ಮಂಡ್ಯ: ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಚೆಲುವರಾಯಸ್ವಾಮಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಿಂದೂ ಪದದ ಬಗ್ಗೆ ಚರ್ಚೆ ನಡೆಯುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಚೆಲುವರಾಯಸ್ವಾಮಿ, ಬಿಜೆಪಿ ಹಿಂದೂತ್ವವನ್ನ ಚುನಾವಣೆ ಅಸ್ತ್ರವಾಗಿ ಬಳಸಿಕೊಳ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಕೆಲವೊಮ್ಮೆ ಆಕಸ್ಮಿಕ, ಬಾಯಿ ತಪ್ಪಿ ಜನಪ್ರತಿನಿಧಿಗಳು ಅನೇಕರು ಮಾತನಾಡಿದ್ದಾರೆ. ವಿಷಾಧ ವ್ಯಕ್ತಪಡಿಸಿ ವಾಪಸ್ ತೆಗೆದುಕೊಂಡ ಮೇಲೆ ಬಿಜೆಪಿಯವರು ಹೈಲೈಟ್ ಮಾಡ್ತಿದ್ದಾರೆ. ರಾಜಕೀಯವಾಗಿ ಬಳಸಿಕೊಳ್ಳುವುವದರಲ್ಲಿ ಬಿಜೆಪಿಯವರು ನಿಸ್ಸಿಮರು. ಈ ವಿಚಾರದಲ್ಲಿ ಸಾವಿರಾರು ಕೋಟಿ ಹಾಕ್ತಾರೆ. ಚುನಾವಣೆ ಅಸ್ತ್ರವಾಗಿ ಬಳಸಿಕೊಳ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಚೆಲುವರಾಯಸ್ವಾಮಿ ಕಿಡಿ ಕಾರಿದ್ದಾರೆ.
ವ್ಯಕ್ತಿಯ ಶವ ಸಂಸ್ಕಾರವಾದ ಬಳಿಕ ಈ ಕೆಲಸವನ್ನು ಖಂಡಿತ ಮಾಡಿ..
ಇನ್ನು ಟಿಪ್ಪು ಪ್ರತಿಮೆ ನಿರ್ಮಾಣದ ಬಗ್ಗೆ ಶಾಸಕ ತನ್ವಿರ್ ಶೆಠ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಚೆಲುವರಾಯಸ್ವಾಮಿ, ಟಿಪ್ಪು ಈ ಭಾಗದಲ್ಲಿ ಪ್ರಮಾಣಿಕವಾದ ಆಡಳಿತ ಮಾಡಿದ ದೇಶ ಪ್ರೇಮಿ. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ ಇದೆ. ಟಿಪ್ಪು ಪ್ರತಿಮೆ ನೀರ್ಮಾಣ ಮಾಡೋದು ತಪ್ಪೆನು? ಕೆಂಪೇಗೌಡರಿಗೂ ಇವರಿಗೂ ಹೋಲಿಕೆ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಶಿವನ ದೇವಸ್ಥಾನಕ್ಕೆ ಹೋದಾಗ ಪೂರ್ತಿಯಾಗಿ ಪ್ರದಕ್ಷಿಣೆ ಯಾಕೆ ಹಾಕಬಾರದು..?
ಅಲ್ಲದೇ, ಕೆಂಪೇಗೌಡರು ಬೆಂಗಳೂರು ಕಟ್ಟಿದ್ದು. ಕೆಂಪೇಗೌಡರ ಜಯಂತಿ, ಏರ್ಪೋರ್ಟ್, ಮಾಡಿದ್ದು ಕಾಂಗ್ರೆಸ್ ಪಕ್ಷ. ಇವಾಗ ಕೆಂಪೇಗೌಡರ ಪ್ರತಿಮೆಯನ್ನ ಬಿಜೆಪಿ ಸ್ವಾಗತ ಮಾಡ್ತಿದೆ. ನಾವು ಸಂತೋಷ ಪಡ್ತೇವೆ, ಸಂಗೊಳ್ಳಿ ರಾಯಣ್ಣ ಪ್ರತಿಮೆ ಮಾಡೋದು ತಪ್ಪೇನು..? ಬಿಜೆಪಿಯವರು ಎಲ್ಲದಕ್ಕೂ ವಿರೋಧ ಮಾಡ್ತಾರೆ,. ಟಿಪ್ಪು ಪ್ರತಿಮೆ ಮಾಡೋದು ತಪ್ಪಿಲ್ಲ. ಕಾಂಗ್ರೆಸ್‌ಗೆ ಅಲ್ಪಸಂಖ್ಯಾತ ಓಟು ಹಾಗಿದ್ರೆ ಬಿಜೆಪಿಯವರದು ಏನು? ಹಿಂದೂತ್ವ ಇಟ್ಟುಕೊಂಡು ಓಟ್ ಗಿಮಿಕ್ ಮಾಡ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಚೆಲುವರಾಯಸ್ವಾಮಿ ಕಿಡಿ ಕಾರಿದ್ದಾರೆ.