Tuesday, October 15, 2024

Latest Posts

Satish Jarkiholi : ಸಿಎಂ ಸ್ಥಾನದ ಕುರಿತು ಸತೀಶ್ ಹೇಳಿದ್ದೇನು – ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾದ್ರಾ ಸಾಹುಕಾರ್?

- Advertisement -

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರೆ. ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಆಗ್ತಾರೆ ಅನ್ನೋ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರ್ತಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್​ನ ಕೆಲವು ಸಚಿವರು ಕೂಡ ನಾನು ಸಿಎಂ ಆಕಾಂಕ್ಷಿ.. ನನಗೂ ಸಿಎಂ ಆಗೋ ಆಸೆಯಿದೆ ಎಂಬ ಹೇಳಿಕೆಗಳನ್ನು ಕೊಡ್ತಿದ್ದಾರೆ. ಅಲ್ಲದೇ, ಪರಮೇಶ್ವರ್ ಕೂಡ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲದಿದ್ರೂ ಮುಂದಿನ ಸಿಎಂ ಯಾರಾಗ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ದಿನ ಬೇಳಗಾದ್ರೆ ಸಾಕು ಸಿಎಂ ಸ್ಥಾನದ ಕುರಿತು ಹಲವು ಚರ್ಚೆ ನಡೀತಿದೆ. ಶಾಸಕರು ಹಾಗೂ ಸಚಿವರು ಕ್ಷಣಕ್ಕೊಂದು ಹೇಳಿಕೆಗಳನ್ನು ಕೊಡ್ತಿದ್ದಾರೆ. ಹೀಗಾಗಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿರೋ ಸತೀಶ್, ರಾಜ್ಯದಲ್ಲಿ ಯಾವುದೇ ಸಿಎಂ ಕೂಗು ಕೇಳುವ ಪ್ರಶ್ನೆ ಇಲ್ಲ. ಈಗಾಗಲೇ ಸಿಎಂ ಇದ್ದಾರೆ ಅವರನ್ನ ಇಳಿಸುವವರು ಯಾರು? ಪದೇ ಪದೇ ಸಿಎಂ ವಿಚಾರ ಚರ್ಚೆ ಮಾಡುವ ಅವಶ್ಯಕತೆಯಿಲ್ಲ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ. ಸಿಎಂ ಬದಲಾವಣೆ ಬಗ್ಗೆ ಕೇಳಬೇಡಿ ಪ್ಲೀಸ್ ಪ್ಲೀಸ್. ಜನ ನಮ್ಮನ್ನ ನೋಡಿ ಉಗಳುತ್ತಾರೆ ಬರೇ ಬರೇ ಸಿಎಂ ಎಂದರೇ ಇವರಗೇನೂ ಕೆಲಸ ಇಲ್ಲ ಎಂದು ಜನ ಉಗಿಯುತ್ತಾರೆ. ಪದೇ ಪದೇ ಈ ವಿಚಾರ ಕೇಳಬೇಡಿ ಎಂದಿದ್ದಾರೆ.

ಒಟ್ನಲ್ಲಿ 2011ರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಎದುರಾದ ಸಂದಿಗ್ಧ ಸ್ಥಿತಿ ಈಗ ರಾಜ್ಯ ರಾಜಕಾರಣದಲ್ಲಿ ಸೃಷ್ಟಿಯಾಗಿದೆ. ಮುಡಾ ಹಗರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯನವರು, ಹೈಕೋರ್ಟ್ ತೀರ್ಪು ಎದುರು ನೋಡುತ್ತಿದ್ದಾರೆ. ಒಂದು ವೇಳೆ ಸಿಎಂ ವಿರುದ್ಧ ತೀರ್ಪು ಬಂದರೆ, ಮುಂದಿನ ಸಿಎಂ ಬಗ್ಗೆ ಚರ್ಚೆ ಮಾಡಿದ್ರೆ ಅದಕ್ಕೊಂದು ಅರ್ಥವಿರುತ್ತೆ. ಖಾಲಿ ಇಲ್ಲದ ಸಿಎಂ ಸ್ಥಾನ ಕುರಿತು ಚರ್ಚೆ ಮಾಡ್ತಿರೋದು ಸಮಯ ವ್ಯರ್ಥವಷ್ಟೇ..

- Advertisement -

Latest Posts

Don't Miss