್ಯಾ ನಮ್ಮ ಯುದ್ಧ ಉಕ್ರೇನ್ ಅಧ್ಯಕ್ಷನ ವಿರುದ್ಧ, ಉಕ್ರೇನ್ ಸೈನಿಕರ ವಿರುದ್ಧ ಎಂದು ಹೇಳಿತ್ತು. ನಾಗರಿಕರ ವಿರುದ್ಧ ನಾವು ಯುದ್ಧ ಮಾಡುವುದಿಲ್ಲವೆಂದು ಹೇಳಿತ್ತು. ಆದ್ರೆ ಎಷ್ಟೋ ನಾಗರಿಕರು, ಮಹಿಳೆ, ಮಕ್ಕಳು ಇದರಲ್ಲಿ ಸಾವನ್ನಪ್ಪಿದ್ದಾರೆ. ರಷ್ಯಾ ನಾವು ನಾಗರಿಕರ ಮೇಲೆ ಯುದ್ಧ ಮಾಡಿಲ್ಲ ಎಂದರೆ, ನಾನು ಈ ವಿಷಯವನ್ನೇ ಮೊದಲು ಪ್ರಸ್ತಾಪಿಸುತ್ತೇನೆಂದು ಒಲೆಯಾ ಹೇಳಿದ್ದಾರೆ.

ಮಹಿಳೆಯರು ಮತ್ತು ಮಕ್ಕಳು ಮೆಟ್ರೋ ನಿಲ್ದಾಣದಲ್ಲಿ ,ಟ್ಯಾಂಕರ್‌ಗಳಲ್ಲಿ ತಮ್ಮ ಮನೆಯ ಸಾಕು ಪ್ರಾಣಿಗಳೊಂದಿಗೆ ನೆಲೆಸಿದ್ದಾರೆ. ಊಟ ತಿಂಡಿಗಾಗಿ, ನೀರಿಗಾಗಿ ಒದ್ದಾಡುತ್ತಿದ್ದಾರೆ. ಜನರ ಮೂಲಸೌಕರ್ಯಗಳ ಮೇಲೆ ರಷ್ಯಾ ಬಾಂಬ್ ದಾಳಿ ನಡೆಸಿದೆ. ಅನಾರೋಗ್ಯ ಇರುವವರಿಗೆ ಬಂಕರ್‌ಗಳಲ್ಲಿ ಚಿಕಿತ್ಸೆ ಕೊಡುವುದು ತೀರಾ ಕಠಿಣವಾಗಿದೆ. ಆದರೂ ನಮ್ಮ ಜನ ಗೆಲ್ಲಲು ಪ್ರಯತ್ನಿಸುತ್ತಾರೆ. ಕಷ್ಟದಲ್ಲಿರುವವರಿಗೆ ಉಕ್ರೇನಿಗರು, ಸಹಾಯ ಮಾಡುತ್ತಿದ್ದಾರೆ. ಇದು ನಾವು ಗೆದ್ದೆ ಗೆಲ್ಲುತ್ತೇವೆ ಎಂಬ ಸೂಚನೆ ಎಂದು ಹೇಳಿದ್ದಾರೆ.

- Advertisement -

Latest Posts

Don't Miss