Wednesday, September 18, 2024

Latest Posts

Vasthu:ಕನ್ನಡಿಯನ್ನ ಈ ದಿಕ್ಕಿನಲ್ಲಿಟ್ರೆ ಅಪಾಯ ಫಿಕ್ಸ್!

- Advertisement -

ಕನ್ನಡಿ ಇಲ್ದೇ ಇರೋ ಮನೆ ಲೋಕದಲ್ಲಿ ಎಲ್ಲಿ ಸಹ ನೋಡಲೂ ಸಿಗೋದಿಲ್ಲ.ಯಾಕಂದ್ರೆ ಕನ್ನಡಿ ಜನ ಜೀವನದ ಒಂದು ಭಾಗವಾಗಿದೆ.ಅದರಲ್ಲೂ ಮುಖ್ಯವಾಗಿ ಮನೆಯ ವಾಸ್ತುವಿನ ದೋಷ ಪರಿಹಾರಕ್ಕೆ ಕನ್ನಡಿ ಪರಿಹಾರವಾಗುತ್ತೋ? ಇಲ್ವೋ? ಎಂಬುದು ಹಲವರ ಪ್ರಶ್ನೆ.ಕನ್ನಡಿಯನ್ನ ಕೆಲವೊಂದು ಸೂಕ್ತ ದಿಕ್ಕಿಗೆ ಇಟ್ರೆ ಮಾತ್ರ ವಾಸ್ತು ದೋಷ ಪರಿಹಾರ ಮಾಡೋಕ್ಕೆ ಸಾಧ್ಯ. ಹಾಗಿದ್ರೆವಾಸ್ತು ಪರಿಹಾರಕ್ಕೆ ಕನ್ನಡಿಯನ್ನ ಯಾವ ಸೂಕ್ತ ಸ್ಥಳಗಳಲ್ಲಿ ಇಡಬೇಕು ತಿಳಿಸ್ತೀವಿ

 

ಮೊದಲೇ ಹೇಳಿದ ಹಾಗೆ ಪ್ರತಿಯೊಂದು ಮನೆಗಳಲ್ಲಿಯೂ ಕನ್ನಡಿ ಇದ್ದೇ ಇರುತ್ತೇ.ಆದ್ರೆ ಅದನ್ನ ಸರಿಯಾದ ದಿಕ್ಕಿನಲ್ಲಿ ಇಡೋದು ಬಹಳ ಮುಖ್ಯ.ಕನ್ನಡಿಗಳು ಧನಾತ್ಮಕ ಹಾಗೂ ಋಣಾತ್ಮಕ ಶಕ್ತಿಗಳನ್ನು ಬಹಳ ಬೇಗ ಆಕರ್ಷಿಸಿಕೊಳ್ಳತ್ತದೆ.ಹೀಗಾಗಿನೇ ಕನ್ನಡಿಯನ್ನ ಬಹಳ ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ.ಕನ್ನಡಿ ಅಳತೆ ಎಷ್ಟು ದೊಡ್ಡದಾಗಿರುತ್ತೋ ಅಷ್ಟು ಮಟ್ಟದಲ್ಲಿ ನಾವು ಶುಭಫಲಗಳನ್ನ ಪಡಿಯಬಹುದು.

ಅಂದಹಾಗೆ ಕನ್ನಡಿಯು ಪೂರ್ವ ದಿಕ್ಕಿನಲ್ಲಿದ್ರೆ ಉತ್ತಮ. ಈ ದಿಕ್ಕಿನಲ್ಲಿ ಕನ್ನಡಿಯನ್ನ ಉಪಯೋಗಿಸುವವರು ಆಯತಾಕಾರವಾಗಿರುವ ಕನ್ನಡಿಯನ್ನ ಆಯ್ಕೆಮಾಡಿಕೊಳ್ಳಬೇಕು. ಇಲ್ಲಂದ್ರೆ ಕಟ್ಟಿಗೆಯ ಚೌಕಟ್ಟಿಗೆ ಹೊಂದಿಸೋದು ಒಳ್ಳೆಯದು.ಸಾಧ್ಯವಿಲ್ಲದೆ ಹೋದಲ್ಲಿ ತಿಳಿ ಹಸಿರು ಬಣ್ಣದ ಪ್ಲಾಸ್ಟಿಕ್ ಚೌಕಟ್ಟಿನಲ್ಲಿ ಇದನ್ನು ಹೊಂದಿಸಬೇಕು.ಪೂರ್ವ ದಿಕ್ಕಿನಲ್ಲಿ ಕನ್ನಡಿಯನ್ನು ಇರಿಸಿದಾಗ ಆ ದಿಕ್ಕು ಬೆಳೆದಂತೆ ಕಾಣುತ್ತದೆ. ಯಾವುದೇ ಕಟ್ಟಡವಾದ್ರೂ ಪೂರ್ವ ದಿಕ್ಕು ಹೆಚ್ಚಾಗಿದ್ದಲ್ಲಿ ವಾಸ್ತು ಬಲವು ಹೆಚ್ಚುತ್ತದೆ. ಇದರಿಂದ ಕುಟುಂಬದ ಯಜಮಾನನ ಆರೋಗ್ಯದಲ್ಲಿ ಸ್ಥಿರತೆ ಕಂಡು ಬರುತ್ತದೆ.

