Thursday, April 3, 2025

Latest Posts

‘ಜೆಡಿಎಸ್‌ನಲ್ಲಿ ದೇವೇಗೌಡರು, ಕುಟುಂಬದವರು ಹೇಳಿದ್ದನ್ನ ಕೇಳಿಕೊಂಡು ಬಿದ್ದಿರಬೇಕು’

- Advertisement -

ಹಾಸನ: ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಶಿವರಾಮೇಗೌಡರ ಪರ ಬ್ಯಾಟಿಂಗ್ ಮಾಡಿದ್ದಾರೆ.

ಶಿವಲಿಂಗೇಗೌಡರಿಗೆ ಯಾವುದೇ ಸರ್ಕಾರ ಇದ್ದರು ಮಂತ್ರಿಗಳ ಹತ್ತಿರ ಅಧಿಕಾರಿಗಳ ಹತ್ತಿರ ಕೆಲಸ‌ ಮಾಡಿಸುತ್ತಾನೆ. ಎತ್ತಿನಹೊಳೆ ಯೋಜನೆ ಕುಂಟುತ್ತಾ ಸಾಗಲು ಕುಮಾರಸ್ವಾಮಿ, ಬಿಜೆಪಿ ಕಾರಣ. ಕುಮಾರಸ್ವಾಮಿಗೆ ಇಂದೂ ಕೂಡ ಯೋಜನೆ ಬಗ್ಗೆ ನಂಬಿಕೆ ಇಲ್ಲ. ಈ ಯೋಜನೆಯಿಂದ ಬಯಲು ಸೀಮೆ ಜಿಲ್ಲೆಗಳು ಮತ್ತು ಹಾಸನ ಜಿಲ್ಲೆಗೂ ಅನುಕೂಲ ಆಗುತ್ತೆ. ಈ ಯೋಜನೆ ಹಾಸನಕ್ಕೆ ಬರಲು ಶಿವಲಿಂಗೇಗೌಡ ಕಾರಣ ಎಂದು ಸಿದ್ದರಾಮಯ್ಯ ಹೊಗಳಿದ್ದಾರೆ.

ಜೆಡಿಎಸ್ ನಲ್ಲಿ ದೇವೇಗೌಡರು, ಕುಟುಂಬದವರು ಹೇಳಿದ್ದನ್ನ ಕೇಳಿಕೊಂಡು ಬಿದ್ದಿರಬೇಕು. ಕೇಳದೇ ಇದ್ರೆ ಯಾರೂ ಪಕ್ಷದಲ್ಲಿ ಇರಲು ಸಾಧ್ಯವಿಲ್ಲ.  ನಾನೂ ಕೂಡ ಪ್ರಶ್ನೆ ಮಾಡಿದೆ ನನ್ನನ್ನೂ ಆಚೆಗೆ ತಳ್ಳಿದ್ರು. ನಾನು ಪಕ್ಷ ಬಿಟ್ಟಿರಲಿಲ್ಲ, ಅವರೇ ಆಚೆಗೆ ಎಸೆದರು. ನನಗೂ ಶಿವಲಿಂಗೇಗೌಡ ಗೆ ಸಾಮ್ಯತೆ ಏನು ಅಂದ್ರೆ, ಕಾಂಗ್ರೆಸ್ ನವರು ನನ್ನನ್ನ ನಮ್ಮ ಊರಿನಲ್ಲಿ ಸೇರಿಸಿಕೊಂಡ್ರು . ನಿನ್ನನ್ನ ನಿಮ್ಮೂರಿಗೆ ಬಂದು ಸೇರಿಸಿಕೊಂಡಿದ್ದಾರೆ ಎಂದು ಹೇಳಿದರು.

