Friday, February 21, 2025

Latest Posts

‘ಬೈಕ್ ಗಲಾಟೆಗೆ ಬಣ್ಣ ಬಳಿದು, ಆರೋಪ ಮಾಡುತ್ತಿರುವ ಪ್ರತಾಪ್ ಸಿಂಹ ವಿರುದ್ಧ ಕ್ರಮ ಕೈಗೊಳ್ಳಿ’

- Advertisement -

ಮೈಸೂರು: ನಿನ್ನೆ ವರುಣಾದಲ್ಲಿ ಸೋಮಶೇಖರ್ ಪರ ಪ್ರತಾಪ್ ಸಿಂಹ ಬಿಜೆಪಿ ಕ್ಯಾಂಪೇನ್ ಮಾಡುವ ವೇಳೆ ಗಲಾಟೆ ನಡೆದು, ಬಿಜೆಪಿ ಕಾರ್ಯಕರ್ತನಿಗೆ ಗಂಭೀರ ಗಾಯವಾಗಿತ್ತು. ಅದು ಕಾಂಗ್ರೆಸ್ಸಿನವರೇ ಮಾಡಿದ ಪುಂಡಾಟಿಕೆ ಎಂದು ಬಿಜೆಪಿ ಮತ್ತು ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದರು. ಆದರೆ ಅದು ಬಿಜೆಪಿ- ಕಾಂಗ್ರೆಸ್ ನಡುವಿನ ಜಗಳವಲ್ಲ. ಇದರಲ್ಲಿ ಕಾಂಗ್ರೆಸ್ಸಿಗರ ಕೈವಾಡವಿಲ್ಲ. ಬದಲಾಗಿ ಇಂದು ಬೈಕ್ ಅಪಘಾತಕ್ಕೆ ಸಂಬಂಧಿಸಿದ ಘಟನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟ ಪಡಿಸಿದ್ದಾರೆ.

ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಸಿದ್ದರಾಮನಹುಂಡಿಯಲ್ಲಿ ಗುರುವಾರ ನಡೆದಿರುವ ಗಲಾಟೆ ಬೈಕ್ ಅಪಘಾತಕ್ಕೆ ಸಂಬಂಧಿಸಿದ್ದೇ ಹೊರತು ಚುನಾವಣಾ ಘರ್ಷಣೆಯಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದರ ಹೊರತಾಗಿಯೂ ಇದಕ್ಕೆ ರಾಜಕೀಯ ಘರ್ಷಣೆಯ ಬಣ್ಣ ಬಳಿದು ಸುಳ್ಳು ಆರೋಪ ಮಾಡುತ್ತಿರುವ ಸಂಸದ ಪ್ರತಾಪ್ ಮತ್ತು ಇತರರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

- Advertisement -

Latest Posts

Don't Miss