ಹಾಸನ: ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ರೇವಣ್ಣ, ಕಾಂಗ್ರೆಸ್ ಸಿಎಂ ಚರ್ಚೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಸಿಎಂ ಯಾರೇ ಆದರೂ ಸ್ವಾಗತ ಮಾಡ್ತಿನಿ. ಯಾರೇ ಆದರೂ ರಾಜ್ಯದ ಅಭಿವೃದ್ಧಿ ಮಾಡಲಿ. ಬಿಜೆಪಿ ಅಧಿಕಾರದಿಂದ ಇಳಿಯಬೇಕಾದರೆ ಶಾಕ್ ಕೊಟ್ಟಿದ್ದಾರೆ. ವಿದ್ಯುತ್ ದರ ಹೆಚ್ಚಿಸಿದ್ದಾರೆ ಅದನ್ನು ಇಳಿಸಲಿ. ಕಾಂಗ್ರೆಸ್‌ನವರು ಕೊಟ್ಟಿರುವ ಗ್ಯಾರೆಂಟಿ ಕಾರ್ಡ್‌ನ್ನು ಈಡೇರಿಸಲಿ. ನನಗೆ ಸಿದ್ದರಾಮಯ್ಯ ಅವರ ಮೇಲೆ ವೈಯಕ್ತಿಕವಾಗಿ ಗೌರವವಿದೆ. ವೈಯುಕ್ತಿಕ ಬೇರೆ, ರಾಜಕೀಯ ಬೇರೆ ಎಂದು ರೇವಣ್ಣ ಹೇಳಿದ್ದಾರೆ.
ಸಿಎಂ ಬಸವರಾಜ ಬೊಮ್ಮಯಿ ಜಿಲ್ಲೆಯಲ್ಲಿ ಒಂದೇ ಒಂದು ಸ್ಥಾನ ಗೆದ್ದಿದ್ದಾರೆ. ರೇವಣ್ಣ ಕ್ಷೇತ್ರದಲ್ಲಿ ನಾಲ್ಕು ಸ್ಥಾನ ಗೆಲ್ಸಿದ್ದಾರೆ. ವಾಲ್ಮೀಕಿ ಸಮುದಾಯದ ಪ್ರಮುಖ ಲೀಡರ್ ಶ್ರೀರಾಮುಲು ಇಪ್ಪತ್ತು ಸಾವಿರ ಮತದಿಂದ ಸೋತಿದ್ದಾರೆ ಹಾಸನ ಜಿಲ್ಲೆಯಲ್ಲಿ ನಮ್ಮ ಪಕ್ಷದಿಂದ ನಾಲ್ಕು ಜನ ಗೆದ್ದು ಮೂವರು ಸೋತಿದ್ದೇವೆ. ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಜನ ಮತ ಹಾಕಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ರೇವಣ್ಣ ಪ್ರತಿಕ್ರಿಯಿಸಿದ್ದಾರೆ.
ಕೆಲವೊಮ್ಮೆ ರಾಜಕೀಯದಲ್ಲಿ ಹೀಗೆಲ್ಲಾ ಆಗುತ್ತದೆ. ಅದನ್ನೆಲ್ಲಾ ಸ್ಪೋರ್ಟೀವ್ ಆಗಿ ತೆಗೆದುಕೊಳ್ಳಬೇಕು. ನಮ್ಮನ್ನು ಮುಗಿಸಲು ಎರಡೂ ಪಕ್ಷಗಳು ಕೆಲಸ ಮಾಡಿವೆ. ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ರಾಜ್ಯದ ಜನರಿಗೆ ಗ್ಯಾರೆಂಟಿ ಕಾರ್ಡ್ ಕೊಟ್ಟಿದ್ದಾರೆ. ಎಲ್ಲವನ್ನೂ ಅವರು ಈಡೇರಿಸಲಿ. ನಾವು ಅವರಿಗೆ ಸಹಕಾರ ನೀಡುತ್ತೇವೆ. ವಿರೋಧ ಪಕ್ಷದಲ್ಲಿ ನಾವು ಕೂರುತ್ತೇವೆ ಎಂದು ರೇವಣ್ಣ ಹೇಳಿದ್ದಾರೆ.
೧೯೮೯ ರಲ್ಲಿ ಎಂಟಕ್ಕೆ ಎಂಟು ಸ್ಥಾನ ಸೋತೆವು. ಮತ್ತೆ ಒಂದೇ ವರ್ಷದಲ್ಲಿ ದೇವೇಗೌಡರು ಲೋಕಸಭೆಗೆ ಸ್ಪರ್ಧಿಸಿದರು. ಆಗ ಆಡಳಿತಾರೂಢ ಪಕ್ಷವಿದ್ದರೂ ದೇವೇಗೌಡರು ಗೆದ್ದಿದ್ದರು. ಕೋಮುವಾದಿಗಳನ್ನ ದೂರವಿಡಲು ರಾಷ್ಟ್ರೀಯ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದಾರೆ. ಜಿಲ್ಲೆಯಲ್ಲಿ ನಾಲ್ಕು ಸ್ಥಾನ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಿಕೊಳ್ಳುತ್ತೇವೆ. ಮಂಡ್ಯದಲ್ಲಿ ಬಿಜೆಪಿ ಕಾಂಗ್ರೆಸ್ ಸೇರಿ ಜೆಡಿಎಸ್ ತೆಗಿಬೇಕು ಎಂದು ಕೆಲಸ ಮಾಡಿದ್ದಾರೆ. ಈ ರಾಜ್ಯದಲ್ಲಿ ಕಾಂಗ್ರೆಸ್ ಬರಬೇಕಿದ್ರೆ ಅದು ಬಿಜೆಪಿ ಮುಖಂಡರ ತಪ್ಪಿಂದಲೇ ಕಾರಣ. ಮಂಡ್ಯ, ನಾಗಮಂಗಲದಲ್ಲಿ ನಮ್ಮವರೇ ಎರಡು ಜನ ಸ್ಪರ್ಧೆ ಮಾಡಿದ್ರು. ನಮ್ಮವರೇ ಬಂಡಾಯ ನಿಂತಾಗ ಈ ರೀತಿ ತೊಂದರೆ ಆಗುತ್ತದೆ ಎಂದು ರೇವಣ್ಣ ಹೇಳಿದ್ದಾರೆ.
‘ನಾನು ಸೋತು ಗೆದ್ದಿದ್ದೇನೆ. ರೇವಣ್ಣ ಗೆದ್ದು ಸೋತಿದ್ದಾರೆ. 2028ರ ಚುನಾವಣೆಗೆ ನಾಳೆಯಿಂದಲೇ ಸಿದ್ಧನಾಗ್ತೇನೆ’
‘ದ್ವೇಶ, ಬೂಟಾಟಿಕೆಯನ್ನು ಓದ್ದೋಡಿಸಿದ ಸ್ವಾಭಿಮಾನಿ ಕನ್ನಡಿಗರಿಗೆ ಧನ್ಯವಾದಗಳು, ಬೆತ್ತಲೆಯಾದ ಚಕ್ರವರ್ತಿ’