Hassan News: ಹಾಸನ: ಹಾಸನದಲ್ಲಿ ಜೆಡಿಎಸ್ ಸಭೆ ನಡೆಸಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಕೊಬ್ಬರಿ ಮಾರಾಟ ವಿಚಾರವಾಗಿ ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೊಬ್ಬರಿ ವಿಚಾರದಲ್ಲಿ ಒಬ್ಬರು ಹೇಳಿಕೆ ಕೊಡ್ತಾರೆ. ಎಂಎಸ್‌ಪಿ ದರ ಫಿಕ್ಸ್ ಮಾಡಿಲ್ಲ ಎಂದು ಕೊಬ್ಬರಿ ವಿಚಾರದಲ್ಲಿ ಪ್ರಚಾರಕ್ಕೆ ಪೈಪೋಟಿ ಮಾಡ್ತಾರೆ. ರೈತರಿಗೆ ಒಳ್ಳೆಯದು ಮಾಡಲು ಇವರು ಪೈಪೋಟಿ ಮಾಡಲ್ಲ. ಪಾಪ ರೇವಣ್ಣ ಅವರನ್ನು ಬೆಳೆಸಿದರು. 2004 ರಲ್ಲಿ ಹದಿನೇಳು ಮತಗಳಲ್ಲಿ ಸೋತರು. ಅವತ್ತಿನ ಸರ್ಕಾರದಲ್ಲಿ ಎಷ್ಟು ಕೋಟಿ ಕಾಮಗಾರಿ ಕೊಟ್ಟರು ಆ ವ್ಯಕ್ತಿಗೆ. ಯಾರಿಗೂ ಮಾಡದ ಸಹಾಯವನ್ನು ಆ ವ್ಯಕ್ತಿಗೆ ರೇವಣ್ಣ ಮಾಡಿದ್ರು. ಅವರಿಗೆ ಶಕ್ತಿ ಕೊಟ್ಟವರು ಎಚ್.ಡಿ.ರೇವಣ್ಣ. ಒಂದು ದಿನ ಅವರ ಹೆಸರು ಬಾಯಲ್ಲಿ ಬರಲಿಲ್ಲ. 2008 ರಲ್ಲಿ ಗೆದ್ದಾಗ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಇದ್ದರು. ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶ ಮಾಡಿದ್ರು. ಅಲ್ಲಿಂದ ಯಾವ್ಯಾವ ಸಂದರ್ಭದಲ್ಲಿ ಹೇಗೆ ನಡೆದುಕೊಂಡಿದ್ದಾರೆ ಎಂದು ನೋಡಿದ್ದೇನೆ. ಇವತ್ತು ಅಹಂಕಾರ ಬಂದೋಗಿದೆ, ನಾನೇ ಆರ್ಥಿಕ ತಜ್ಞ ಎನ್ನುತ್ತಾರೆ. ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಾರೆ. ಸರ್ಕಾರ ಒಂದು ಲಕ್ಷದ ಐದು ಸಾವಿರ ಕೋಟಿ ಸಾಲ ಈ ವರ್ಷದಲ್ಲಿ ಮಾಡಿದ್ದಾರೆ. ಯಾರಪ್ಪನ ದುಡ್ಡಿನಲ್ಲಿ ಜಾಹೀರಾತು ಕೊಡ್ತಿದ್ದೀರಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನಾನು 25 ಸಾವಿರ ಕೋಟಿ ಸಾಲಮನ್ನಾ ಮಾಡಲು ಹಣ ಹೊಂದಿಸಿದ್ದೇನೆ. ಎರಡು ಭಾರಿ ಇನ್ನೊಬ್ಬರ ಹಂಗಿನ ಸರ್ಕಾರ ನನ್ನದು. ಕೇಂದ್ರ ಸರ್ಕಾರ ನಮಗೆ ದುಡ್ಡು ಕೊಡ್ತಿಲ್ಲ ಅಂತ ನಾನು ಜಂತರ್ ಮಂತರ್ ಮುಂದೆ ಪ್ರತಿಭಟನೆ ಮಾಡಲಿಲ್ಲ. ನಾನೇ ಸಾಲಮನ್ನಾ ಮಾಡಲು ಹಣ ಹೊಂದಿಸಿದೆ. ನಿಮ್ಮ ತೆರಿಗೆ ಹಣ ಅದು ದೇವೇಗೌಡರು ಹರದನಹಳ್ಳಿಯಲ್ಲಿ ಬೆಳೆಯಲಿಲ್ಲ, ನಾನು ಬೆಳೆಯಲಿಲ್ಲ. ನಿಮ್ಮ ತೆರಿಗೆ ಹಣ ನಿಮಗೆ ಸಾಲಮನ್ನಾ ಮಾಡಿದ್ದೇನೆ. ಕರ್ನಾಟಕಕ್ಕೆ ಅನ್ಯಾಯ ಆಗಿರುವುದು ಸತ್ಯ. ಅದು ನರೇಂದ್ರಮೋದಿಯವರ ಸರ್ಕಾರದಿಂದ ಅಲ್ಲ, ಎಲ್ಲಾ ಸರ್ಕಾರದಲ್ಲೂ ಆಗಿದೆ. ದೇವೇಗೌಡರು ತೆಗೆದುಕೊಂಡ ನಿರ್ಧಾರದಿಂದ ರಾಜ್ಯಕ್ಕೆ ನೀರಾವರಿ ಯೋಜನೆಗಳು ಬಂದವು. ರೇವಣ್ಣ ಈ ಜಿಲ್ಲೆಯ ಅಭಿವೃದ್ಧಿಗೆ ಹಗಲು ರಾತ್ರಿ ದುಡಿದ್ದಾನೆ. ಸರ್ಕಾರ ಇರಲಿ, ಸರ್ಕಾರ ಇಲ್ಲದಿರಲಿ ಎಲ್ಲರ ಕೈಕಾಲು ಕಟ್ಟಿ ಕೆಲಸ ಮಾಡಿದ್ದಾನೆ ಎಂದು ಸಹೋದರನನ್ನು ಕುಮಾರಸ್ವಾಮಿ ಹೊಗಳಿದ್ದಾರೆ.
ಹಾಸನದಲ್ಲಿ ಮಾಜಿಸಿಎಂ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದು, ಕೈಜೋಡಿಸಿ ನಿಮ್ಮಲ್ಲಿ ಮನವಿ ಮಾಡುತ್ತೇನೆ. ನೀವು ಬೆಳಸಿದ ಮಕ್ಕಳು ನಾವು. ನೀವು ಬೆಳೆಸಿರುವ ನಮ್ಮಲ್ಲಿ ಏನಾದರೂ ತಪ್ಪಾಗಿದ್ದರೆ ತಿದ್ದಿಕೊಳ್ಳಲು ಅವಕಾಶ ಕೊಡಲ್ವಾ..? ತಪ್ಪು ಮಾಡ್ತೀವಿ, ತಪ್ಪು ಮಾಡಿದ್ದೀವಿ, ಯಾರೂ ಪರಿಶುದ್ಧವಾಗಿರಲು ಸಾಧ್ಯವಿಲ್ಲ. ವಯಸ್ಸು, ಅನುಭವದ ಕೊರತೆ ತಪ್ಪಾಗಿದೆ. ನಾವು ಮಾಡಿರುವ ತಪ್ಪನ್ನು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಂಡಿದ್ದರೆ ನಮಗೆ ಹಿನ್ನಡೆಯಾಗುತ್ತದೆ. ನಮ್ಮ ತಪ್ಪುಗಳನ್ನು ಒಂದು ಭಾರಿ ಕ್ಷಮಿಸಿ. ನಾವು ರಾಜ್ಯದ, ಜಿಲ್ಲೆಯ ಜನತೆಗೆ ವೈಯುಕ್ತಿಕವಾಗಿ ಅನ್ಯಾಯ ಮಾಡಿಲ್ಲ. ನಮ್ಮ ಅಣ್ಣ ಅಂತ ನಾನು ಹೇಳುತ್ತಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಇಡೀ ರಾಜ್ಯದಲ್ಲಿ ಯಾರಾದರೂ ಇದ್ದರೆ ಅದು ರೇವಣ್ಣ. ಕೆಲವು ತಪ್ಪುಗಳಾಗಿವೆ ನಾನು ಸತ್ಯ ಹೇಳಲು ಬಂದಿದ್ದೇನೆ. ಈಗಾಗಲೇ ಜೆಡಿಎಸ್‌ನಿಂದ ಈ ಜಿಲ್ಲೆಯನ್ನು ಪಡೆಯಲು ಎಲ್ಲಾ ರೀತಿಯ ಕುತಂತ್ರಗಳನ್ನು ಮಾಡಿಕೊಂಡಿದ್ದಾರೆ. ಹಾಗಾಗಿ ಈ ಪ್ರಾಥಮಿಕ ಸಭೆಗೆ ಬಂದಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ನಮ್ಮಲ್ಲಿರುವ ತಪ್ಪುಗಳು ನಿಮ್ಮಲ್ಲಿ ಆಕ್ರೋಶವಾಗಿ ತಿರುಗಿದ್ರೆ ಏನಾಗುತ್ತೆ..? ಅಧಿಕಾರ ಬಂದಾಗ ಸ್ವಾರ್ಥಕ್ಕೆ ರಾಜಕಾರಣ ಮಾಡಲ್ಲ, ರಾಜ್ಯಕ್ಕಾಗಿ ಜಿಲ್ಲೆಗಾಗಿ ದುಡಿದ್ದೇವೆ. ದಯಮಾಡಿ ನಮ್ಮನ್ನು ಕೈ ಬಿಡಬೇಡಿ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲ್ಲಲು ಕಾಂಗ್ರೆಸ್ ಮತಗಳು ಕಾರಣ. ಮುಖ್ಯಮಂತ್ರಿಗಳೇ ಇದನ್ನು ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಜನ ಎಂಟು ಸ್ಥಾನಗಳನ್ನು ಗೆಲ್ಲಿಸಿ ನನ್ನನ್ನು ಮುಖ್ಯಮಂತ್ರಿ ಮಾಡಿದ್ರು. ಮಂಡ್ಯ ಜಿಲ್ಲೆಯ ಜನ ಯಾವತ್ತೂ ನನ್ನ ಕೈಬಿಟ್ಟಿಲ್ಲ. ನನ್ನ ಮಗನಿಗೆ ಮಂಡ್ಯದಿಂದ ನಿಲ್ಲಬೇಡ ಎಂದೆ, ಯಾವ ಕಾರಣಕ್ಕೂ ನಿಲ್ಲಬೇಡ ಎಂದೆ. ಎಲ್ಲಾ ಶಾಸಕರು ತಗೊಂಡೋಗಿ ನಿಲ್ಲಿಸಿದ್ರು. ಮೂರು ಜನ ಮಂತ್ರಿಗಳು ಇದ್ದರು. ನಿಖಿಲ್ ಕುಮಾರಸ್ವಾಮಿ ಐದು ಲಕ್ಷ ಮತ ನೀಡಿದ್ರು. ಅವರು ಜನಗಳ ಪರವಾಗಿ ಕಮಿಟ್‌ಮೆಂಟ್ ಇಟ್ಕಂಡಿದ್ದಾನೆ. ನೋಡೋಣ ದೇವರೇ ತೀರ್ಮಾನ ಮಾಡ್ತಾನೆ. ಆ ದೇವರೇ ಅವನಿಗೆ ಆಶೀರ್ವಾದ ಮಾಡ್ತಾನೆ, ಎಲ್ಲಾ ದೇವರ ಇಚ್ಛೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ನನ್ನ ಮಗನಿಗೆ ಆದಂತೆ ಇವತ್ತು ನನ್ನ ಸಹೋದರ ಮಗನಿಗೆ ಹೆಚ್ಚು ಕಡಿಮೆ ಆಗಬಾರದು. ದಯವಿಟ್ಟು ಅವನನ್ನು ಉಳಿಸಿಕೊಳ್ಳಿ. ಬಿಜೆಪಿಯ ಕಾರ್ಯಕರ್ತರಿಗೆ ಮನವಿ ಮಾಡ್ತಿನಿ. ಒಂದು ಕಡೆ ನರೇಂದ್ರಮೋದಿ, ಒಂದು ರಾಮಮಂದಿರ ನಿರ್ಮಾಣ. ನಾವು ಹಲವು ಕಡೆಗಳಲ್ಲಿ ಬಿಜೆಪಿಗೆ ಶಕ್ತಿ ಕೊಡುತ್ತಿದ್ದೇವೆ. ಬಿಜಾಪುರ, ಕಲ್ಬುರ್ಗಿ, ಚಿತ್ರದುರ್ಗ, ರಾಯಚೂರನಲ್ಲಿ ಎರಡುವರೆ ಲಕ್ಷ ಮತಗಳಿದ್ದಾವೆ. ಈ ಹಿಂದೆ ಕಾಂಗ್ರೆಸ್‌ನವರು ಕತ್ತು ಕುಯ್ದರು. ದೇವೇಗೌಡರ ಹೆಸರು ಉಳಿಸಲು ಮೈತ್ರಿ ಮಾಡಿಕೊಂಡಿದ್ದೇನೆ. ಯಾರೂ ಜೆಡಿಎಸ್ ಮುಗಿಸಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಯುವರಾಜರೇ ರಾಜರಾಗಿರಿ ಮಂತ್ರಿಯಾಗಬೇಡಿ: ಯದುವೀರ್ ಒಡೆಯರ್ ಅಭಿಮಾನಿಗಳ ಅಭಿಯಾನ
ಸರಕಾರಿ ಕಾರ್ಯಕ್ರಮಕ್ಕೆ ಬರದಿದ್ದರೆ ಗ್ಯಾರಂಟಿ ಯೋಜನೆ ಬಂದ್: ಅಂಗನವಾಡಿ ಕಾರ್ಯಕರ್ತೆಯ ‘ಗ್ಯಾರಂಟಿ’ ಬೆದರಿಕೆ

