Political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ,
ಸಂಸದ್ ಭವನದಲ್ಲಿ ಟಿಯರ್ ಗ್ಯಾಸ್ ಸಿಂಪಡಿಸಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು.
ಭಯೋತ್ಪಾದಕರ ಕಣ್ಣು ಭಾರತದ ಮೇಲಿದೆ. ಹಿಂದಿನಿಂದಲೂ ವಿದೇಶಿ ಶಕ್ತಿಗಳು, ಭಯೋತ್ಪಾದಕ ಶಕ್ತಿಗಳನ್ನು ಕೇಂದ್ರ ಸರ್ಕಾರ ಎದುರಿಸಿದೆ. ಮೋದಿ ಅಮಿತ್ ಶಾ ಭಯೋತ್ಪಾದಕರನ್ನು ಎದುರಿಸಲು ಯಶಸ್ವಿಯಾಗಿದ್ದಾರೆ. ಎಲ್ಲಾ ದೇಶಗಳು ಭಾರತದ ಜೊತೆ ಹೊಂದಾಣಿಕೆಯತ್ತ ಬರುತ್ತಿವೆ. ಭಯೋತ್ಪಾದಕ ಸಂಘಟನೆಗಳು ದೇಶದಲ್ಲಿ ಭಯ ಹುಟ್ಟಿಸೋ ಕೆಲಸ ಮಾಡ್ತಿವೆ. ಬೆಂಗಳೂರಲ್ಲಿ ಶಾಲೆಗಳಲ್ಲಿ ಬಾಂಬ್ ಇಡ್ತೀನಿ ಅಂತಾ ಹೆದರಿಕೆ ಹಾಕಿದ್ರು. ಇವತ್ತು ಪಾರ್ಲಿಮೆಂಟ್ ಗೆ ನುಗ್ಗಿರೋದು ದುರ್ದೈವ. ಮೋದಿ ಅವರಿಗೆ ಹೆಚ್ಚಿನ ಬೆಂಬಲ ಸಿಗೋ ಕಾರಣಕ್ಕೆ ಕೆಲ ಸಂಘಟನೆಗಳು ಇಂತಹ ದುಷ್ಕ್ರತ್ಯ ನಡೆಸಲು ಪ್ಲ್ಯಾನ್ ಮಾಡಿವೆ. ಪಾಸ್ ಕೊಡೋದು ನಂಬಿಕೆಯ ಪ್ರಶ್ನೆ. ಬೇಕಾದವರು ಅಂತ ಪಾಸ್ ಕೊಟ್ಟಿರಬಹುದು. ಇದನ್ನು ಕೂಲಕುಂಷವಾಗಿ ತನಿಖೆ ಮಾಡ್ತಾರೆ. ಯಾರೆ ಇದ್ರು ಕಠಿಣ ಕ್ರಮ ಕೈಗೊಳ್ತಾರೆ ಎಂದು ಈಶ್ವರಪ್ಪ ಹೇಳಿದ್ದಾರೆ..
ಇನ್ನು ಬಿಜೆಪಿಯಲ್ಲಿ ಅಸಮಾಧಾನ ಇರುವ ಬಗ್ಗೆ ಮಾತನಾಡಿದ ಈಶ್ವರಪ್ಪನವರು, ಬಿಜೆಪಿಯಲ್ಲಿ ಅಸಮಾಧಾನ ಇದೆ. ಮೂರ್ನಾಲ್ಕು ಜನಕ್ಕೆ ಅಸಮಾಧಾನ ಇದೆ. ಅದಂತೂ ಸತ್ಯ, ಆದ್ರೆ ಅವರು ಪಕ್ಷನಿಷ್ಠರು. ಯಾವುದೇ ಗೊಂದಲ ಇಲ್ಲ, ಆದ್ರೆ ಮೂರ್ನಾಲ್ಕು ಜನರಲ್ಲಿ ಅಸಮಾಧಾನ ಇದೆ. ಅಸಮಾಧಾನ ಇದೆ ಅನ್ನೋದನ್ನ ಒಪ್ಕೋತೀನಿ ಎಂದು ಹೇಳಿದ್ದಾರೆ.
