‘ದಮ್-ತಾಕತ್ ಇದ್ದ ಸಿಎಂ ಅಥವಾ 56 ಇಂಚಿನ ಎದೆಯ ಪ್ರಧಾನಿ ಬರಲಿ, ನಾನು ಚರ್ಚೆಗೆ ಸಿದ್ಧ’

ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ಬಿಜೆಪಿಗರಿಗೆ ಚಾಲೆಂಜ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಬಗ್ಗೆ ಕುಹಕವಾಡುವ ಬಿಜೆಪಿ ಪಕ್ಷದ ನಾಯಕರಿಗೆ ನನ್ನದೊಂದು ನೇರ ಸವಾಲು.

2013ರ ಕಾಂಗ್ರೆಸ್ ಪ್ರಣಾಳಿಕೆ ಮತ್ತು 2018ರ ಬಿಜೆಪಿ ಪ್ರಣಾಳಿಕೆಗಳಲ್ಲಿ ನೀಡಲಾದ ಭರವಸೆಗಳು ಹಾಗೂ ಈಡೇರಿಸಲಾಗಿರುವ ಭರವಸೆಗಳ ಬಗ್ಗೆ ಬಹಿರಂಗವಾಗಿ ಚರ್ಚೆ ನಡೆಸೋಣ. ದಮ್ –ತಾಕತ್ ಇದ್ದ ಮುಖ್ಯಮಂತ್ರಿಗಳು ಇಲ್ಲವೇ ಐವತ್ತಾರು ಇಂಚಿನ ಎದೆಯ ಪ್ರಧಾನಿಗಳು ಯಾರಾದರೂ ಬರಲಿ ನಾನು ಚರ್ಚೆಗೆ ಸಿದ್ಧನಿದ್ದೇನೆ. ನುಡಿದಂತೆ ನಡೆದಿರುವ ವಿಶ್ವಾಸ ನನ್ನದು, ಜನತಾ ಜನಾರ್ಧನರೇ ಇದಕ್ಕೆ ಸಾಕ್ಷಿ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

‘ಹಾಸನಕ್ಕೆ ಈ ಗಿರಾಕಿ ಒಂದು ಬೈಪಾಸ್ ಮಾಡೋದಕ್ಕೆ ಆಗಿಲ್ಲ’

‘ಈ ಪರ್ಸಂಟೇಜ್ ಗಿರಾಕಿಗಳ ಜೊತೆ ಹೋಗಬಾರದು ಎಂದು ಹೋಗಲಿಲ್ಲ’

‘ಉತ್ತರದಲ್ಲಿ ಗ್ಯಾರೆಂಟಿ ಕೊಟ್ಟು ಜನರೇ ಮನೆಗೆ ಕಳಿಸಿದ್ದಾರೆ. ಕರ್ನಾಟಕ‌ ಮಾತ್ರ ಬಾಕಿ ಇದೆ‌’

About The Author