ಫ್ಲೈಟ್ ಲ್ಯಾಂಡಿಂಗ್ ಪ್ರಕರಣ ಏರ್ಪೋರ್ಟ್ ಡೈರೆಕ್ಟರ್ ಮಾಹಿತಿ: ಸಿಬ್ಬಂದಿ ವರ್ತನೆ ಬಗ್ಗೆ ಸಂಸ್ಥೆಗೆ ದೂರು..!

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಫ್ಲೈ 91 ವಿಮಾನ ಲ್ಯಾಂಡಿಂಗ್ ತೊಂದರೆ ವಿಚಾರಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣ ಪ್ರಭಾರಿ ನಿರ್ದೇಶಕ ಪ್ರವೀಣ ಜಾಧವ್ ಮಾಹಿತಿ ನೀಡಿದ್ದಾರೆ.

ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಿನ್ನೆ ಸಂಜೆ 4-30 ಕ್ಕೆ ಫ್ಲೈ 91 ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ನಿನ್ನೆ ಹವಾಮಾನ ವೈಪರಿತ್ಯದಿಂದ ಲ್ಯಾಂಡ್ ಆಗಲಿಲ್ಲ. ಒಂದು ಗಂಟೆ ಆಕಾಶದಲ್ಲಿ ಹಾರಾಡಿದೆ. ನಂತರ ಬೆಂಗಳೂರಿನಲ್ಲಿ ಲ್ಯಾಂಡ್ ಆಯ್ತು. ಫ್ಲೈ 91 ನಲ್ಲಿ 18 ಪ್ರಯಾಣಿಕರು ಇದ್ದರು. ಸಿಬ್ಬಂದಿ ವರ್ತನೆ ಬಗ್ಗೆ ಸಂಸ್ಥೆಗೆ ಮಾಹಿತಿ ನೀಡಲಾಗುವದು ಎಂದರು.

About The Author