Friday, July 19, 2024

Latest Posts

ಮೊದಲ ಬಾರಿ ಕಾರ್ಯಕ್ರಮವೊಂದರಲ್ಲಿ ಭವಾನಿ ರೇವಣ್ಣ- ಪ್ರೀತಂ ಗೌಡ ಮುಖಾಮುಖಿ..

- Advertisement -

ಹಾಸನ: ಹಾಸನದಲ್ಲಿ ಮೊದಲಿನಿಂದಲೂ ಜೆಡಿಎಸ್ ಮತ್ತು ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಇದೆ, ಆಗಾಗ ಎರಡೂ ಪಕ್ಷದ ನಾಯಕರು ಪರಸ್ಪರ ವಾಗ್ದಾಳಿ ಮಾಡುತ್ತಾರೆಂದು ಎಲ್ಲರಿಗೂ ಗೊತ್ತು. ಆದ್ರೆ ಇಂದು ಬಿಜೆಪಿಯ ಶಾಸಕ ಪ್ರೀತಂಗೌಡ ಮತ್ತು ಜೆಡಿಎಸ್‌ನ ಭವಾನಿ ರೇವಣ್ಣ, ಕಾರ್ಯಕ್ರಮವೊಂದರಲ್ಲಿ ಮುಖಾಮುಖಿಯಾಗಿದ್ದಾರೆ.

ಹಾಸನದಲ್ಲಿ ಶಮಿ ಪೂಜೆ ನೆರವೇರಿಸಿದ ನಿರ್ಮಲಾನಂದ ಶ್ರೀಗಳು..

ಹಾಸನದ ಖಾಸಗಿ ಆಸ್ಪತ್ರೆಯ ಹೈಟೆಕ್ ಚಿಕಿತ್ಸಾ ವಿಭಾಗ ಉದ್ಘಾಟನಾ ವೇಳೆ ಭವಾನಿ ಹಾಗೂ ಪ್ರೀತಂಗೌಡ ಭೇಟಿಯಾಗಿದ್ದಾರೆ. ಈ ವೇಳೆ ಆಸ್ಪತ್ರೆಯ ಟೇಪ್ ಕತ್ತರಿಸಲು ಭವಾನಿ ರೇವಣ್ಣ ಅವರಿಗೆ ಹೇಳಿದಾಗ, ಅವರು ಕತ್ತರಿಯನ್ನು ಪ್ರೀತಂಗೌಡ ಅವರಿಗೆ ಕೊಡಲು ಮುಂದಾದರು. ಆಗ ಪ್ರೀತಂ ಗೌಡ ಲೇಡೀಸ್ ಫಸ್ಟ್ ನೀವೇ ಟೇಪ್ ಕತ್ತರಿಸಿ ಎಂದಿದ್ದಾರೆ. ಹಾಗಾಗಿ ಭವಾನಿ ರೇವಣ್ಣ ಟೇಪ್ ಕತ್ತರಿಸಿ, ಆಸ್ಪತ್ರೆಗೆ ಉದ್ಘಾಟನೆ ಮಾಡಿ ಮುನ್ನಡೆದಿದ್ದಾರೆ.

ಬಹಳ ಪಸಂದಾಗಿದೆ “ದಿಲ್ ಪಸಂದ್” ಟೀಸರ್…

ಈಗಾಗಲೇ ಹಾಸನ ಕ್ಷೇತ್ರದಲ್ಲಿ ಪ್ರೀತಂಗೌಡ ವಿರುದ್ದ ಭವಾನಿ ರೇವಣ್ಣ ಸ್ಪರ್ಧೆ ಮಾಡುತ್ತಾರೆ ಎಂದು ಚರ್ಚೆ ನಡೆಯುತ್ತಿದೆ. ಅಲ್ಲದೇ ಭವಾನಿ ರೇವಣ್ಣ ಏನಾದ್ರೂ ನನ್ನ ವಿರುದ್ಧ ಸ್ಪರ್ಧೆ ಮಾಡಿದ್ರೆ ಮೂರನೇ ಸ್ಥಾನಕ್ಕೆ ಹೋಗುತ್ತಾರೆಂದು ಪ್ರೀತಂಗೌಡ ಟೀಕಿಸಿದ್ದರು. ಸದ್ಯ ಯಾವ ಟೀಕೆಗೂ ಕಿವಿಗೊಡದ ಭವಾನಿ ರೇವಣ್ಣ, ಭವಾನಿ ತಮ್ಮ ವಿರುದ್ದ ಸ್ಪರ್ಧೆ ಮಾಡಿದರೆ ಮೂರನೇ ಸ್ಥಾನಕ್ಕೆ ಹೋಗುತ್ತಾರೆಂದು ಟೀಕಿಸಿದ್ದ ಹಾಸನ ವಿಧಾನಸಭಾ ವ್ಯಾಪ್ತಿಯಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ.

- Advertisement -

Latest Posts

Don't Miss