International News: ಮಾನವನ ಮೆದುಳಿನಲ್ಲಿ ಮೊದಲ ರೊಬೋಟ್ ಚಿಪ್ ಅಳವಡಿಕೆ ಯಶಸ್ವಿಯಾಗಿದೆ ಎಂದು, ಎಲಾನ್ ಮಸ್ಕ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ನ್ಯೂರಾಲಿಂಕ್ ಸಂಸ್ಥೆ ಮೊದಲ ಬಾರಿಗೆ ಮಾನವನ ಮೆದುಳಿನಲ್ಲಿ ಚಿಪ್ ಅಳವಡಿಸಲಾಗಿದ್ದು, ಆ ವ್ಯಕ್ತಿ ಚೇತರಿಸಿಕೊಳ್ಳುತ್ತಿದ್ದಾನೆ. ನರಕೋಶಗಳ ಪತ್ತೆ ನಿಖರವಾಗಿದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
ಈಗಾಗಲೇ ಚಿಪ್ಗಳನ್ನು ಹಂದಿ ಮತ್ತು ಮಂಗಗಳ ಮೆದುಳಿನಲ್ಲಿ ಚಿಪ್ ಅಳವಡಿಸಲಾಗಿದೆ. ಇದು ವಿಶ್ವಾಸಾರ್ಹ ಚಿಪ್ ಆಗಿದ್ದು, ಇದನ್ನು ಅಳವಡಿಸಿದ ಬಳಿಕ, ಮಂಗಗಳು ವೀಡಿಯೋ ಗೇಮ್ ಕೂಡ ಆಡಿದೆ.
ಇನ್ನು ಇಂಥ ಚಿಪ್ ಏಕೆ ಅಳವಡಿಸಲಾಗುತ್ತದೆ ಎಂದರೆ, ಪಾರ್ಕಿನ್ಸನ್ನಂಥ ನರರೋಗಗಳಿಗೆ ಚಿಕಿತ್ಸೆ ನೀಡಲು, ಇಂಥ ಚಿಪ್ ಸಹಕಾರಿಯಾಗಿರುತ್ತದೆ ಎಂದು ನ್ಯೂರಾಲಿಂಕ್ ಸಂಸ್ಥೆ ಹೇಳಿದೆ. 400ಕ್ಕೂ ಹೆಚ್ಚು ವೃತ್ತಿಪರರನ್ನು ನೇಮಿಸಿಕೊಂಡು, 363 ಡಾಲರ್ ಹಣ ಖರ್ಚು ಮಾಡಿ, ಈ ಚಿಪ್ನ್ನು ಮಾನವನ ಮೆದುಳಿನಲ್ಲಿ ಅಳವಡಿಸಲಾಗಿದೆ.
ಡ್ರೋನ್ ದಾಳಿಗೆ ಅಮೆರಿಕದ ಮೂವರು ಸೈನಿಕರು ಬಲಿ: ಬೈಡನ್ ಹೇಳಿದ್ದೇನು..?




