ಬಿಜೆಪಿ ಸರ್ಕಾರವೇ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ನೀಡಿದ್ದು ಸ್ವತಃ ಸಂಸದೆ ಶೋಭಾ ಕರಂದ್ಲಾಜೆಗೆ ಗೊತ್ತಿಲ್ಲವೆಂದು ಟ್ವಿಟರ್‌ನಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ, ಮಾಜಿ ಸಿಎಂ ಸಿದ್ದರಮಾಯ್ಯ, ಬಿಜೆಪಿ ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ.
ಈ ವೀಡಿಯೋದಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ಬಿಜೆಪಿ ಸರ್ಕಾರ ಎಲ್ಲಿಂದ ಮೀಸಲಾತಿ ಕೊಡಬೇಕು..? ಕಾಂಗ್ರೆಸ್ ಸರ್ಕಾರಕ್ಕೆ ಗೊತ್ತಿದೆ. ಅದು ಈ ಬಾರಿ ಅಧಿಕಾರಕ್ಕೆ ಬರುವುದಿಲ್ಲವೆಂದು. ಹಾಗಾಗಿ ಇಂಥ ವಿಷಯವೆಲ್ಲ ಹಬ್ಬಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ವೀಡಿಯೋವನ್ನು ಶೇರ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ 10 ರಷ್ಟು ಮೀಸಲಾತಿ ನೀಡಿ ಒಟ್ಟು ಮೀಸಲು ಪ್ರಮಾಣವನ್ನು ಶೇಕಡಾ 60ಕ್ಕೆ ಹೆಚ್ಚಿಸಿದ್ದು ಕೂಡಾ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಗೊತ್ತಿಲ್ಲ. ಸುಳ್ಳು ಹೇಳುವುದೇ ಅಭ್ಯಾಸವಾಗಿ ಬಿಟ್ಟರೆ ಸತ್ಯ ತಿಳಿಯುವುದೇ ಇಲ್ಲ ಎಂದಿದ್ದಾರೆ.
ಅಲ್ಲದೇ, ಮೀಸಲಾತಿಯನ್ನು ಶೇಕಡಾ 75ಕ್ಕೆ ಹೆಚ್ಚಿಸಲು ಹೇಗೆ ಸಾಧ್ಯ? ಎಂದು ಶೋಭಾಕರಂದ್ಲಾಜೆ ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಅವರ ಪಕ್ಷದ ಸರ್ಕಾರವೇ ಪರಿಶಿಷ್ಟ ಜಾತಿ/ಪಂಗಡದ ಮೀಸಲು ಹೆಚ್ಚಿಸಿ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇಕಡಾ 56ಕ್ಕೆ ಹೆಚ್ಚಿಸಿದ್ದು ಇವರ ಗಮನಕ್ಕೆ ಬಂದಿಲ್ಲ. ಅಜ್ಞಾನಕ್ಕೆ ಮದ್ದಿಲ್ಲ ಎಂದು ಸಿದ್ದರಾಮಯ್ಯ ಬರೆದಿದ್ದಾರೆ.
ಕೇಂದ್ರದಲ್ಲಿ @BJP4India ಸರ್ಕಾರವೇ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ 10 ರಷ್ಟು ಮೀಸಲಾತಿ ನೀಡಿ ಒಟ್ಟು ಮೀಸಲು ಪ್ರಮಾಣವನ್ನು ಶೇಕಡಾ 60ಕ್ಕೆ ಹೆಚ್ಚಿಸಿದ್ದು ಕೂಡಾ ಸಚಿವೆ @ShobhaBJP ಅವರಿಗೆ ಗೊತ್ತಿಲ್ಲ.
ಸುಳ್ಳು ಹೇಳುವುದೇ ಅಭ್ಯಾಸವಾಗಿ ಬಿಟ್ಟರೆ ಸತ್ಯ ತಿಳಿಯುವುದೇ ಇಲ್ಲ.
2/2 pic.twitter.com/S0Q7ZMPRPa— Siddaramaiah (@siddaramaiah) April 27, 2023
ಮೀಸಲಾತಿಯನ್ನು ಶೇಕಡಾ 75ಕ್ಕೆ ಹೆಚ್ಚಿಸಲು ಹೇಗೆ ಸಾಧ್ಯ? ಎಂದು @ShobhaBJP ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಅವರ ಪಕ್ಷದ ಸರ್ಕಾರವೇ ಪರಿಶಿಷ್ಟ ಜಾತಿ/ಪಂಗಡದ ಮೀಸಲು ಹೆಚ್ಚಿಸಿ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇಕಡಾ 56ಕ್ಕೆ ಹೆಚ್ಚಿಸಿದ್ದು ಇವರ ಗಮನಕ್ಕೆ ಬಂದಿಲ್ಲ.ಅಜ್ಞಾನಕ್ಕೆ ಮದ್ದಿಲ್ಲ.
1/2 pic.twitter.com/mGm9ZsZiRa— Siddaramaiah (@siddaramaiah) April 27, 2023