ಮಗುವನ್ನು ಬುಟ್ಟಿಯಲ್ಲಿ ಹಿಡಿದು, ಪ್ರವಾಹ ಸ್ಥಳದಲ್ಲಿ ರಸ್ತೆ ದಾಟಿದ ತಂದೆ…

ದೇಶದ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದ್ದು, ಹಲವರ ಸ್ಥಿತಿ ಅಸ್ತವ್ಯಸ್ತವಾಗಿದೆ. ಮನೆಗೆ ನೀರು ನುಗ್ಗುವುದು, ಕೊಚ್ಚಿಹೋಗುವುದು, ಆಸ್ತಿಪಾಸ್ತಿಗೆ ಹಾನಿ, ಹೀಗೆ ಇತ್ಯಾದಿ ಸುದ್ದಿ ಪದೇ ಪದೇ ನಮ್ಮ ಕಿವಿಗೆ ಬೀಳುತ್ತಿದೆ. ಅದೇ ರೀತಿ ಗುವಾಹಟಿಯಲ್ಲೂ ಕೂಡ ಮಳೆರಾಯನ ಆರ್ಭಟ ಜೋರಾಗಿದ್ದು, ಪ್ರವಾಹ ಬಂದಿದೆ. ಈ ಪ್ರವಾಹದಿಂದ ತಪ್ಪಿಸಿಕೊಳ್ಳಲು ತಂದೆಯೋರ್ವ ತನ್ನ ಮಗುವನ್ನು ಬುಟ್ಟಿಯಲ್ಲಿ ಹೊತ್ತು ತರುವ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.

ಗುವಾಹಟಿಯಲ್ಲಿ ಪ್ರವಾಹಕ್ಕೆ ಸಿಲುಕಿ 80ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಅಲ್ಲಿನ ಜನರ ಕಷ್ಟಕಾರ್ಪಣ್ಯಗಳ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇದೆ. ಅಂಥಹುದರಲ್ಲಿ ನೆಟ್ಟಿಗರನ್ನ ಸೆಳೆದ ವೀಡಿಯೋವೊಂದು ಸಖತ್ ವೈರಲ್ ಆಗಿದೆ. ಪ್ರವಾಹದಲ್ಲಿ ಸಿಲುಕಿದ ತಂದೆ, ತನ್ನ ನವಜಾತ ಶಿಶುವನ್ನು ರಕ್ಷಿಸಲು, ಅದನ್ನು ಬುಟ್ಟಿಯಲ್ಲಿ ಹೊತ್ತು, ರಸ್ತೆ ದಾಟುವ ವೀಡಿಯೋ ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್ನು ಮಗು ಹೆದರಬಾರದು ಅಂತಾ, ಇವರೊಂದಿಗೆ ಇನ್ನು ಮೂವರು ಪುರುಷರು ಇದ್ದರು. ಅವರು ಮಗುವನ್ನ ನಗಿಸುತ್ತ, ರಸ್ತೆ ದಾಟುವುದಕ್ಕೆ ಸಹಾಯ ಮಾಡಿದರು. ಈ ವೀಡಿಯೋವನ್ನ ಒಬ್ಬರು ಟ್ವಿಟರ್‌ನಲ್ಲಿ ಅಪ್ಲೋಡ್ ಮಾಡಿದ್ದು, ಆ ಮಗುವನ್ನ ಕಲಿಯುಗದ ಶ್ರೀಕೃಷ್ಣ ಮತ್ತು ಅದನ್ನ ಹೊತ್ತು ತಂದ ತಂದೆ, ಕಲಿಯುಗದ ವಾಸುದೇವ ಅಂತಾ ಹೇಳಿದ್ದಾರೆ.

About The Author