Political News: ಮಹಾರಾಷ್ಟ್ರದ ಮಾಜಿ ಸಿಎಂ ಏಕನಾಥ್ ಶಿಂಧೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಥಾಣೆಯ ಆಸ್ಪತ್ರೆಗೆ ಸೇರಿ, ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಲ್ಕೈದು ದಿನಗಳಿಂದ ಜ್ವರವಿದ್ದು, ಶಿಂಧೆ ತಮ್ಮ ಹಳ್ಳಿಗೆ ಹೋಗಿ, ಅಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಆದರೆ ಮುಂಬೈಗೆ ಆಗಮಿಸಿದ ಬಳಿಕ, ಅನಾರೋಗ್ಯ ಹೆಚ್ಚಾಗಿ, ಇದೀಗ ಥಾಣೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಢಂಘ್ಯೂ, ಮಲೇರಿಯಾ ಪರೀಕ್ಷೆ ಮಾಡಲಾಗಿದ್ದು, ನೆಗೆಟಿವ್ ಎಂದು ಬಂದಿದೆ. ದೇಹದಲ್ಲಿ ಪ್ಲೇಟ್‌ಲೇಟ್ಸ್ ಕಡಿಮೆಯಾಗಿರುವ ಹಿನ್ನೆಲೆ, ದೇಹದಲ್ಲಿ ಹೆಚ್ಚು ಶಕ್ತಿ ಇಲ್ಲದಂತಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಏಕನಾಥ್ ಶಿಂಧೆಯೊಂದಿಗೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಇದ್ದು, ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ.
ಕೆಲ ದಿನಗಳ ಹಿಂದೆ ನಡೆದಿದ್ದ ಸಭೆ ಬಳಿಕ, ಏಕನಾಥ್ ಶಿಂಧೆ ಸಿಟ್ಟಾಗಿದ್ದಾರೆಂದು ಸುದ್ದಿ ಹಬ್ಬಿಸಲಾಗಿತ್ತು. ಆದರೆ ಶಿಂಧೆಯ ಆರೋಗ್ಯ ಹಾಳಾಗಿದ್ದ ಕಾರಣ, ಸಭೆ ಮುಗಿಸಿ ಶಿಂಧೆ ಸತಾರಾದಲ್ಲಿರುವ ತಮ್ಮ ಮೂಲಮನೆಗೆ ಹೋಗಿದ್ದರು. ಅಲ್ಲಿ ರೆಸ್ಟ್ ತೆಗೆದುಕೊಂಡು ಪುನಃ ಮುಂಬೈಗೆ ಮರಳಿದರೆ, ಅನಾರೋಗ್ಯ ಇನ್ನೂ ಹೆಚ್ಚಾಗಿದೆ. ಈ ಕಾರಣಕ್ಕೆ ಶಿಂಧೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.