ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್ ಚೌಹಾಣ್ ಬಿಜೆಪಿ ಸೇರ್ಪಡೆ

Political News: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹಾಣ್, ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ್ದಾರೆ. ಮುಂಬೈನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅಶೋಕ್ ಚೌಹಾಣ್ ಬಿಜೆಪಿ ಸೇರ್ಪಡೆಯಾಗಿದ್ದು, ಇವರೊಂದಿಗೆ ಮಾಜಿ ಕಾಂಗ್ರೆಸ್ ಎಂಎಲ್‌ಸಿ ಅಮರ್ ಕೂಡ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಸೋಮವಾರದಂದು ಅಶೋಕ್ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅಶೋಕ್ ಚೌಹಾಣ್, ನಾನು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದೇನೆ. ಆದರೆ ಇನ್ನೊಂದು ಪಕ್ಷಕ್ಕೆ ಸೇರುವ ಯೋಚನೆ ಮಾಡಿಲ್ಲವೆಂದು ಹೇಳಿದ್ದರು.

ಅಲ್ಲದೇ, ನಾನು ಕಾಂಗ್ರೆಸ್ ಪಕ್ಷಕ್ಕಾಗಿ ಹೆಚ್ಚು ದುಡಿದಿದ್ದೇನೆ. ರಾಜೀನಾಮೆ ನೀಡುತ್ತಿರುವುದು, ಪಕ್ಷ ತೊರೆಯುತ್ತಿರುವುದು ನನ್ನ ವೈಯಕ್ತಿಕ ನಿರ್ಧಾರ ಎಂದು ಹೇಳಿದ್ದರು. ಆದರೆ ಪಕ್ಷ ತೊರೆದು ಮರುದಿನವೇ, ಇದೀಗ ಬಿಜೆಪಿ ಪಕ್ಷಕ್ಕೆ ಅಶೋಕ್ ಸೇರ್ಪಡೆಯಾಗಿದ್ದಾರೆ.

ಕ್ರಿಕೇಟಿಗ ರವಿಂದ್ರ ಜಡೇಜಾ ವಿರುದ್ಧ ಅಪ್ಪನ ಆರೋಪ: ಸೊಸೆ ರಿವಾಬ ಹೇಳಿದ್ದೇನು..?

ಬಾಲಕರಾಮನ ದರ್ಶನ ಪಡೆದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್

ಅಭಿಮಾನಿಯ ಮೊಬೈಲ್ ಕಸಿದು ಎಸೆದ ಬಾಲಿವುಡ್ ಗಾಯಕ ಆದಿತ್ಯ ನಾರಾಯಣ್

About The Author