Koppala News: ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಪುರಾಣ ಪ್ರಸಿದ್ದ ಆಂಜನೇಯ ದೇವಸ್ಥಾನವಿದೆ. ಆದರೆ ಈ ದೇವಸ್ಥಾನದಲ್ಲಿ ದೀಪಾವಳಿ ಸಮಯದಲ್ಲಿಯೇ ಎಲ್ಲಿಯೂ ಕೂಡ ದೀಪಗಳನ್ನು ಹಚ್ಚದೆ ಇರುವುದು ಕೆಲ ವಿದೇಶಿಗರು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಂದು ಧರ್ಮವನ್ನು ಸ್ವೀಕರಿಸಿ ರಷ್ಯಾದಿಂದ ಬಂದಿದ್ದ ಮೀನಾಕ್ಷಿ ಗಿರಿ, ಸರಸ್ವತಿ ಮತ್ತು ಗಂಗಾ ಅನ್ನೋರು ಎರಡು ದಿನದ ಹಿಂದೆ ಆಂಜನಾದ್ರಿ ಬೆಟ್ಟಕ್ಕೆ ಬಂದಿದ್ದರು. ಇಡೀ ದೇಶ ದೀಪಾವಳಿ ಹಬ್ಬದ ಸಂಭ್ರಮದಲ್ಲಿದೆ. ಆದರೆ ಅಂಜನೇಯನ ದೇವಸ್ಥಾನದಲ್ಲಿ ಎಲ್ಲಿಯೂ ದೀಪಗಳು ಕಾಣಲಿಲ್ಲ. ಮುಜರಾಯಿ ಇಲಾಖೆಯಡಿಯಲ್ಲಿರುವ ದೇವಸ್ಥಾನದಲ್ಲಿ ಈ ರೀತಿ ಅವ್ಯವಸ್ಥೆ ಸರಿಯಲ್ಲ ಅಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ರಷ್ಯಾ ಪ್ರಜೆಗಳ ವಿಡಿಯೋ ಇಂದು ಎಲ್ಲಡೆ ವೈರಲ್ ಆಗಿದೆ.
ಭಾರತ ವಿಶ್ವಕಪ್ ಗೆದ್ದರೆ 100 ಕೋಟಿ ರೂ ಬಂಪರ್ ಬಹುಮಾನ!: ಆಸ್ಟ್ರೋಟಾಕ್ ಸಿಇಒ ಘೋಷಣೆ
ಇಸ್ರೇಲ್ ಪ್ರಧಾನಿಯನ್ನು ಗುಂಡಿಕ್ಕಿ ಕೊಲ್ಲಬೇಕು ಎಂದ ಕಾಂಗ್ರೆಸ್ ಸಂಸದ.
ತಲೆತಲಾಂತರದಿಂದ ಮಠದ ಭಕ್ತರಾದ ನಾವು ಮುರುಘಾ ಶರಣರ ಜೊತೆ ಇರುತ್ತೇವೆ; ಶಾಸಕ ವಿರೇಂದ್ರ ಪಪ್ಪಿ




