Friday, December 13, 2024

Latest Posts

Forest: ಅರಣ್ಯ ಇಲಾಖೆ ಶಾರ್ಪ್ ಶೂಟರ್ ಮೇಲೆ ಕಾಡಾನೆ ದಾಳಿ..!

- Advertisement -

ಆಲೂರು : ಗಾಯಗೊಂಡು ತಿರುಗಾಡುತಿದ್ದ ಭೀಮ ಕಾಡಾನೆಗೆ ಹೆಚ್ಚಿನ ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಮುಂದಾಗಿದ್ದ ಸಂದರ್ಭದಲ್ಲಿ ಸಿಬ್ಬಂದಿ ಮೇಲೆ ಭೀಮ ಹೆಸರಿ ಕಾಡಾನೆ ದಾಳಿ ನಡೆಸಿರುವ ಘಟನೆ ನಡೆದಿದೆ.

ಆಲೂರು ಸಮೀಪದ ಹಳ್ಳಿಯೂರಿನಲ್ಲಿ ಘಟನೆ ನಡೆದಿದ್ದು, ಕಾಡಾನೆಗೆ ಅರೆವಳಿಕೆ ಮದ್ಧು ನೀಡವ ಶಾರ್ಪ್ ಶೂಟರ್ ವೆಂಕಟೇಶ್ ಗಾಯಗೊಂಡಿದ್ದಾರೆ.  ಚಿಕಿತ್ಸೆ ನೀಡಲು ಮುಂದಾಧಾಗ ಏಕ ಏಕಿ ಬಂದ ಕಾಡಾನೆ ವೆಂಕಟೇಶ್ ರವರನ್ನು ತುಳಿದು ಹಾಕಿದ್ದು ಇದರಿಂದ ವೆಂಕಟೇಶ್ ಗಂಭೀರ ಗಾಯಗೊಂಡಿದ್ಧು ಹಾಸನದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.

ಹಾಸನ ಅರಣ್ಯ ವಿಭಾಗದ ಆಲೂರು, ಬೇಲೂರು. ಯಸಳೂರು. ಸಕಲೇಶಪುರ ಮತ್ತು ಅರಕಲಗೂಡು ವಲಯ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಭೀಮ ಕಾಡಾನೆಗೆ ಇತರೆ ಕಾಡಾನೆಗಳು ಆಗಸ್ಟ್ ಎರಡನೇ ವಾರದಲ್ಲಿ ದಾಳಿ ಮಾಡಿರುವುದರಿಂದ ತೀವ್ರವಾಗಿ ಗಾಯಗೊಂಡಿತ್ತು.

ಕಾಡಾನೆಗೆ ಆ.25 ರಂದು ಚಿಕಿತ್ಸೆ ನೀಡಲಾಗಿದ್ದು, ಗಾಯಗಳು ವಾಸಿಯಾಗದೇ ಉಲ್ಬಣಗೊಂಡಿರುವುದರಿಂದ ಹೆಚ್ಚಿನ ಚಿಕಿತ್ಸೆ ನೀಡುವ ಕಾರ್ಯಾಚರಣೆ ಕೈಗೊಳ್ಳಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಬೆಂಗಳೂರು ಇವರು ಅನುಮತಿ ನೀಡಿದ್ದಾರೆ. ಚಿಕಿತ್ಸೆ ಕಾರ್ಯಾಚರಣೆಯನ್ನು ಆ.31 ರಿಂದ ಸೆ.3 ರವರೆಗೆ ಹಮ್ಮಿಕೊಳ್ಳಲಾಗಿತ್ತು.

Drought area: ಬರಗಾಲ ಘೋಷಣೆ ಮಾಡುವಂತೆ ರೈತರಿಂದ ಪ್ರತಿಭಟನೆ.

Pragenent Women: ಹೆರಿಗೆ ನೋವಿನಲ್ಲಿಯೂ ಸಭೆಗೆ ಬಂದ ಪಾಲಿಕೆ ಸದಸ್ಯೆ ಸರಸ್ವತಿ ಧೋಂಗಡಿ…!

Bendre: ಬೇಂದ್ರೆ ಜನ್ಮ ದಿನವನ್ನು ವಿಶ್ವ ಕವಿ ದಿನವನ್ನಾಗಿ ಆಚರಿಸಲು ಸರ್ಕಾರಕ್ಕೆ ಮನವಿ

- Advertisement -

Latest Posts

Don't Miss