ಪ್ರಧಾನಿ ನರೇಂದ್ರ ಮೋದಿಯವರು( Narendra Modi) ಪಂಜಾಬ್‌ಗೆ ತೆರಳಿದ್ದ ವೇಳೆ ಬಟಿಂಡಾದಲ್ಲಿ ಆದ ಭದ್ರತಾ ಲೋಪದ ಕುರಿತು ತನಿಕಾ ಸಮಿತಿಯನ್ನು ರಚಿಸಲಾಗಿದೆ. ತನಿಕಾ ಸಮಿತಿಯು 3 ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಪಂಜಾಬ್ ಸರ್ಕಾರ ಇಂದು ಕೇಂದ್ರಕ್ಕೆ ತಿಳಿಸಿದೆ.
ನೆನ್ನೆ ಸೋನಿಯಾಗಾಂಧಿ ಅವರಿಗೆ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಕರೆ ಮಾಡಿದ್ದರು. ಈ ವೇಳೆ ಪಕ್ಷದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಹೇಳಿದರು.ಈ ವೇಳೆ ಪ್ರಮುಖ ಅಂಶವನ್ನು ಮಾತನಾಡಿರುವ ಅವರು ಪ್ರತಿಭಟನಾ ನಿರತ ರೈತರು ಮತ್ತು ರಾಜ್ಯ ಪೊಲೀಸರೊಂದಿಗೆ ಭದ್ರತಾ ಲೋಪಕ್ಕೆ ಕಾಂಗ್ರೆಸ್ ಕಾರಣ ಎಂದು ಬಿಜೆಪಿ ಆರೋಪಿಸಿದೆ. ಎಂದು ಹೇಳಿದ್ದಾರೆ.
ಜೊತೆಗೆ ನಾವು ಭದ್ರತೆಯ ವಿಚಾರದಲ್ಲಿ ತನಿಕೆಯನ್ನು ಮಾಡೇ ಮಾಡುತ್ತೇವೆ. ನರೇಂದ್ರ ಮೋದಿಯವರ ಭದ್ರತೆಯ ವಿಚಾರ ಬಂದಾಗ ನನ್ನ ಪ್ರಾಣವನ್ನು ಪಣಕ್ಕಿಟ್ಟಾದರೂ ಸಹ ಮೋದಿಯವರನ್ನು ಕಾಪಾಡುತ್ತೇವೆ ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್‌ಸಿಂಗ್ ಚನ್ನಿ ಹೇಳಿದ್ದಾರೆ.
Modi ಯವರ ಭದ್ರತಾ ಲೋಪದ ಕುರಿತು ತನಿಕಾ ಸಮಿತಿ ರಚನೆ; ಚರಣ್‌ಜಿತ್ ಸಿಂಗ್ ಚನ್ನಿ
- Advertisement -
- Advertisement -