ಬೆಂಗಳೂರು: ಬಿಜೆಪಿ ಪ್ರಣಾಳಿಕೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದು, ಕಳೆದ ಬಾರಿ ಬಿಡುಗಡೆ ಮಾಡಿದ್ದ ಪ್ರಣಾಳಿಕೆ ಬಗ್ಗೆ ತಾವು ಹಾಕಿದ್ದ ಪೋಸ್ಟ್‌ನ್ನು ಮತ್ತೊಮ್ಮೆ ಟ್ವಿಟರ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ನಾಲ್ಕು ಫೋಟೋ ಶೇರ್ ಮಾಡಿರುವ ಸಿದ್ದರಾಮಯ್ಯ, ಮೊದಲ ಫೋಟೋದಲ್ಲಿ, ಬಿಜೆಪಿ 2008ರಲ್ಲಿ ಕರ್ನಾಟಕದಲ್ಲಿ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿ ಶೇ.90 ರಷ್ಟು ಭರವಸೆಗಳನ್ನು ಈಡೇರಿಸಲ್ಲ. ಅದೇ ಗತಿ ಈಗ ಬಿಡುಗಡೆ ಮಾಡಿರುವ ಪ್ರಣಾಳಿಕೆಗೂ ಆಗಲಿದೆ. ಜನರ ಕಣ್ಣಿಗೆ ಮಣ್ಣೆರಚುವ ಆಟ ಕರ್ನಾಟಕದಲ್ಲಿ ನಡೆಯೋದಿಲ್ಲಾ ಎಂದಿದ್ದಾರೆ.
ಎರಡನೇಯ ಫೋಟೋದಲ್ಲಿ ಬಿಜೆಪಿಯವರು ನಕಲು ಗಿರಾಕಿಗಳು, ನಮ್ಮ ಯೋಜನೆಗಳನ್ನು ಕಾಪಿ ಹೊಡೆದಿದ್ದಾರೆ. ಈಗಿರುವ ಕ್ಯಾಂಟೀನ್ ರೀತಿಯೇ ಅನ್ನಪೂರ್ಣ ಕ್ಯಾಂಟೀನ್ ಮಾಡುತ್ತೇವೆ ಎಂದಿದ್ದಾರೆ. ಹಾಗಾದರೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಇಲ್ಲಿಯವರೆಗೆ ಯಾಾಕೆ ಕ್ಯಾಂಟೀನ್ ತೆರೆದಿಲ್ಲ..? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮೂರನೇಯ ಪೋಸ್ಟ್‌ನಲ್ಲಿ, ಒಂದು ಲಕ್ಷ ರೂಪಾಯಿ ಬೆಳೆ ಸಾಲಮನ್ನಾದ ಹೊಸ ಭರವಸೆ ಬೇಡ ಸ್ವಾಮಿ. 15 ಲಕ್ಷ ರೂಪಾಯಿ ಬ್ಯಾಂಕ್ ಖಾತೆಗೆ ಹಾಕುವ ಹಳೆ ಭರವಸೆ ಈಡೇರಿಸುವಂತೆ, ಪ್ರಧಾನಿ ನರೇಂದ್ರ ಮೋದಿಯವರನ್ನ ಒಪ್ಪಿಸಿ ಪುಣ್ಯ ಕಟ್ಟಿಕೊಳ್ಳಿ ಎಂದಿದ್ದಾರೆ.
ನಾಲ್ಕನೇಯ ಪೋಸ್ಟ್‌ನಲ್ಲಿ, ನಾನು ರೈತರ ಸಾಲ ಮನ್ನಾ ಮಾಡಿದಾಗ, ಕೇಂದ್ರ ಸಚಿವರೊಬ್ಬರು ಅದನ್ನು ಲಾಲಿಪಾಪ್ ಎಂದು ಗೇಲಿ ಮಾಡಿದ್ದರು. ರೈತರ ಸಾಲಮನ್ನಾಗೆ ಒಂದು ಪೈಸೆ ಕೊಡಲ್ಲ ಅಂತಾ ಸಚಿವ ಅರುಣ್ ಜೇಟ್ಲಿ ಹೇಳಿದ್ದರು. ನಿಮ್ಮನ್ನು ನಮ್ಮ ರೈತರು ನಂಬುತ್ತಾರಾ..? ಎಂದು ಕೇಳಿದ್ದಾರೆ. ಇದೆಲ್ಲ ಪೋಸ್ಟ್ ಗೆ ಸುಳ್ಳು ಭರವಸೆ, ಪೊಳ್ಳು ಪ್ರಣಾಳಿಕೆ ಎಂದು ಟ್ಯಾಗ್ ಹಾಕಿದ್ದಾರೆ.
ಅಲ್ಲದೇ ರಾಜ್ಯ ಬಿಜೆಪಿ 2018ರಲ್ಲಿ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯನ್ನು ಓದಿ ನಾನು ನೀಡಿದ್ದ ಪ್ರತಿಕ್ರಿಯೆಗಳು ಇಲ್ಲಿವೆ. ಇದನ್ನು ಈ ಬಾರಿಯ ಬಿಜೆಪಿ ಪ್ರಣಾಳಿಕೆಗಳಿಗೂ ಅನ್ವಯಿಸಬಹುದು. ಹೇಗೂ ಸುಳ್ಳು ಹೇಳ್ತೀರಾ, ಹೊಸ ಸುಳ್ಳುಗಳನ್ನಾದರೂ ಹೇಳೋಕ್ಕಾಗೊಲ್ವಾ ? ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ.
ರಾಜ್ಯ @BJP4Karnataka 2018ರಲ್ಲಿ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯನ್ನು ಓದಿ ನಾನು ನೀಡಿದ್ದ ಪ್ರತಿಕ್ರಿಯೆಗಳು ಇಲ್ಲಿವೆ.
ಇದನ್ನು ಈ ಬಾರಿಯ ಬಿಜೆಪಿ ಪ್ರಣಾಳಿಕೆಗಳಿಗೂ ಅನ್ವಯಿಸಬಹುದು.
ಹೇಗೂ ಸುಳ್ಳು ಹೇಳ್ತೀರಾ,
ಹೊಸ ಸುಳ್ಳುಗಳನ್ನಾದರೂ ಹೇಳೋಕ್ಕಾಗೊಲ್ವಾ ? pic.twitter.com/GdzMAfom22
— Siddaramaiah (@siddaramaiah) May 4, 2023
ಹೆಣ್ಣು ಸಿಗದವರಿಗೆ ಮದುವೆ ಮಾಡಿಸುವ ಭರವಸೆ ಕೊಟ್ಟ ಸಹೋದರರು: ಪಕ್ಷೇತರರ ಪ್ರಣಾಳಿಕೆ ಫುಲ್ ವೈರಲ್..
ಪ್ರತಾಪ್ ಸಿಂಹ ಟ್ವೀಟ್‌ಗೆ ನೆಟ್ಟಿಗರ ಆಕ್ರೋಶ: ಅಂಥಾದ್ದೇನು ಹೇಳಿದರು ಈ ಸಂಸದರು..?