Hubballi News: ಹುಬ್ಬಳ್ಳಿ: ನಿರ್ಮಲಾ ಸೀತಾರಾಮನ್ ಅವರು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡನೆ ಮಾಡಿದ್ದಾರೆ. ಯುವ ಸಬಲೀಕರಣಕ್ಕೆ, ರೈತರ ಕ್ಷೇಮಾಭವೃದ್ಧಿ, ಬಡವರ ಕಲ್ಯಾಣ, ಮಹಿಳೆಯರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಬಜೆಟ್ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಸ್ಕಿಲ್ ಇಂಡಿಯಾ, ಆಯುಷ್ಮಾನ್ ಭಾರತ, ರಾಷ್ಟ್ರೀಯ ಶಿಕ್ಷಣ ನೀತಿಗೆ ಆದ್ಯತೆ ಕೊಟ್ಟಿದ್ದಾರೆ. ಕನಿಷ್ಠ ಬೆಂಬಲ ಬೆಲೆಗೆ ಒತ್ತು ಕೊಡುವ ಕೆಲಸವಾಗಿದೆ. ಶಿಕ್ಷಣ, ಆರೋಗ್ಯ, ಕೈಗಾರಿಕೆ, ಪ್ರವಾಸೋದ್ಯಮಕ್ಕೆ ಒತ್ತು ಕೊಡಲಾಗಿದೆ. ಅಭಿವೃದ್ಧಿ ಹೊಂದಿದ ಭಾರತ ಮಾಡಲು ಮೋದಿಯವರ ಸರ್ಕಾರ ಎಲ್ಲಾ ಕೆಲಸ ಮಾಡುತ್ತಿದೆ. ಎಲ್ಲಾ ರಾಜ್ಯಗಳಿಗೆ ಆಗಿರುವ ರೀತಿ ಕರ್ನಾಟಕಕ್ಕೂ ಅನುದಾನ ಹಂಚಿಕೆಯಾಗಿದೆ. ಕಡಿಮೆ ಹಣ ಬಂದಿದೆ ಅನಿಸಿದ್ರೆ ಅದನ್ನು ಚರ್ಚಿಸಲು ವೇದಿಕೆಯಿದೆ. ನೀತಿ ಆಯೋಗದಲ್ಲಿ ಕಾಂಗ್ರೆಸ್‌ನವರೂ ಇದ್ದು ಅಲ್ಲಿ ಚರ್ಚೆ ಮಾಡಬೇಕು ಎಂದರು.
ನಾನು ಪಕ್ಷ ಕೊಡುವ ಯಾವುದೇ ಜವಾಬ್ದಾರಿಯನ್ನಾದರೂ ನಿರ್ವಹಿಸಲು ಸಿದ್ಧ. ಪಕ್ಷ ಹೇಳಿದ್ರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ. ಬಿಜೆಪಿ ವರಿಷ್ಠರು ಗೌರವಯುತ ಸ್ಥಾನ ಕೊಡುತ್ತೇವೆ ಅನ್ನುವಂತಹ ಭರವಸೆ ನೀಡಿದ್ದಾರೆ. ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಬೇಕು ಎನ್ನುವುದೇ ನಮ್ಮ ಗುರಿ. ನನ್ನ ಜೊತೆ ಕಾಂಗ್ರೆಸ್ ಸೇರಿದವರು ಎಲ್ಲರೂ ವಾಪಸ್ ಬಿಜೆಪಿಗೆ ಬರ್ತಾರೆ. ಬೇರೆ ಬೇರೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಕೂಡ ಬಿಜೆಪಿ ಸೇರಲು ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ಜೊತೆಗೆ ಬಿಜೆಪಿಗೆ ಬರುತ್ತೇವೆ ಎನ್ನುತ್ತಿದ್ದಾರೆ. ರಾಜ್ಯಾದ್ಯಂತ ಸಂಚಾರ ಮಾಡಿದಾಗ ಕಾಂಗ್ರೆಸ್ ನ ಬಹಳಷ್ಟು ಜನ ನನ್ನ ಸಂಪರ್ಕಕ್ಕೆ ಬಂದಿದ್ದಾರೆ. ಅವರೆಲ್ಲಾ ಆದಷ್ಟು ಶೀಘ್ರ ಬಿಜೆಪಿ ಸೇರಲಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಪಕ್ಷದ ವರ್ಚಸ್ಸು ಬೆಳೆಯುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ತೊರೆಯಲು ಅಲ್ಲಿನವರು ಮನಸ್ಸು ಮಾಡುತ್ತಿದ್ದಾರೆ ಎಂದರು.
ಶಾಸಕ ಬಾಲಕೃಷ್ಣ ಹೇಳಿಕೆ ಕಾಂಗ್ರೆಸ್‌ನ ಮನಸ್ಥಿತಿ ತೋರಿಸುತ್ತದೆ. ಚುನಾವಣೆಗಾಗಿ ಭಾಗ್ಯಗಳನ್ನು ಕೊಟ್ಟರು ಅನ್ನೋ ಭಾವನೆ ಜನರಲ್ಲಿ ಮೂಡಿದೆ. ಲೋಕಸಭೆ ಚುನಾವಣೆ ನಂತರ ಭಾಗ್ಯಗಳು ಇರಲ್ಲಾ ಅನ್ನುವ ಪರಿಸ್ಥಿತಿ ಕಾಣಿಸುತ್ತಿದೆ ಎಂದರು.
‘ಜ್ಞಾನ ವ್ಯಾಪಿ ಎಂಬ ಹೆಸರಿನ ಮಸೀದಿ ಎಲ್ಲಿಯೂ ಇಲ್ಲ. ಔರಂಗಜೇಬ್ ಒಡೆದ ದೇವಸ್ಥಾನ ಅದು.’
2024ರ ಕೇಂದ್ರ ಬಜೆಟ್‌ನಲ್ಲಿ ಲಕ್ಷದ್ವೀಪದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ
ತಮ್ಮ ಅಧಿಕಾರಾವಧಿಯ ಯೋಜನೆಗಳ ಸಾಧನೆ ವಿವರಿಸಿದ ಸಚಿವೆ ನಿರ್ಮಲಾ ಸೀತಾರಾಮನ್