ಅಹಮದಾಬಾದ್: ಏರ್ ಇಂಡಿಯಾದ ಪ್ಯಾಸೆಂಜರ್ ವಿಮಾನವು ಭಾರತೀಯ ವಾಯು ನಲೆಯಲ್ಲಿ ಲ್ಯಾಂಡ್ ಆದ ಘಟನೆ ನಡೆದಿದೆ.
ನಿನ್ನೆ ದೆಹಲಿಯಿಂದ ಮಸ್ಕಟ್ ನತ್ತ ತೆರಳುತ್ತಿದ್ದ ಏರ್ ಇಂಡಿಯಾ ಪ್ಯಾಸೆಂಜರ್ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಹೃದಯಾಘಾತವಾಗಿದೆ. ಇದನ್ನು ಕಂಡ ಏರ್ ಇಂಡಿಯಾ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡರು. ಮತ್ತೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಅಂತ ಅರಿತು, ಸಮೀಪವೇ ಇದ್ದ ಜಾಮ್ನಗರ್ ವಾಯುನೆಲೆಯಲ್ಲಿ ವಿಮಾನವನ್ನು ಲ್ಯಾಂಡ್ ಮಾಡಿ ಹೃದಯಾಘಾತಕ್ಕೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಯ್ತು.
ಇನ್ನು ಹೃದಾಯಾಘಾತಕ್ಕೊಳಗಾದವರು ಭಾರತ ಮೂಲದ 34ವರ್ಷದ ವ್ಯಕ್ತಿ ಅಂತ ತಿಳಿದು ಬಂದಿದೆ.
ಇನ್ನು ವಾಣಿಜ್ಯ ವಿಮಾನಗಳು ಭಾರತೀಯ ವಾಯುನೆಲೆಯಲ್ಲಿ ಲ್ಯಾಂಡ್ ಆಗಿದ್ದ ನಿರ್ದಶನ ತೀರಾ ಕಡಿಮೆ. ಸುರಕ್ಷತಾ ದೃಷ್ಟಿಯಿಂದ ವಾಣಿಜ್ಯ ವಿಮಾನಗಳಿಗೆ ವಾಯುನೆಲೆ ಪ್ರವೇಶಾವಕಾಶ ನಿಷೇಧಿಸಲಾಗಿದೆ.
ಯಾವಯಾವ ರಾಜ್ಯದಲ್ಲಿ ಯಾರು ಗೆಲ್ತಾರೆ ಅನ್ನೋ ಬಗ್ಗೆ ಕರ್ನಾಟಕ ಟಿವಿ ಸಮೀಕ್ಷಾ ವರದಿ ಕುರಿತ ವಿಡಿಯೋ ತಪ್ಪದೇ ನೋಡಿ.