ಹಾಸನ : ಹಾಸನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಮಂತ್ರಿ ಹೆಚ್.ಡಿ.ರೇವಣ್ಣ, ಹಾಸನದಲ್ಲಿ ಸ್ವರೂಪ್ ಜಯಭೇರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ.
ಹಾಸನದಲ್ಲಿ ಸ್ವರೂಪ್ ಇದ್ದಾನೆ ಕೆಲಸ ಮಾಡ್ತಾನೆ. ಅವರ ಜೊತೆ ನಾನು ನಿಲ್ತಿನಿ, ಸಂಸದರು ನಿಲ್ತಾರೆ. ಅವರ ತಂದೆ ಹೇಗೆ ಕೆಲಸ ಮಾಡಿದ್ರು, ಅದೇ ರೀತಿ ಕೆಲಸ ಮಾಡ್ತಾರೆ. ಜನರಿಗೆ ತೊಂದರೆಯಾಗದಂತೆ ಒಳ್ಳೆಯ ಕೆಲಸ ಮಾಡ್ತಾರೆ. ಪ್ರಕಾಶ್ ನಾಲ್ಕು ಬಾರಿ ಶಾಸಕರಾಗಿದ್ರು. ಅವರ ಮಗನನ್ನು ಗೆಲ್ಸಿದ್ದಾರೆ, ಅವರ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದು ಹೇಳಿದ್ದಾರೆ.
ಇನ್ನು ಪರೋಕ್ಷವಾಗಿ ರೇವಣ್ಣ ಪ್ರೀತಂಗೌಡಗೆ ಟಾಂಗ್ ನೀಡಿದ್ದು, ಕೆಲವರು ಹೇಳೋರು ಐವತ್ತು ಸಾವಿರ ಓಟನಲ್ಲಿ ಗೆಲ್ತಿನಿ. ಒಂದು ಲಕ್ಷ ಮತ ತಗೊತಿನಿ ಅಂತಿದ್ರು. ಜನ ಸ್ವರೂಪ್‌ನನ್ನು ಗೆಲ್ಲಿಸಿದ್ದಾರೆ ಎಂದು ಹೇಳಿದರು.
ಬಿಜೆಪಿಯ ಮುಖಂಡರೇ ಕಾಂಗ್ರೆಸ್ ಅಧಿಕಾರಕ್ಕೆ ತಂದಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಪಕ್ಷದ ಮುಖಂಡರು ಹಳೇ ಮೈಸೂರಿಗೆ ಬಂದು ಪ್ರಾದೇಶಿಕ ಪಕ್ಷ ಮುಗಿಸಲು ಕಾಂಗ್ರೆಸ್‌ಗೆ ಸಹಾಯ ಮಾಡಿದ್ರು. ಅವರಿಗೆ ಕಾಂಗ್ರೆಸ್ ಮುಖಂಡರು ಧನ್ಯವಾದ ಹೇಳಲಿ ಎಂದು ರೇವಣ್ಣ ವ್ಯಂಗ್ಯವಾಡಿದ್ದಾರೆ.
ಅಲ್ಲದೇ, ನಾನು ಓಟೇ ಕೇಳಲು ಹೋಗಿಲ್ಲ, ಜನ ನನ್ನನ್ನು ಉಳಿಸಿಕೊಂಡಿದ್ದಾರೆ. ಇನ್ನೂ ಐದು ವರ್ಷ ಇದೆ ಸರಿ ಮಾಡ್ಕತಿನಿ. ಆರು ಬಾರಿ ನನ್ನನ್ನು ಗೆಲ್ಸಿದ್ದಾರೆ. ಎರಡು ರಾಷ್ಟ್ರೀಯ ಪಕ್ಷದ ಮುಖಂಡರು ನನ್ನನ್ನು ಮುಗಿಸಲು ಯತ್ನಿಸಿದ್ರು. ನನಗೆ ಎಷ್ಟು ಓಟು ಬರಬೇಕು ಅದು ಬಂದಿದೆ. ಕಡಿಮೆ ಏಕೆ ಆಯ್ತು ನನಗೆ ಗೊತ್ತಿದೆ, ಅದನ್ನು ಹೇಗೆ ಸರಿ ಮಾಡಿಕೊಳ್ಳಬೇಕು ಅನ್ನೋದು ಗೊತ್ತಿದೆ. ಇನ್ನೂ ಐದು ವರ್ಷ ಟೈಂ ಇದೆ ಎಂದು ಹೇಳಿದ್ದಾರೆ.