ಯತ್ನಾಳ ಒಂಟಿ ಸಲಗ ಅಂತಾ ಹೇಳಬಹುದು. ಆದ್ರೆ ಪಕ್ಷ ಬಿಟ್ಟು ಹೋಗಿಲ್ಲ. ಮನೆಯಲ್ಲಿ ತುಂಟ ಮಕ್ಕಳ ಇರ್ತಾರೆ, ಬುದ್ದಿ ಹೇಳ್ತೀವಿ. ತಿದ್ದಿಕೊಳ್ಳದೆ ಹೋದ್ರೆ ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ಲತ್ತಿ ಪೆಟ್ಟು ಅಂತಾರಲ್ಲ ಹಾಗೆ. ಅವರನ್ನು ಸರಿ ಮಾಡೋ ಕೆಲಸ ನಡೀತಿದೆ. ಅವರು ಹೇಳಿದ್ದನ್ನೆ ಹೇಳ್ತಾರೆ ಅಂತಾ ಹಿರಿಯರು ಸುಮ್ಮನೆ ಆಗ್ತಾರೆ. ಬಹಿರಂಗವಾಗಿ ಮಾತಾಡ್ತಾರೆ ಅಂದ್ರೆ ದೊಡ್ಡವರಾಗ್ತಾರೆ ಅಂತಾ ಅವರು ತಿಳಕೊಂಡಿರಬಹುದು ಬಿಜೆಪಿ ಹೈಕಮಾಂಡ್ ಗೆ ಕರ್ನಾಟಕದ ಬಿಜೆಪಿ ಬಗ್ಗೆ ಬೇಸರ ಇದೆ. ಇದಂತೂ ಸತ್ಯ.. ನಾವು ಇದನ್ನು ಹೈಕಮಾಂಡ್‌ಗೆ ಕೇಳಬೇಕು ಅಂದುಕೊಂಡಿದ್ದೇವೆ. ಪಕ್ಷದಲ್ಲಿ ಶಿಸ್ತು ಸತ್ತು ಹೋಗಿಲ್ಲ, ಮೂರ್ನಾಲ್ಕು ಜನರ ಅಸಮಾಧಾನ ಪಕ್ಷದ ಮೇಲೆ ಪರಿಣಾಮ ಬೀರಲ್ಲ ಎಂದು ಸ್ವಪಕ್ಷದ ಪರ ಬ್ಯಾಟ್ ಬೀಸಿದ್ದಾರೆ.
ಇನ್ನು ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ, ಪ್ರಿಯಾಂಕ್ ಖರ್ಗೆ ಬಚ್ಚಾ, ಅವಕಾಶ ಸಿಕ್ರೆ ಸಿಎಮ್ ಆಗ್ತೀನಿ ಅಂತಾನೆ. ಕಾಂಗ್ರೆಸ್‌ನಲ್ಲಿ ಬಹಳಷ್ಟು ಜನರು ಸಿಎಮ್ ಆಗಲು ಹೊರಟಿದ್ದಾರೆ. ಅಂಬೇಡ್ಕರ್ ಸಂವಿಧಾನದಲ್ಲಿ ಒಬ್ಬರಿಗೆ ಸಿಎಮ್ ಆಗಲು ಅವಕಾಶ ಕೊಟ್ರು. ಕಾಂಗ್ರೆಸ್‌ನಲ್ಲಿ ಎಲ್ಲರೂ ನಾನೇ ಅಂಬೇಡ್ಕರ್ ಅಂತಾರೆ. ಜಗದೀಶ್ ಶೆಟ್ಟರ್ ತಂದೆ ಜನಸಂಘದಲ್ಲಿ ಇದ್ದವರು, ಅವರ ಆತ್ಮಕ್ಕೆ ಶಾಂತಿ ಸಿಗಬೇಕು. ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನ ಮಾಡ್ತೇನೆ ಎಂದು ಹೇಳಿದ್ದಾರೆ.
ಮುಸ್ಲೀಮರಲ್ಲಿ ಅನೇಕರು ರಾಷ್ಟ್ರಭಕ್ತರು ಇದ್ದಾರೆ. ಎಲ್ಲಾ ಮುಸ್ಲೀಮರು ದೇಶದ್ರೋಹಿಗಳಲ್ಲ, ನಾವು ಮುಸ್ಲೀಮ್ ವಿರೋಧಿಯಲ್ಲ. ಜಮೀರ್ ಅಂತವರು ಧರ್ಮಗಳ ನಡುವೆ ಜಗಳ ಹಚ್ಚುತ್ತಾರೆ ಕುಮಾರಸ್ವಾಮಿ ಬ್ರದರ್ ಅನ್ನೋದು ಸ್ವಭಾವತಃ ಆದರೆ ಜಮೀರ್ ಅಹ್ಮದ್ ಬ್ರದರ್ ಅನ್ನೋದು ದುರುದ್ದೇಶದಿಂದ ಎಂದು ಜಮೀರ್ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಮುಸ್ಲೀಮರ ಜೊತೆಗೆ ನಿಲ್ತೀನಿ ಅನ್ನೋದಲ್ಲ, ಸಿದ್ದರಾಮಯ್ಯರೇ ಮುಸಲ್ಮಾನ. ಜಮೀರ ಅಹಮ್ಮದ್, ಡಿ.ಕೆ.ಶಿ ಮುಸಲ್ಮಾನರನ್ನ ಮೈ ಬ್ರದರ್ ಅಂತಾ ಕರೆದರು. ಮುಸ್ಲಿಂರನ್ನ ತೃಪ್ತಿ ಪಡಿಸಲು ಯಾವ ಮಟ್ಟಕ್ಕೆ ಹೋಗಲೂ ಅವರು ಸಿದ್ದರಿದ್ದಾರೆ. ಸಿದ್ದರಾಮಯ್ಯರದ್ದು ಸ್ವಾರ್ಥ, ಅಧಿಕಾರಕ್ಕಾಗಿ ರಾಷ್ಟದ್ರೋಹಿಯನ್ನು ಬ್ರದರ್ ಅಂತಾ ಕರೀತಾರೆ. ಸಿದ್ದರಾಮಯ್ಯ ಹಿಂದೆ ಹೀಗೆ ಮಾಡಿ ಅಧಿಕಾರ ಕಳೆದುಕೊಂಡರು. ಮುಸ್ಲೀಮರು ಮಾತ್ರ ಗತಿ ಎಂದು 10 ಸಾವಿರ ಕೋಟಿ ಕೊಡ್ತೀನಿ ಅಂದ್ರು. ಜಾತಿ ಒಡೆಯೋದ್ರಲ್ಲಿ ಸಿದ್ದರಾಮಯ್ಯ ನಿಸ್ಸೀಮರು. ಹರಿಪ್ರಸಾದ್ ನಮ್ಮ ಸಮಾಜ ಒಡೀತೀದಾರೆ ಅಂತಿದ್ದಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಜಾತಿ ಒಡೆಯೋದ್ರಲ್ಲಿ ಎಕ್ಸ್‌ಪರ್ಟ್ ಎಂದು ಈಶ್ವರಪ್ಪ ಹೇಳಿದ್ದಾರೆ.
ಅಯ್ಯಪ್ಪಸ್ವಾಮಿ ದರ್ಶನವಿಲ್ಲದೇ ತೆರಳಿದ ಮಾಲಾಧಾರಿಗಳು: ಭಕ್ತರ ನಿರ್ವಹಣೆಯಲ್ಲಿ ಕೇರಳ ಸರ್ಕಾರ ವಿಫಲ
ಹೆಜ್ಜಾಲ-ಚಾಮರಾಜನಗರ ಹೊಸ ರೈಲು ಮಾರ್ಗದ ಸದ್ಯದ ವಸ್ತುಸ್ಥಿತಿಯ ಬಗ್ಗೆ ಪ್ರಶ್ನಿಸಿದ ಸಂಸದೆ ಸುಮಲತಾ
ಸಂಸತ್ತಿನಲ್ಲಿ ಭದ್ರತಾ ಲೋಪ: ಲೋಕಸಭಾ ಕಲಾಪ ನಡೆಯುವಾಗಲೇ ಕಲರ್ ಬಾಂಬ್ ಸಿಡಿಸಿದ ಅನಾಮಿಕ