ಬಾದಾಮಿ: ನಿನ್ನೆ ಬಾದಾಮಿಯಲ್ಲಿ ಬಿಜೆಪಿ ಪರ ಮತಪ್ರಚಾರ ಮಾಡಿದ ಮಾಜಿ ಸಿಎಂ ಯಡಿಯೂರಪ್ಪ, ವರುಣಾದಲ್ಲಿ ಸಿದ್ದರಾಮಯ್ಯನ ಸೋಲಿಸುವ ಜವಾಬ್ದಾರಿ ನನ್ನದು ಎಂದು ಹೇಳಿದ್ದಾರೆ.
ಬಾದಾಮಿ ಜನರನ್ನು ಕುರಿತು ಮಾತನಾಡಿದ ಯಡಿಯೂರಪ್ಪ, ನಾನು ನಿಮಗೊಂದು ಮಾತು ಹೇಳುವುದಕ್ಕೆ ಇಚ್ಛಿಸುತ್ತೇನೆ. ಶಾಂತಗೌಡ ಪಾಟೀಲರನ್ನ ಗೆಲ್ಲಿಸುವ ಜವಾಬ್ದಾರಿ ನೀವು ತೆಗೆದುಕೊಳ್ಳಿ. ವರುಣಾದಲ್ಲಿ ಸಿದ್ದರಾಮಯ್ಯರನ್ನು ಸೋಲಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ. ವರುಣಾದಲ್ಲಿ ನಮ್ಮ ಸೋಮಣ್ಣನವರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ಅಲ್ಲದೇ, ನಾನು ಒಂದು ದಿನ ಮಾತ್ರ ವರುಣಾದಲ್ಲಿ ಪ್ರಚಾರ ಮಾಡುತ್ತೇನೆಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಅವರಿಗೆ ವರುಣಾ ಬಿಟ್ಟು ಹೋಗಲಿಕ್ಕೆ ಆಗದ ದುಸ್ಥಿತಿ ಬಂದಿರುವುದನ್ನ, ನೀವೆಲ್ಲರೂ ಗಮನಿಸಿದ್ದೀರಾ. ಬಾದಾಮಿಗೆ ಸಿದ್ದರಾಮಯ್ಯನವರು ಏನು ಮಾಡಿದ್ದಾರೆಂಬ ಪಟ್ಟಿಯನ್ನ ಕೊಡಬೇಕು. ಒಂದು ರೀತಿ, ಚುನಾವಣೆಯಲ್ಲಿ ಗೆಲ್ಲಿಸಿಕೊಟ್ಟಂಥ ಬಾದಾಮಿ ಜನರಿಗೆ, ನಂಬಿಕೆ ದ್ರೋಹ ವಿಶ್ವಾಸ ದ್ರೋಹ ಮಾಡಿದ್ದಾರೆ. ಹಾಗಾಗಿ ಇಲ್ಲಿ ಮತ್ತೊಮ್ಮೆ ಬಂದರೆ, ತಾನು ಗೆಲ್ಲಲು ಸಾಧ್ಯವಿಲ್ಲ ಅಂತಾ ಅವರಿಗೆ ಗೊತ್ತಾಗಿದೆ. ಹಾಗಾಗಿ ಅವರಿಲ್ಲಿ ಬಂದಿಲ್ಲ. ಹಾಗಾಗಿ ಅವರಿಗೆ ಪಾಠವನ್ನು ಕಲಿಸಿ, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ನಿಮ್ಮಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಯಡಿಯೂರಪ್ಪನವರು, ಬಾದಾಮಿ ಜನರಲ್ಲಿ ಮನವಿ ಮಾಡಿದ್ದಾರೆ.
ಗಾಂಧಿನಗರದಲ್ಲಿ ಸೋಲುವ ಭಯದಿಂದ ಕಾಂಗ್ರೆಸ್ ದಾಳಿ: ಬಿಜೆಪಿ ನಾಯಕರಿಂದ ಗಂಭೀರ ಆರೋಪ
ಗಾಂಧಿನಗರದಲ್ಲಿ ಸೋಲುವ ಭಯದಿಂದ ಕಾಂಗ್ರೆಸ್ ದಾಳಿ: ಬಿಜೆಪಿ ನಾಯಕರಿಂದ ಗಂಭೀರ ಆರೋಪ