 

ಹಾಗೇನೆ ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸಿದ್ರು ಹೆಚ್ಚಿನ ಪರಿಶ್ರಮವಿಲ್ಲದೆ ಕುಟುಂಬದವರ ಅಥವಾ ಆತ್ಮೀಯರ ಸಹಕಾರದಿಂದ ಯಶಸ್ವಿಯಾಗುತ್ತದೆ. ಕನ್ನಡಿಯನ್ನು ಪೂರ್ವ ದಿಕ್ಕಿನ ಗೋಡೆಯ ಮಧ್ಯಭಾಗದಲ್ಲಿ ಅಥವಾ ಪೂರ್ವ ಮತ್ತು ಉತ್ತರ ದಿಕ್ಕಿನ ಹತ್ತಿರ ಕನ್ನಡಿಯನ್ನು ಹಾಕಬಹುದು. ಇದರಿಂದ ದೇವಮೂಲೆ ಬೆಳೆದಂತೆ ಆಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಪೂರ್ವ ಮತ್ತು ದಕ್ಷಿಣ ಗೋಡೆಗೆ ಹತ್ತಿರವಾಗಿ ಕನ್ನಡಿಯನ್ನು ಹಾಕಬಾರದು.

 

ಇನ್ನು ವಿಶೇಷವಾಗಿ ದಕ್ಷಿಣ ದಿಕ್ಕಿನಲ್ಲಿ ಕನ್ನಡಿಯನ್ನ ಇಡಲೇಬಾರದು.ಆದ್ರೆ ಕೆಲವೊಂದು ಸಮಯದಲ್ಲಿ ಮಾತ್ರ ಕನ್ನಡಿಯನ್ನ ತ್ರಿಕೋನಕಾರದಲ್ಲಿ ಇಡಬಹುದಾಗಿದೆ.ಈ ದಿಕ್ಕಿಗೆ ಹಾಕಿರುವ ಕನ್ನಡಿಯಲ್ಲಿ ಯಾವುದೇ ಲೋಪ ಕಂಡುಬಂದ್ರು, ಮನೆಯ ಯಜಮಾನಿ ಹಾಗೂ ಯಜಮಾನನಿಗೆ ತೊಂದರೆಯಾಗುವ ಸಂಭವ್ಯಾ ಹೆಚ್ಚಾಗಿರುತ್ತದೆ.ಹೀಗಾಗಿನೇ ಎಚ್ಚರಿಕೆ ವಹಿಸೋದು ಉತ್ತಮ.ಅಲ್ಲದೆ ದಕ್ಷಿಣ ದಿಕ್ಕಿನಲ್ಲಿ ಹಾಕಿರುವ ಕನ್ನಡಿಯನ್ನು ನೋಡಿಕೊಂಡು ತಲೆ ಬಾಚಬಾರದು. ಮುಖ್ಯವಾಗಿ ಸ್ತ್ರೀಯರು ಈ ಕನ್ನಡಿಯನ್ನು ಬಳಸಲೇಬಾರದು. ಒಂದು ವೇಳೆ ಕನ್ನಡಿಯ ಹಿಂಭಾಗದಲ್ಲಿ ಹಸಿರು ಸಸ್ಯಗಳು, ಹರಿಯುವ ನದಿ, ಸರೋವರ, ಮಂಜುಗಡ್ಡೆ ಇರದ ಪರ್ವತಗಳ ಚಿತ್ರಗಳೇನಾದ್ರೂ ಇದ್ರೆ ಅದರಿಂದ ಅಧಿಕ ಪ್ರಮಾಣದಲ್ಲಿ ಶುಭಫಲಗಳನ್ನು ಪಡಿಯಬಹದು.

- Advertisement -

Latest Posts

Don't Miss