Hubballi News: ಹುಬ್ಬಳ್ಳಿ: ಸಂಚಾರಿ ಕುರಿಗಾಯಿಗಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಹಣಕ್ಕೆ ಬೇಡಿಕೆ ಇಡುವುದರ ಜೊತೆಗೆ ಕಿರುಕುಳ ನೀಡಿತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಈಗ ಸಂಚಾರಿ ಕುರುಬ ಸಮಾಜ ಹಿರಿಯ ಅರಣ್ಯಾಧಿಕಾರಿಗಳಿಗೆ ಹೋರಾಟದ ಮೂಲಕ ಮನವಿ ಸಲ್ಲಿಸಿದ್ದಾರೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸುಳ್ಳಿಕಟ್ಟಿ ಗ್ರಾಮದ ವ್ಯಾಪ್ತಿಗೆ ಬರುವ ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ಅರಣ್ಯ ಪ್ರದೇಶದಲ್ಲಿ ಕುರಿಗಳನ್ನು ಮೇಯಿಸಲು ಹಣಕದಕೆ ಬೇಡಿಕೆ ಇಡುವದರ ಜೊತೆಗೆ ದಬ್ಬಾಳಿಕೆ ಮಾಡಿದ್ದಾರೆ ಎಂದು ಕುರಿಗಾಯಿ ಅಳಲು ತೋಡಿಕೊಂಡಿದ್ದನು. ಈಗ ಸಂಚಾರಿ ಕುರುಬರು ಭ್ರಷ್ಟ ಅಧಿಕಾರಿ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಲು ಒತ್ತಾಯಿಸಿದ್ದಾರೆ.
ಆನಂದ ಮಳಗಣ್ಣವರ ಎಂಬ ಅರಣ್ಯ ಇಲಾಖೆ ಅಧಿಕಾರಿಯೇ ಹಣ ಮತ್ತು ಕುರಿಗಳ ಬೇಡಿಕೆಯಿಟ್ಟವರು. ಗೌಳಿಯವರು ದನ ಮೇಯಿಸಲು ನನಗೆ ಹಣ ಮತ್ತು ಕೋಳಿಯನ್ನ ಕೊಡುತ್ತಾರೆ. ನೀನು ಸಹ ನನಗೆ ವರ್ಷಕ್ಕೆ ಇಂತಿಷ್ಟು ಹಣವನ್ನ ಕೂಡಲೇಬೇಕು. ನೀ ಹಣವನ್ನ ಕೊಡದೆ ಹೋದ್ರೆ ಇತ್ತ ಎಲ್ಲಿಯೂ ಕಾಣಿಸಿಕೊಳ್ಳಬೇಡ ಎಂದು ಅರಣ್ಯ ಇಲಾಖೆ ಅಧಿಕಾರಿ ಆವಾಜ್ ಹಾಕಿದ್ದಾನೆ. ಈ ನಿಟ್ಟಿನಲ್ಲಿ ನಮಗೆ ಭದ್ರತೆಯ ಜೊತೆಗೆ ನ್ಯಾಯ ಕೊಡಿಸುವಂತ್ತೆ ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ.
ಶಾನುಬೋಗರ ಮಾತು ಕೇಳಿದ್ದರೆ ನಾನು ಕುರಿ ಕಾಯ್ಕೊಂಡು ಇರಬೇಕಾಗಿತ್ತು: ಸಿಎಂ ಸಿದ್ದರಾಮಯ್ಯ
‘ನನ್ನ ಕನಸಿನಲ್ಲಿ ಬಂದ ರಾಮ, ನಾನು ಜ.22ರಂದು ಅಯೋಧ್ಯೆಗೆ ಹೋಗುವುದಿಲ್ಲವೆಂದು ಹೇಳಿದ್ದಾನೆ’