Health tips:
ಪ್ರತಿಯೊಂದು ಆಹಾರಕ್ಕೂ ಸಪರೇಟ್ ಆಗಿ ಡೈ ಜೆಷನ್ ಪ್ರೊಸಸ್ ಎನ್ನುವುದು ಇರುತ್ತದೆ ,ಫುಡ್ ತಿನ್ನುವಾಗ ಯಾವ ಫುಡ್ ಅನ್ನು ಕಂಬೈನ್ ಮಾಡಬಾರದು ಎಂದು ಮೊದಲು ತಿಳಿದುಕೊಳ್ಳಬೇಕು .ವಿರುದ್ಧ ಆಹಾರ ಸೇವನೆಯಿಂದ ಆಹಾರವು ವಿಷವಾಗಿ ಯಾವುದಾದರೊಂದು ಕಾಯಿಲೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಅಲರ್ಜಿ, ತುರಿಕೆ, ಕುರು, ಬಾವು, ವಾತ, ಕರುಳು ಬೇನೆ ಕಾಡುತ್ತದೆ .ಇವು ಯಾವುದೇ ಔಷಧಿ ತೆಗೆದುಕೊಂಡರು ಕಡಿಮೆಯಾಗುವುದಿಲ್ಲ.ನಾವು ಯಾವುದೇ ಫುಡ್ ಅನ್ನು wrong ಫುಡ್ ಜೊತೆ ಕಂಬೈನ್ ಮಾಡಿದಾಗ , ಅದು ಎಷ್ಟೇ ಒಳ್ಳೆಯ ಫುಡ್ ಆದರೂ ಆದರಲ್ಲಿ ಸಿಗಬೇಕಾಗಿರುವಂತಹ ಪೋಷಕಾಂಶಗಳು ಸಿಗುವುದಿಲ್ಲ ಜೊತೆಗೆ ನಮ್ಮ ಹೆಲ್ತ್ ಮೇಲೆ ಪರಿಣಾಮ ಬೀರುತ್ತದೆ ,ಆದ ಕಾರಣ ಯಾವ ಫುಡ್ ಅನ್ನು ಯಾವರೀತಿ ಯಾವ ಟೈಂಗೆ ತಿನ್ನಬೇಕು ಎಂಬುದು ತಿಳಿದು ಕೊಳ್ಳೋಣ ಬನ್ನಿ.
ಮೀನು ಮಾಂಸ ಮೊಟ್ಟೆಯನ್ನು ತಿಂದಾಗ ಅದರ ಜೊತೆಗೆ ಹಾಲು, ಮೊಸರು, ಚೀಸ್ ,ಆಲುಗೆಡ್ಡೆ ,ಮೈದಾ ,ವನ್ನು ಮಿಕ್ಸ್ ಮಾಡಿ ತಿನ್ನಬಾರದು ರಾಂಗ್ ಫುಡ್ ಕಾಂಬಿನೇಶನ್ ನಿಂದ ದೇಹಕ್ಕೆ ಯಾವುದೇ ರೀತಿಯ ನ್ಯೂಟ್ರಿಯಂಟ್ ಗಳು ಸಿಗುವುದಿಲ್ಲ ಹಾಗು ಇದು ಬರಿ ಕೊಲೆಸ್ಟ್ರಾಲ್ ಹಾಗು ಶುಗರ್ ಲೆವೆಲ್ಸ್ ಅನ್ನು increase ಮಾಡುತ್ತದೆ ,ಹಾರ್ಟ್ ಡಿಸೀಸ್ ಗೆ ಇದು ಕಾರಣವಾಗುತ್ತದೆ ಹಾಗು ಗ್ಯಾಸ್ ಕೂಡ increase ಆಗುವ ಸಾದ್ಯತೆ ಇರುತ್ತದೆ ಹಾಗು ಮೊಟ್ಟೆ ಮತ್ತು ಚಹಾವನ್ನು ಜೊತೆಯಲ್ಲಿ ಸೇವಿಸಿದರೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು ಸಲಾಡ್ ಜೊತೆ ಕರ್ಡ್ ಅನ್ನು ಮಿಕ್ಸ್ ಮಾಡಿ ತಿನ್ನಬೇಡಿ .
ಸಕ್ಕರೆ ಮತ್ತು ಮೊಟ್ಟೆ ಎರಡರಲ್ಲೂ ಅಮೈನೊ ಆಸಿಡ್ ಇರುತ್ತದೆ. ಇದರ ಅಧಿಕ ಪ್ರಮಾಣದ ಸೇವನೆಯಿನ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಎದುರಾಗಬಹುದು. ಈ ಕಾರಣದಿಂದ ಸಕ್ಕರೆಯನ್ನು ಮೊಟ್ಟೆಯ ಜೊತೆ ತಿನ್ನಬಾರದು. ಮೊಟ್ಟೆ ಹಾಗೂ ಪನ್ನೀರು ಎರಡನ್ನೂ ಒಟ್ಟಿಗೆ ಸೇವನೆ ಮಾಡುವುದರಿಂದ, ಎರಡರಲ್ಲಿ ಇರುವ ಪ್ರೋಟೀನ್ ಅಂಶಗಳು ಅಧಿಕವಾಗಿ ನಮ್ಮ ದೇಹ ಸೇರಿ ಜೀರ್ಣಕ್ರಿಯೆಗೆ ತೊಂದರೆ ಮಾಡುತ್ತದೆ..
