- Advertisement -
ಮಂಡ್ಯ: ಸಿದ್ದರಾಮಯ್ಯ ಖಳನಾಯಕ ಎಂದು ನಳೀನ್ ಕುಮಾರ್ ಕಟೀಲ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎನ್.ಚೆಲುವರಾಯಸ್ವಾಮಿ, ಕಟೀಲ್‌ನ ನಾಲಿಗೆ-ಮೆದುಳಿಗೆ ಕನೆಕ್ಷನ್ ಇಲ್ಲ, ಕಟೀಲ್-ಸಿಟಿ ರವಿನಾ ಆಸ್ಪತ್ರೆಗೆ ಸೇರಿಸಿ ಎಂದು ಹೇಳಿದ್ದಾರೆ.
ಬಿಜೆಪಿಯವರ ಒಂದಷ್ಟು ಜನಕ್ಕೆ ಕನೆಕ್ಷನ್ ಇಲ್ಲ. ಸಿದ್ದರಾಮಯ್ಯಗೆ ಬೈದರೆ ಬಿಜೆಪಿಯವರಿಗೆ ವೈಯಕ್ತಿಕ ಲಾಭ. ಕಟೀಲ್ ಅಧ್ಯಕ್ಷರಾಗಿದ್ದಾರೆ, ಮೂರು ಸಲ ತೆಗೆಯಲು ಹೊರಟಿದ್ರು. ಚುನಾವಣಾ ಟೈಮ್ RSS ಬ್ಯಾಗೌಂಡ್ ಇದೆ ಅಂತ ಇಟ್ಟಿಕೊಂಡಿದ್ದಾರೆ. ಸಿದ್ದರಾಮಯ್ಯ-ಕಟೀಲ್ ಗೆ ಹೋಲಿಕೆ ಮಾಡಲು ಸಾದ್ಯವಿಲ್ಲ. ಸಿದ್ದರಾಮಯ್ಯ ರಾಜ್ಯದ ಜನರ ಪರ ಕೆಲಸ ಮಾಡಿದವರು. ಸಿದ್ದರಾಮಯ್ಯ ಬಗ್ಗೆ ಮಾತನಾಡಬೇಕಾದ್ರೆ ಹಿಡಿತ ಇಟ್ಟುಕೊಳ್ಳಿ ಎಂದು ಕಟೀಲ್‌ಗೆ ಮಾಜಿ ಸಚಿವ ಚೆಲುವರಾಯಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
- Advertisement -