ಮಂಡ್ಯ: ಮಾಜಿ ಸಿಎಂ ಸಿದ್ದರಾಮಯ್ಯ ಮಂಡ್ಯದ ತಿರುಮಲಾಪುರಕ್ಕೆ ಆಗಮಿಸಿದ್ದು, ಇಲ್ಲಿನ ಹುಲಿಯೂರಮ್ಮ ದೇಗುಲವನ್ನು ಉದ್ಘಾಟಿಸಿದರು. ಈ ವೇಳೆ ಸಿದ್ದರಾಮಯ್ಯರನ್ನು ಸ್ವಾಗತಿಸಲು ಸೇಬಿನ ಹಾರವನ್ನು ತರಲಾಗಿತ್ತು. ಸಿದ್ದರಾಮಯ್ಯರಿಗೆ ಸೇಬಿನ ಹಾರ ಹಾಕಿ ತೆಗೆದ ಬಳಿಕ, ಸೇಬು ಹಣ್ಣನ್ನು ಕಿತ್ತುಕೊಳ್ಳಲು ಅಲ್ಲಿನ ಜನರು ಮುಗಿಬಿದ್ದ ಘಟನೆ ನಡೆದಿದೆ.
ಗ್ರಾಮದ ಮುಖ್ಯದ್ವಾರದ ಬಳಿ ಬರುತ್ತಿದ್ದಂತೆ, ಸೇಬಿನ ಹಾರ ಹಾಕಿ ಸಿದ್ದರಾಮಯ್ಯರನ್ನು ಸ್ವಾಗತಿಸಲಾಗಿತ್ತು. ಮಾಜಿ ಸಿಎಂ ಕಾರ್‌ನಲ್ಲಿಯೇ ಕುಳಿತು, ಸ್ವಾಗತವನ್ನು ಸ್ವಿಕರಿಸಿ, ಮುನ್ನಡೆದರು. ತದನಂತರ, ಸೇಬು ಹಣ್ಣಿಗಾಗಿ ಮುಗಿಬಿದ್ದ ಜನ, ಮಾಜಿ ಸಿಎಂ ಕಾರ್ ಮುಂದೆ ಜಮಾವಣೆಗೊಂಡು, ಕೊಂಚ ಹೊತ್ತು ಕಿರಿಕಿರಿ ಮಾಡಿದ್ದಾರೆ.
ಕೈಗೆ ಸಿಕ್ಕಷ್ಟು ಸೇಬು ಹಣ್ಣನ್ನು ಕಿತ್ತುಕೊಂಡಿದ್ದು, ಇದನ್ನು ನೋಡಿದ ಪೊಲೀಸರು, ಎಚ್ಚೆತ್ತು, ಕ್ರೇನ್ ಮೂಲಕ ಸೇಬಿನ ಹಾರವನ್ನು ಮೇಲೆತ್ತಿಸಿ, ಜನರನ್ನು ನಿಯಂತ್ರಿಸಿದ್ದಾರೆ.
ಮಹಿಳೆಯರ ಸಬಲೀಕರಣ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ: ಕೃಷ್ಣ ಪಾಲ್ ಗುರ್ಜರ್
ಮದ್ದೂರಿನಲ್ಲಿ ಜಯಭೇರಿ ಬಾರಿಸಲೇಬೇಕೆಂದು ಪಣತೊಟ್ಟ ಬಿಜೆಪಿ: ಕ್ಷೇತ್ರಕ್ಕೆ ಕೇಂದ್ರ ಸಚಿವರ ಭೇಟಿ..