ಹಾಸನ: ಹಾಸನದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಬಿಜೆಪಿ ವಿರುದ್ಧ ಹರಿಹಾಯ್ದಿದ್ದು, ರಾಜ್ಯದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಆಗಿದೆ. ಬಿಜೆಪಿ ಸರ್ಕಾರ ರಾಜಕೀಯದ ದ್ವೇಷದ ಮೇಲೆ ಹಿಂದೆ ಐದು ವರ್ಷ ಅಧಿಕಾರಕ್ಕೆ ಬಂದಾಗ, ಈಗ ಮೂರು ವರ್ಷ ಅಧಿಕಾರಕ್ಕೆ ಬಂದಾಗ, ದುಡ್ಡಿಗೋಸ್ಕರ ಸಂಪೂರ್ಣ ಅಭಿವೃದ್ಧಿ ನಾಶ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
‘ನಾ ಬರಲ್ಲಾ ಅಂದ್ರೆ ಬರಲ್ಲಾ, ಅರಮನೆ ಬಿಟ್ಟು ಕಾಡಿಗೆ ಬರಲ್ಲ’
ಅಲ್ಲದೇ, ವಿಮಾನ ನಿಲ್ದಾಣಕ್ಕೆ ಅನುಮತಿ ಕೊಟ್ಟಿದ್ದು ಕುಮಾರಸ್ವಾಮಿ ಅವರ ಕಾಲದಲ್ಲಿ. ನಂತರ ಕಂಟ್ರಾಕ್ಟರ್ ಗಳಿಂದ ಕಾಮಗಾರಿಯಲ್ಲಿ ವ್ಯವಹಾರ ಮಾಡಿಕೊಂಡರು. ಮಾಜಿ ಪ್ರಧಾನಿ, ಸಿಎಂ ಆಗಿದ್ದಾಗ ಮಾಡೊಕೊಳ್ಳಬಹುದಿತ್ತಲ್ವಾ ಅಂತಾ ಯಾರೋ ಹೇಳ್ತಿದ್ದಾರೆ. ಅವರು ಮೊದಲು ರೆಕಾರ್ಡ್ ತೆಗೆದು ನೋಡಬೇಕು. ವಿಮಾನ ನಿಲ್ದಾಣದ ಕಾಮಗಾರಿ ಕೊಡ್ತೇವೆ ಅಂತಾ ಕಂಟ್ರಾಕ್ಟ್ ಗಳ ಬಳಿ ಅಡ್ವಾನ್ಸ್ 20 ಕೋಟಿ ತೆಗೆದುಕೊಳ್ಳಲಾಗಿದೆ. ಕಂಟ್ರಾಕ್ಟರ್ ಗಳೇ ಬಂದು ನನ್ನ ಬಳಿ ಹೇಳಿದ್ದಾರೆ ಎಂದು ರೇವಣ್ಣ ಹೇಳಿಕೆ ನೀಡಿದ್ದಾರೆ.
ಸಾರ್ ನಾವು ಈಗಾಲೇ 20 ಕೋಟಿ ಅಡ್ವಾನ್ಸ್ ಕೊಟ್ಟಿದ್ದೇವೆ, ಏನೂ ತೊಂದರೆ ಮಾಡಬೇಡಿ ಅಂತಾ ಕಂಟ್ರಾಕ್ಟರ್ ಗಳು ನನ್ನ ಬಳಿ ಬಂದಿದ್ರು. ಹೂಡಾದಿಂದ 100 ಕೋಟಿ ಡೀಲ್ ಅಡ್ವಾನ್ಸ್ ತೆಗೆದುಕೊಳ್ಳಲಾಗಿದೆ. ಅವರಿಗೆ 50 ಕೋಟಿ ಇವರಿಗೆ 50 ಕೋಟಿ ಅಂತಾ ಡೀಲ್ ಆಗಿದ್ಯಂತೆ. ಯಾರಿಗೆ ಅಂತಾ ಸರ್ಕಾರಕ್ಕೆ ಕೇಳಿ..? ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ. ಸರ್ಕಾರದ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಡೀಲ್ ಆಗಿದೆ. ಇದರ ಬಗ್ಗೆ ಮಾತಾಡೋಕೆ ಮೋದಿಯವರಿಗೆ ತಾಕತ್ ಇದ್ಯಾ ಕೇಳಿ..? ಮುಂದೆ ಬಿಜೆಪಿ ಸರ್ಕಾರ ಬರಲ್ಲ ಗೊತ್ತಿದೆ. ಹಾಗಾಗಿ ದುಡ್ಡು ಹೊಡೆಯೋ ಪ್ರೋಗ್ರಾಂ ಮಾಡ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ದ ಹೆಚ್.ಡಿ.ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.
‘ಕಾಂತಾರ’ ನೋಡಿ ಮಾತೇ ಹೊರಡುತ್ತಿಲ್ಲ ಎಂದು ಸುದೀಪ್..
ಇನ್ನು ಟ್ರೈನ್ಗೆ ಟಿಪ್ಪು ಹೆಸರು ಬದಲಿಯಾಗಿ ಒಡೆಯರ್ ಹೆಸರು ಇಟ್ಟ ವಿಚಾರಕ್ಕೆ ಸಂಬಂಧಿಸಿದಂತೆ, ಟಿಪ್ಪು ಹೆಸರು ಬದಲಿಸಿದ್ದಕ್ಕೆ ಹೆಚ್.ಡಿ. ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಟಿಪ್ಪು ಅವರ ಹೆಸರು ಏಕೆ ತೆಗೆಯಬೇಕಾಗಿತ್ತು..? ಒಡೆಯರ್ ಹೆಸರು ಬೇಡ ಅಂತಾ ನಾನು ಹೇಳಲ್ಲ. ಇನ್ನು ಎರಡು ಹೊಸದಾಗಿ ಟ್ರೈನ್ ಬಿಟ್ಟು ಅದಕ್ಕೆ ಅವರ ಹೆಸರು ಇಡಬೇಕಾಗಿತ್ತು. ಈಗ ಎಲೆಕ್ಷನ್ ಬಂದಿದೆ, ಈಗ ಅವರಿಗೆ ಕುವೆಂಪು, ಒಡೆಯರ್ ನೆನಪಿಗೆ ಬಂದಿದ್ದಾರೆ . ಎಸ್ಸಿ, ಎಸ್ಟಿಗಳು ಕೂಡಾ ಚುನಾವಣೆ ಬಂತಲ್ಲ ಈಗ ನೆನಪಾಗಿದೆ. ಅಲ್ಪಸಂಖ್ಯಾತರಿಗೆ, ಹಿಂದುಳಿದವರಿಗೆ ಮೀಸಲಾತಿ ಕೊಟ್ಟಿದ್ದೇ ದೇವೇಗೌಡ್ರು. ಇದೆಲ್ಲಾ ಎಲೆಕ್ಷನ್ ಗಿಮಿಕ್ ಗೆ ಹೀಗೆ ಮಾಡ್ತಿದ್ದಾರೆ. ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಹೀಗೆಲ್ಲಾ ಮಾಡ್ತಿದ್ದಾರೆ ಎಂದು ಹೆಚ್.ಡಿ.ರೇವಣ್ಣ ಆರೋಪಿಸಿದ್ದಾರೆ.