- Advertisement -
ಕೊಲ್ಕತ್ತಾ: ಭಾರತದ ಲೆಜೆಂಡರಿ ಮಾಜಿ ಫುಟ್ಬಾಲ್ ಆಟಗಾರ ಮತ್ತು ಮಾಜಿ ಕೋಚ್ ಸುಭಾಷ್ ಭೌಮಿಕ್ ಅವರು ಶನಿವಾರ ನಿಧನರಾದರು.
ಇವರಿಗೆ 72 ವರ್ಷ ವಯಸ್ಸಾಗಿತ್ತು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಸುಭಾಷ್ ಭೌಮಿಕ್ ಮೂರೂವರೆ ತಿಂಗಳಿಂದ ಕೊಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
23 ವರ್ಷಗಳ ಹಿಂದೆ ಬೈಪಾಸ್ ಸರ್ಜರಿಗೂ ಒಳಗಾಗಿದ್ದರು. ಇಂದು ಬೆಳಗಿನಜಾವ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು.
19ನೇ ವರ್ಷಕ್ಕೆ ಪುಟ್ಭಾಲ್ ಆಟಕ್ಕೆ ಪದಾರ್ಪಣೆ ಮಾಡಿದ ಸುಭಾಷ್ ಭೌಮಿಕ್, 1970ರ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ವಿಜೇತ ಪಡೆದ ತಂದಡಲ್ಲಿದ್ದರು. 1979ರಲ್ಲಿ ನಿವೃತ್ತಿ ಪಡೆದ ಇವರು ಕೋಚ್ ಆಗಿ ಕೆಲಸ ಮಾಡಿದ್ದರು. ಈಸ್ಟ್ ಬೆಂಗಾಲ್ ತಂಡಕ್ಕೆ ತರಬೇತಿ ನೀಡುತ್ತಾ ಸತತ ರಾಷ್ಟ್ರೀಯ ಲೀಗ್ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
- Advertisement -