ಅಲ್ಲದೇ, ನಿಮ್ಮನ್ನು ನಂಬಿದ್ದೇವೆ ನೀರಿಗಾದ್ರು ಹಾಲಿಗಾದ್ರು ಹಾಕಿ ಎಂದು ಶಿವಲಿಂಗೇಗೌಡ ಹೇಳಿದ್ದಾರೆ. ನಾವು ಯಾವತ್ತೂ ನೀರಿಗೆ ಹಾಕೊಲ್ಲ ಹಾಲಿಗೇ ಹಾಕೋದು. ನಿನ್ನ, ಕ್ಷೇತ್ರದ ಯೋಗಕ್ಷೇಮವನ್ನ ಚನ್ನಾಗಿ ನೋಡಿಕೊಳ್ತೀವಿ. ಇಲ್ಲಿ ಎಲ್ಲರನ್ನೂ ಒಂದೇ ರೀತಿ ನೋಡುತ್ತೇವೆ. ನಮ್ಮ‌ಅಧ್ಯಕ್ಷರು ಹೇಳದ ಒಂದು ಮಾತು ಹೇಳುತ್ತೇನೆ. ನಾನು ಮತ್ತು ಡಿ‌.ಕೆ ಶಿವಕುಮಾರ್ ಇಬ್ಬರೂ ಹೈಕಮಾಂಡ್ ಗೆ ಹೇಳಿ ಟಿಕೆಟ್ ಕೊಡ್ಸೇ ಕೊಡುಸ್ತೀವಿ. ಶಿವಲಿಂಗೇಗೌಡ ರನ್ನ ಗೆಲ್ಲಿಸುವ ಕೆಲಸ ನೀವು ಮಾಡಬೇಕು. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

ಅಲ್ಲದೇ, ಬಿಜೆಪಿಯ ದುರಾಡಳಿತದಿಂ ಜನ ಬೇಸತ್ತಿದ್ದಾರೆ. ನಾವು ಕೊಟ್ಟಿರುವ ಆಶ್ವಾನೆಗಳನ್ನ ಸುಳ್ಳು ಎಂದು ಬಿಂಬಿಸಲು ಹೊರಟಿದ್ದಾರೆ. ನಾವು ನೀಡಿದ ಎಲ್ಲಾ ಬೇಡಿಕೆಯನ್ನ ಈಡೇರಿಸಿದ್ದೇವೆ. ನಾನು ಈ ರಾಜ್ಯದಲ್ಲಿ ೧೩ ಬಾರಿ ಬಜೆಟ್ ಮಂಡಿಸಿದ್ದೇನೆ. ನಮ್ಮ ಯೋಜನೆ ಬಗ್ಗೆ ಹಣಕಾಸು ಹಿಂದಿಸುವ ಭರವಸೆ ಇದೆ. ನಾವು ನಮ್ಮ ಆಶ್ವಾಸನೆ ಈಡೇರಿಸಲು ಸಾಧ್ಯವಾಗದಿದ್ದರೆ ಒಂದೆ ಸೆಕೆಂಡ್ ಕೂಡ ಅಧಿಕಾರದಲ್ಲಿ ಇರೊಲ್ಲ. ಒಂದು ವೇಳೆ ಆಗದಿದ್ದರೆ ನಿಮಗೆ ನಮಸ್ಕಾರ ಮಾಡಿ ರಾಜಕೀಯ ನಿವೃತ್ತರಾಗುತ್ತೇವೆ. ನಮ್ಮ ಭರವಸೆ ನಂಬಿ ಮತ್ತೊಮ್ಮೆ ಶಿವಲಿಂಗೇಗೌಡರನ್ನ ಶಾಸಕರನ್ನಾಗಿ ಮಾಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ನೂರಕ್ಕೆ ನೂರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರತ್ತೆ: ಭವಿಷ್ಯ ನುಡಿದ ಸಿದ್ದರಾಮಯ್ಯ..

‘ನನ್ನ ಮಾವನವರು ಮಾಡಿರುವ ಅಭಿವೃದ್ದಿ ಕಾರ್ಯಕ್ರಮಗಳೇ ಶ್ರೀರಕ್ಷೆ’

ನೂರಕ್ಕೆ ನೂರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರತ್ತೆ: ಭವಿಷ್ಯ ನುಡಿದ ಸಿದ್ದರಾಮಯ್ಯ..

- Advertisement -

Latest Posts

Don't Miss