ಮೊಟ್ಟೆ ತಿಂದ ಕೂಡಲೇ ಬಾಳೆಹಣ್ಣು ತಿನ್ನಲೇ ಬಾರದು ಆಗು , ಬೇಯಿಸಿದ ಮೊಟ್ಟೆ ಮತ್ತು ಮೀನನ್ನು ಒಟ್ಟಿಗೆ ತಿನ್ನಬಾರದು. ಇದು ಚರ್ಮದ ಅಲರ್ಜಿಗೆ ಕಾರಣವಾಗಬಹುದು. ಮುಖ್ಯವಾಗಿ ಮೊಸರು ವಡೆ ಎಂದಿಗೂ ಬೆರೆಸಿ ತಿನ್ನಬಾರದು ಮೊಸರು ವಡೆ ತಿಂದರೆ ನಿಮ್ಮ ಬಿಪಿ ಜಾಸ್ತಿ ಆಗುತ್ತದೆ ,ಮಲಬದ್ದತೆ ಸಮಸ್ಯೆ ಎದುರಾಗಬಹುದು.
ಹಾಲಿನ ಜೊತೆ ಯಾವುದೇ ರೀತಿಯ ಸಿಟ್ರಿಕ್ ಆಸಿಡ್ ಇರುವ ಆಹಾರವನ್ನು ಸೇವಿಸ ಬಾರದು ,nonveg ಗೆ ಹಾಲನ್ನು ಮಿಕ್ಸ್ ಮಾಡಬಾರದು. ಹಾಗು onion ಮತ್ತು ಮಿಲ್ಕ್ products ಅನ್ನು ಮಿಕ್ಸ್ ಮಾಡಿ ತಿನ್ನಬಾರದು ಇದು ಸ್ಕಿನ್ ಪ್ರಾಬ್ಲಮ್ ಗೆ ಕರಣವಾಗುತದೆ ,ಸ್ಕಿನ್ ಅಲೆರ್ಜಿ, ಸೋರಿಯಾಸಿಸ್ ,ಸ್ಕಿನ್ ರಾಷಸ್ ಗೆ ಕಾರಣವಾಗುತ್ತದೆ
ಜೇನು ತುಪ್ಪವನ್ನು ಯಾವುದೇ ಕಾರಣಕ್ಕೂ ತಾಮ್ರದ ಪಾತ್ರೆಯಲ್ಲಿ ಇಡಬೇಡಿ ಯಾಕೆಂದರೆ ಇದು ತಾಮ್ರದ ಜೊತೆ ರಿಯಾಕ್ಟ್ ಮಾಡುತ್ತದೆ ಹಾಗು ಇದನ್ನು ವಿಷ ಎಂದು ಪರಿಗಣಿಸುತ್ತಾರೆ .ತುಪ್ಪ ಹಾಗು ಜೇನುತುಪ್ಪವನ್ನು ಒಟ್ಟಿಗೆ ಸೇರಿಸಿ ತಿನ್ನಬಾರದು ಹೀಗೆ ಮಾಡಿದರೆ ಇದು ಫುಡ್ poison ಆಗಿ ಹೊಟ್ಟೆಯಲ್ಲಿ ಸಮಸ್ಯೆಗಳು ಕಾಣಿಸಿಕೊಳುತ್ತದೆ .ಹಾಗೆಯೆ ಜೇನು ತುಪ್ಪವನ್ನು ಬಿಸಿ ಪದಾರ್ಥದಲ್ಲಿ ಮಿಕ್ಸ್ ಮಾಡಿ ತಿನ್ನಬಾರದು . ಹಲಸಿನ ಹಣ್ಣನ್ನು ತಿಂದ ನಂತರ ಜೇನುತುಪ್ಪವನ್ನು ಸೇವಿಸಿದರೆ, ಅದು ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ, ಹಲಸಿನ ಹಣ್ಣನ್ನು ಜೇನು ತುಪ್ಪವನ್ನು ಒಟ್ಟಿಗೆ ಸೇವಿಸಬಾರದು .
ಹಲಸು ತಿಂದ ತಕ್ಷಣ ಹಾಲನ್ನು ಸೇವಿಸಬಾರದು. ಅಷ್ಟೇ ಅಲ್ಲ ಹಾಲು ಕುಡಿದ ನಂತರವೂ ಹಲಸಿನ ಹಣ್ಣನ್ನು ಸೇವಿಸಬಾರದು. ಇದರಿಂದಾಗಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಾಗಬಹುದು. ಇದು ತುರಿಕೆ, ಬಿಳಿ ಚುಕ್ಕೆಗಳು, ಮೊಡವೆ ಇತ್ಯಾದಿ ಸಮಸ್ಯೆಗೆ ಕಾರಣವಾಗಬಹುದು. ಊಟದ ಬಳಿಕ ಯಾವುದೇ ರೀತಿಯಾದ ಜ್ಯೂಸು ,ಐಸ್ ಕ್ರೀಮ್ ,ಟಿ ಕಾಫಿ ಸೇವಿಸ ಬಾರದು ಹೀಗೆ ಮಾಡಿದರೆ ನೀವು ಸೇವಿಸಿರುವ ಆಹಾರದ ಪೋಷಕಾಂಶಗಳು ನಿಮ್ಮ ದೇಹಕ್ಕೆ ಸಿಗದೇ ವ್ಯರ್ಥ್ಯ ವಾಗುತ್ತದೆ .
ಚಳಿಗಾಲ ಬಂತು ಹುಷಾರ್..! ಇನ್ನು ಇದನ್ನು ತಿನ್ನುವುದನ್ನು ಕಡಿಮೆ ಮಾಡಿ…!


