Friday, December 20, 2024

Latest Posts

ಹರಿಯಾಣಾದ ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲಾ ಹೃದಯಾಘಾತದಿಂದ ನಿಧನ

- Advertisement -

Political News: ಹರಿಯಾಣಾದ ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲಾ(89) ಹೃದಾಯಾಘಾತದಿಂದ ನಿಧನರಾಗಿದ್ದಾರೆ. ಚೌಟಾಲಾ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು, ಹರ್ಯಾಣಾದ ಗುರ್‌ಗಾವ್‌ನ ತಮ್ಮ ನಿವಾಸದಲ್ಲಿ ಚೌಟಾಲಾ ನಿಧನರಾಗಿದ್ದಾರೆ.

ಚೌಟಾಲಾ 4 ಬಾರಿ ಹರಿಯಾಣಾದ ಸಿಎಂ ಆಗಿದ್ದಾರೆ. ಆದರೆ ಇವರು ರಾಜಕೀಯಕ್ಕಿಂತ ಹೆಚ್ಚಾಗಿ ವಿವಾಾದಕ್ಕೆ ಹೆಚ್ಚು ಪ್ರಸಿದ್ಧರಾಗಿದ್ದ ಸಿಎಂ ಆಗಿದ್ದರು. ಅಕ್ರಮವಾಗಿ 3 ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು ನೇಮಕ ಮಾಡಿದ್ದ ಕಾರಣಕ್ಕೆ ಇವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ್ದರು. ಅಲ್ಲದೇ, ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿಯೂ ಇವರಿಗೆ 4 ವರ್ಷ ಜೈಲು ಶಿಕ್ಷೆಯಾಗಿತ್ತು.

ಜೈಲು ವಾಸ ಅನುಭವಿಸುತ್ತಿದ್ದ ವೇಳೆ ಅವರಿಗೆ 82 ವರ್ಷ ವಯಸ್ಸಾಗಿತ್ತು. ಈ ವಯಸ್ಸಿನಲ್ಲಿ ಅವರು ಜೈಲಿನಿಂದಲೇ ಪರೀಕ್ಷೆ ಬರೆದು 12ನೇ ತರಗತಿ ಪರೀಕ್ಷೆ ಬರೆದು ಫಸ್ಟ್‌ ಕ್ಲಾಸ್‌ನಲ್ಲಿ ಪಾಾಸ್ ಆಗಿದ್ದರು.

- Advertisement -

Latest Posts

Don't Miss