Saturday, December 21, 2024

Latest Posts

‘ಈಗ ಶಿವರಾಜ್ ಕುಮಾರ್ ಅವರೂ ‘ ನಮ್ಮ ಕಾಡಿನವರು’ ಆಗಿ ಬಿಟ್ಟರು’

- Advertisement -

ವರುಣಾ: ಮಾಜಿ ಸಿಎಂ ಸಿದ್ದರಾಮಯ್ಯನವರು ಇಂದು ವರುಣಾ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದು, ಅವರಿಗೆ ನಟ ಶಿವರಾಜ್‌ಕುಮಾರ್, ಪತ್ನಿ ಗೀತಾ ಶಿವರಾಜ್‌ಕುಮಾರ್, ನಟಿ ನಿಶ್ವಿಕಾ ನಾಯ್ಡು ಸೇರಿ ಇನ್ನಿತರ ಕಾಂಗ್ರೆಸ್ ನಾಯಕರು ಸಾಥ್ ಕೊಟ್ಟರು.

ಸಿದ್ದರಾಮಯ್ಯ ಪರ ಶಿವರಾಜ್‌ಕುಮಾರ್ ಪ್ರಚಾರ ಮಾಡಿದ್ದು, ಸಿದ್ದರಾಮಯ್ಯರಿಗೆ ಓಟ್ ಹಾಕಿ, ಗೆಲ್ಲಿಸಬೇಕೆಂದು ಮನವಿ ಮಾಡಿದರು. ಅಲ್ಲದೇ ರಾಹುಲ್ ಗಾಂಧಿಯವರ ಕಾರ್ಯವನ್ನು ಮೆಚ್ಚಿದ ಶಿವರಾಜ್‌ಕುಮಾರ್, ಅವರು ಮಾಡಿದ ಜಾಥಾದಿಂದ ನಾನು ಪ್ರೇರಿತನಾಗಿದ್ದೇನೆ. ಹಾಗಾಗಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದೇನೆ. ನಿಮ್ಮ ಬೆಂಬಲ ಕಾಂಗ್ರೆಸ್ಸಿಗಿರಲಿ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮೂಲಕ ಸಂಭ್ರಮ ವ್ಯಕ್ತಪಡಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ವರುಣಾ ಕ್ಷೇತ್ರದ ರಾಂಪುರ, ಮರಳೂರು, ಗೊದ್ವನಪುರ, ತಾಂಡವಪುರದಲ್ಲಿ ಇಂದು ನಡೆಸಿದ ರೋಡ್ ಶೋನಲ್ಲಿ ನನ್ನ ಜನ ಸಾಗರೋಪಾದಿಯಲ್ಲಿ ಬಂದು ಜೊತೆಯಾದರು. ಜನರ ಉತ್ಸಾಹ-ಅಭಿಮಾನ‌ ನೋಡಿದರೆ ದಾಖಲೆ ಮತಗಳೊಂದಿಗೆ ನನ್ನನ್ನು ಹರಸುತ್ತಾರೆ ಎಂಬ ನಂಬಿಕೆ ಹುಟ್ಟಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅವರ ಪತ್ನಿ ಮತ್ತು ದಿವಂಗತ ಎಸ್ .ಬಂಗಾರಪ್ಪನವರ ಮಗಳು ಗೀತಾ ಶಿವರಾಜ್ ಕುಮಾರ್ ಮತ್ತು ಯುವ ನಟಿ ನಿಶ್ವಿಕಾ ನಾಯ್ಡು ರೋಡ್ ಶೋಗೆ ರಂಗೇರಿಸಿದರು ಎಂದು ಹೇಳಿದ್ದಾರೆ.

ಅಲ್ಲದೇ, ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಶಿವರಾಜ್ ಕುಮಾರ್ ಅವರು ನನ್ನ ಮೇಲಿನ ಪ್ರೀತಿ ಮತ್ತು ನನ್ನ ಹಾಗೂ ಡಾ.ರಾಜ್ ಕುಟುಂಬದ ನಂಟಿನ ಕಾರಣದಿಂದ ಪತ್ನಿ ಗೀತಾ ಅವರ ಜೊತೆ ಬಂದು ನನಗಾಗಿ ಮತಯಾಚಿಸಿದರು. ಡಾ.ರಾಜ್ ಕುಮಾರ್ ಬದುಕಿರುವಷ್ಟು ದಿನ ನನ್ನನ್ನು ಕಂಡಾಕ್ಷಣ ‘ನಮ್ಮ ಕಾಡಿನವರು’ ಎಂದು ತಬ್ಬಿಕೊಳ್ಳುವವರು. ಈಗ ಶಿವರಾಜ್ ಕುಮಾರ್ ಅವರೂ ‘ ನಮ್ಮ ಕಾಡಿನವರು’ ಆಗಿ ಬಿಟ್ಟರು. ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಪ್ರತಾಪ್ ಸಿಂಹ ಟ್ವೀಟ್‌ಗೆ ನೆಟ್ಟಿಗರ ಆಕ್ರೋಶ: ಅಂಥಾದ್ದೇನು ಹೇಳಿದರು ಈ ಸಂಸದರು..?

ನಿಜವಾದ ಭಜರಂಗಿಯ ನೋವು ಆಲಿಸಿ: ಮೋದಿಗೆ ಕಾಂಗ್ರೆಸ್ ತಿರುಗೇಟು

ಅಪ್ಪನಿಗೆ ಟಿಕೇಟ್ ಸಿಕ್ಕಿದ್ದಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದ ಮಗ..

- Advertisement -

Latest Posts

Don't Miss