ತಾವು ಸಾಕಿದ ನಾಯಿಯ ಮೇಲೆ ತಮಗೆಷ್ಟು ಪ್ರೀತಿ ಇರತ್ತೆ ಅಂತಾ. ಅದನ್ನ ಸಾಕಿದವರಿಗಷ್ಟೇ ಗೊತ್ತಿರುತ್ತದೆ. ಕೆಲವರು, ಒಂದು ನಾಯಿ ಸತ್ತಿದ್ದಕ್ಕೆ ಎಷ್ಟು ಅಳ್ತಾರಪ್ಪಾ. ಇನ್ನೊಂದು ಹೊಸಾ ನಾಯಿ ಕೊಂಡುಕೊಳ್ಳೋದಪ್ಪಾ, ಅದರಲ್ಲಿ ಅಳೋದೇನಿದೆ ಅಂತಾ ಕೇಳ್ತಾರೆ. ಆದ್ರೆ ಸಾಕು ನಾಯಿ, ಬರೀ ಪ್ರಾಣಿಯಾಗಿ ಅಲ್ಲ, ಆ ಮನೆಯ ಮಗುವಿನಂತೆ ಇರತ್ತೆ. ಹಾಗಾಗಿ ನಾಯಿ ಸಾಕಿದವರಿಗಷ್ಟೇ, ಅದರ ಬೆಲೆ ಗೊತ್ತಾಗೋದು. ಇಂಥ ಮುದ್ದಿನಿಂದ ಸಾಕಿದ ನಾಯಿ ಆರೋಗ್ಯವಾಗಿರಬೇಕು ಅಂದ್ರೆ ನೀವು ಅದಕ್ಕೆ ಕೆಲ ಆಹಾರಗಳನ್ನ ನೀಡಬಾರದು. ಹಾಗಾದ್ರೆ ಎಂಥ ಆಹಾರವನ್ನು ನೀವು ನೀಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಬೆಣ್ಣೆ ಹಣ್ಣು ಅಂದ್ರೆ ಬಟರ್ ಫ್ರೂಟ್. ಬೆಣ್ಣೆ ಹಣ್ಣನ್ನ ನಾವು ತಿನ್ನೋದೇ ಹೆಚ್ಚು, ಇನ್ನು ನಾಯಿಗಳಿಗೆ ಹಾಕಕ್ಕಾಗತ್ತಾ ಅಂತಾ ನೀವು ಕೇಳ್ಬಹುದು. ಅದು ನಿಜಾ. ಆದ್ರೆ ಯಾವಾಗಾದದ್ರೂ ಮನೆಯಲ್ಲಿ ಹಣ್ಣು ಹಾಳಾದ್ರೆ, ಅಥವಾ ಅದರಿಂದ ಮಾಡಿದ ಜ್ಯೂಸ್, ಮಿಲ್ಕ್‌ಶೇಕ್ ಮಿಕ್ಕಿದ್ರೆ, ಅದನ್ನ ನಾಯಿಗೆ ಹಾಕಲೇಬೇಡಿ. ಯಾಕಂದ್ರೆ ಬೆಣ್ಣೆ ಹಣ್ಣಿನ ಸೇವನೆಯಿಂದ ನಾಯಿಯ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚು.
ಎರಡನೇಯದಾಗಿ ಚಾಕೋಲೇಟ್ಸ್. ಚಾಕೋಲೇಟ್ಸ್‌ನಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿರುತ್ತದೆ. ಮನುಷ್ಯರಲ್ಲಿ ಅದನ್ನ ಜೀರ್ಣಿಸಿಕೊಳ್ಳುವ ಶಕ್ತಿ ಹೆಚ್ಚಿರುತ್ತದೆ. ಆದ್ರೆ ನಾಯಿಗಳಲ್ಲಿ ಚಾಕೋಲೇಟ್ ತಿಂದು ಅರಗಿಸಿಕೊಳ್ಳುವ ಶಕ್ತಿ ಹೆಚ್ಚಾಗಿ ಇರುವುದಿಲ್ಲ. ಹಾಗಾಗಿ ನಾಯಿಗಳಿಗೆ ಚಾಕೋಲೇಟ್ ಕೊಡಬಾರದು.
ಮೂರನೇಯದಾಗಿ ದ್ರಾಕ್ಷಿ ಹಣ್ಣು ಅಥವಾ ಒಣ ದ್ರಾಕ್ಷಿ ಮತ್ತು ಹಸಿ ತರಕಾರಿ. ಹಸಿ ತರಕಾರಿಯನ್ನ ನಾಯಿಗಳು ತಿನ್ನೋದಿಲ್ಲಾ. ಆದ್ರೆ ನೀವು ಅನ್ನ ಅಥವಾ ಬೇರೆ ಯಾವುದಾದರೂ ಪದಾರ್ಥ ಕೊಡುವಾಗ ಅದರಲ್ಲಿ ಹಸಿ ತರಕಾರಿ ಇರುತ್ತೆ. ಅದರಲ್ಲೂ ಹಸಿ ಈರುಳ್ಳಿಯನ್ನ ನಾಯಿಗೆ ತಿನ್ನಲು ನೀಡಬಾರದು. ಒಣ ದ್ರಾಕ್ಷಿ ನೀಡುವುದು ಕೂಡ ಉತ್ತಮವಲ್ಲ.
ನಾಲ್ಕನೇಯದಾಗಿ, ಚೂಯಿಂಗಮ್. ಚೂಯಿಂಗಮ್‌ನ್ನ ಯಾವುದೇ ಕಾರಣಕ್ಕೂ ನಾಯಿಗೆ ನೀಡಬೇಡಿ. ಇದು ಅದರ ಜೀವಕ್ಕೆ ಅಪಾಯ ತರಬಹುದು. ಹಸಿ ಹಿಟ್ಟು, ಕಾಫಿಯನ್ನ ಕೂಡ ನಾಯಿಗೆ ಕೊಡುವುದು ಒಳ್ಳೆಯದಲ್ಲ. ಹೆಚ್ಚು ಉಪ್ಪಿನ ಪದಾರ್ಥ ಕೂಡ ನೀಡಬಾರದು. ನೀವು ನೀಡಿದ ಆಹಾರ ನಾಯಿಗೆ ಜೀರ್ಣಿಸಿಕೊಳ್ಳಲು ಆಗದಿದ್ದಲ್ಲಿ, ಅದು ವಾಂತಿ ಮಾಡಿಕೊಳ್ಳುತ್ತದೆ.