ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಪಂಚರತ್ನ ಯಾತ್ರೆ ಮೂಲಕ, ರಾಜ್ಯ ಸುತ್ತಿದ ಮಾಜಿ ಸಿಎಂ ಕುಮಾರಸ್ವಾಮಿ, ಚುನಾವಣೆ ಮುಗಿದ ಬಳಿಕ, ಸ್ನೇಹಿತರು, ಕಾರ್ಯಕರ್ತರೊಂದಿಗೆ ಸಿಂಗಾಪುರಕ್ಕೆ ತೆರಳಿದ್ದಾರೆ. ಜೆಡಿಎಸ್ ಕಾರ್ಯಕರ್ತರೊಬ್ಬರು ಈ ಫೋಟೋವನ್ನ ಶೇರ್ ಮಾಡಿದ್ದಾರೆ.
ಸದ್ಯ ಸಿಂಗಾಪುರದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಹೆಚ್ಡಿಕೆ, ಕರ್ನಾಟಕದಲ್ಲಿರುವ ಜೆಡಿಎಸ್ ಕಾರ್ಯಕರ್ತರ ಜೊತೆ ಸಂಪರ್ಕದಲ್ಲಿದ್ದಾರೆ. ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರುವ ಸಾಧ್ಯತೆ ಇದ್ದು, ಕುಮಾರಸ್ವಾಮಿಯೇ ಸಿಎಂ ಆಗಬಹುದು ಎಂದು ಬಹುತೇಕರು ಅಂದಾಜಿಸಿದ್ದಾರೆ. ಹಾಗಾಗಿ ಈ ಬಗ್ಗೆ ವಿವರ ತಿಳಿದುಕೊಳ್ಳುವುದಕ್‌ಕೆ, ಕುಮಾರಸ್ವಾಮಿ ಸಿಂಗಾಪುರದಿಂದಲೇ, ತಮ್ಮ ಆಪ್ತರ ಜೊತೆ ಸಂಪರ್ಕದಲ್ಲಿದ್ದಾರೆ. ನಾಳೆ ವಿಧಾನಸಭೆಯ ರಿಸಲ್ಟ್ ಬರಲಿದ್ದು, ಈ ಬಾರಿ ರಾಜ್ಯಕ್ಕೆ ಎಂಥ ನಾಯಕ ಸಿಗುತ್ತಾನೆಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
‘ಬೆಂಗಳೂರು ಓಡಿಸ್ತೀನಿ, ಊರು ಬಿಡಿಸುತ್ತೀನಿ ಅಂದವರಿಗೆ ಚುನಾವಣೆ ಫಲಿತಾಂಶ ಬರಲಿದೆ’
ಸ್ವರೂಪ್- ಪ್ರೀತಂ ನಡುವೆ ತೀವ್ರ ಪೈಪೋಟಿ: ಹಾಸನದಲ್ಲಿ ಭರ್ಜರಿ ಬೆಟ್ಟಿಂಗ್
‘ಈಗ ಸ್ವಲ್ಪ ಬಿಡುವು ಮಾಡಿಕೊಂಡು ತಂದೆ-ತಾಯಿ, ಹೆಂಡತಿ ಮಕ್ಕಳ ಜೊತೆ ಕಾಲ ಕಳೆಯಿರಿ’