ಹಾಸನ: ನಗರದ ಸರ್ಕಾರಿ ಆಸ್ಪತ್ರೆ ಎದುರು ಹುಡುಗಿಯನ್ನು ಚುಡಾಯಿಸಿದಕ್ಕೆ ಚಪ್ಪಲಿಯಿಂದ ಹೊಡೆದಿರುವ ಘಟನೆ ನಡೆದಿದೆ.
ಯುವತಿಯನ್ನು ರೇಗಿಸಿದಲ್ಲದೇ ಯುವತಿ ಮೇಲೆ ಕೈ ಮಾಡಿದ ಯುವಕನಿಗೆ, ನಡು ರಸ್ತೆಯಲ್ಲಿ ಯುವತಿಯೇ ಚಪ್ಪಲಿಯಿಂದ ಹೊಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ, ಪುಂಡರ ಹಾವಳಿ ಹೆಚ್ಚಾಗಿದ್ದು, ಹಗಲಿನಲ್ಲಿಯೇ ಹೆಣ್ಣು ಮಕ್ಕಳು ರಸ್ತೆಯಲ್ಲಿ ಓಡಾಡುವುದು ಕಷ್ಟಕರವಾಗಿದೆ.
ಕಾಲೇಜು ಹುಡ್ಗಿರನ್ನು ರೇಗಿಸುವುದು ಕಿಚಾಯಿಸುವುದು ನಗರದಲ್ಲಿ ಹೆಚ್ಚಾಗಿದ್ದು, ಈ ಹಿಂದೆಯೂ ಕೂಡ ಹಳೆ ಬಸ್ ನಿಲ್ದಾಣದ ಬಳಿ ಒಂದು ಘಟನೆ ನಡೆದಿತ್ತು. ಆದರೆ ಇದೀಗ ಮತ್ತೆ ನಗರದಲ್ಲಿ ಇಂತಹ ಕೃತ್ಯಗಳು ಮುಂದುವರೆದಿದ್ದು, ಸಾರ್ವಜನಿಕರಲ್ಲಿ ಅಸಮಾಧಾನ ತಂದಿದೆ. ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಲ್ಲಿ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಯುವಕನನ್ನು ನಗರ ಠಾಣೆಗೆ ಕರೆದೊಯ್ದು, ನಂತರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಚುನಾವಣಾ ಪ್ರಚಾರಕ್ಕೆ ಬಂದಿದ್ದ ಶಾಸಕರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು