Shabarimalai: ಪ್ರತೀವರ್ಷ ಪುರುಷ ಮಾಲಾಧಾರಿಗಳು , ಸಂಕ್ರಾಂತಿ ಹೊತ್ತಿಗೆ ಶಬರಿಮಲೆಗೆ ಹೋಗಿ, ಅಯ್ಯಪ್ಪನ ದರ್ಶನ ಪಡೆಯುತ್ತಿದ್ದರು. ಹೆಣ್ಣು ಮಕ್ಕಳು ಋತುಮತಿಯಾಗುವ ಕಾರಣಕ್ಕೆ ಅವರಿಗೆ ಶಬರಿಮಲೆಗೆ ಪ್ರವೇಶವಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೆ ಇತಿಹಾಸದಲ್ಲೇ ಮೊದಲ ಬಾರಿಗೆ, ಮಂಗಳಮುಖಿಯೊಬ್ಬಳು, ಅಯ್ಯಪ್ಪನ ದರ್ಶನ ಮಾಡಿದ್ದಾರೆ.
ತೆಲಂಗಾಣದ ನಲ್ಗೊಂಡ ಜಿಲ್ಲೆಯ ದೇವಸ್ಥಾನವೊಂದರಲ್ಲಿ ನಡೆಯುವ ಪೂಜೆಯಲ್ಲಿ ನಿಶಾ ಎಂಬ ಮಂಗಳಮುಖಿ ಪ್ರತೀ ವರ್ಷ ಜೋಗತಿಯಾಗಿ ಭಾಗವಹಿಸುತ್ತಾರೆ. ಅದೇ ರೀತಿ ಈ ಬಾರಿ ನಿಶಾ ಅಯ್ಯಪ್ಪ ಸ್ವಾಮಿಯ ದರ್ಶನವೂ ಮಾಡಿದ್ದಾರೆ. ಆಕೆ ಮಂಗಳಮುಖಿ ಎಂಬ ಗುರುತಿನ ಚೀಟಿ ಆಧಾರದ ಮೇಲೆ, ಸರ್ಕಾರವೇ ಆಕೆಗೆ ಅಯ್ಯಪ್ಪನ ದರ್ಶನ ಮಾಡಲು ಅನುಮತಿ ನೀಡಿರುವುದು ವಿಶೇಷ.
ಈ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ ಮಂಗಳಮುಖಿ ಅಯ್ಯಪ್ಪನ ದರ್ಶನ ಮಾಡಿದ್ದಾರೆ. ಅಲ್ಲದೇ, ನಿಶಾ ಅಯ್ಯಪ್ಪನ ದರ್ಶನಕ್ಕೆ ಅವಕಾಶ ಕೊಟ್ಟ ಕೇರಳ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಇನ್ನು ಹಲವರು ಇದೊಂದು ಉತ್ತಮ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಅಯೋಧ್ಯಾ ರಾಮಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್‌ಗೆ ಅಭಿನಂದನೆಗಳ ಮಹಾಪೂರ..
‘ಹುಬ್ಬಳ್ಳಿಯ ರಾಮ ಜನ್ಮಭೂಮಿ ಹೋರಾಟ ಬಂಧನ ಮತ್ತು ಅಯೋಧ್ಯೆಗೂ ಯಾವುದೇ ಸಂಬಂಧವಿಲ್ಲ’