ಹಾಸನ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನು ಮಾಡಬೇಕು ಅಂತ ನನ್ನ ಆಸೆ ಇದೆ. ನಾನು ಬದುಕಿರುವುದರೊಳಗೆ ಮಾಡಿ ತೋರುಸ್ತಿನಿ. ಐದು ವರ್ಷಕ್ಕೆ ಮಾಡ್ತಿನೋ, ಹತ್ತು ವರ್ಷಕ್ಕೆ ಮಾಡ್ತಿನೋ. ಇಡೀ ರಾಜ್ಯದಲ್ಲಿ ಹಾಸನ ಜಿಲ್ಲೆಯನ್ನು ನಂಬರ್ ಒನ್ ಮಾಡಿ ತೋರುಸ್ತಿನಿ. ಇಲ್ಲವಾದಲ್ಲಿ ಇನ್ನೊಂದು ಸಾರಿ ರಾಜಕೀಯಕ್ಕೆ ಬರಲ್ಲ. ಕಾಂಗ್ರೆಸ್‌ನವರು ಮಾಡಿ ಕೊಟ್ಟರೆ ಸಂತೋಷ. ಇಲ್ಲವಾದರೆ ನಮಗೂ ಟೈಂ ಬರುತ್ತೆ. ನನ್ನ ಗ್ರಹಗತಿಗಳು ಇನ್ನೂ ಚೆನ್ನಾಗಿವೆ ಎಂದು ಹೇಳಿದ್ದಾರೆ.
ದೇವೇಗೌಡರು ಇನ್ನೂ ಏಳೆಂಟು ವರ್ಷ ಬದುಕಿರುತ್ತಾರೆ. ದೇವೇಗೌಡರನ್ನು ಮತ್ತೆ ಪಾರ್ಲಿಮೆಂಟ್‌ಗೆ ಕರ್ಕೊಂಡು ಹೋಗೇ ಹೋಗ್ತಿವಿ. ದೇವೇಗೌಡರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸ್ತಿವಿ. ಯಾವ ಕ್ಷೇತ್ರ ಅಂತ ಮುಂದೆ ನೋಡೋಣ. ದೇವೇಗೌಡರಿಗೆ ಇನ್ನೂ ಹೋರಾಟ ಮಾಡುವ ಶಕ್ತಿ ಇದೆ. ಅವರು ನಿಲ್ಲಲ್ಲ ಅಂದ್ರು ನಾವು ಬಿಡಲ್ಲ. ಲೋಕಸಭೆ ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸಿ ಲೋಕಸಭೆಗೆ ಕಳಿಸುತ್ತೇವೆ. ಹಾಸನ ಜಿಲ್ಲೆಯಿಂದ ಲೋಕಸಭೆ ಚುನಾವಣೆಗೆ ಪ್ರಜ್ವಲ್‌ರೇವಣ್ಣನೆ ಸ್ಪರ್ಧೆ ಮಾಡ್ತಾನೆ ಎಂದು ರೇವಣ್ಣ ಹೇಳಿದ್ದಾರೆ.
‘ನಾನು ಸೋತು ಗೆದ್ದಿದ್ದೇನೆ. ರೇವಣ್ಣ ಗೆದ್ದು ಸೋತಿದ್ದಾರೆ. 2028ರ ಚುನಾವಣೆಗೆ ನಾಳೆಯಿಂದಲೇ ಸಿದ್ಧನಾಗ್ತೇನೆ’
‘ದ್ವೇಶ, ಬೂಟಾಟಿಕೆಯನ್ನು ಓದ್ದೋಡಿಸಿದ ಸ್ವಾಭಿಮಾನಿ ಕನ್ನಡಿಗರಿಗೆ ಧನ್ಯವಾದಗಳು, ಬೆತ್ತಲೆಯಾದ ಚಕ್ರವರ್ತಿ’