ಹಾಸನ: ಹಾಸನದಲ್ಲಿ ಶಾಸಕ ಪ್ರೀತಂಗೌಡ ಹತಾಶೆ ಹೇಳಿಕೆಗೆ ರೇವಣ್ಣ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಹಾಸನ ಶಾಸಕ ಹತಾಶೆ ಹೇಳಿಕೆ ಕೊಟ್ಟಿದ್ದಾರೆ. ಅಲ್ಪ ಸಂಖ್ಯಾತರ ದಿಕ್ಕು ತಪ್ಪಿಸಲು ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಮೂವತ್ತು ವರ್ಷ ಕೆಲಸ ಮಾಡಿದ್ದೇನೆ. ಎಲ್ಲಾ ಸಮುದಾಯಗಳನ್ನ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ. ಅಧಿಕಾರ ತ್ಯಾಗ ಮಾಡಿ ಎಸ್ಟಿ ದಮುದಾಯಕ್ಕೆ ಅನುಕೂಲ ಮಾಡಿಕೊಟ್ಟಿರೋದು ದೇವೇಗೌಡ್ರು ಎಂದು ಹೇಳಿದ್ದಾರೆ.
ಅಲ್ಲದೇ, ಆ ಗಿರಾಕಿಗೆ ಹೇಳ್ತೀನಿ ಮೋದಿಯವರ ಜೊತೆ ನಾವು ಕೂತಿದ್ದು. ಇವತ್ತು ರಾಜೀನಾಮೆ ಕೊಡು ನಾಳೆ ನೀ ಪ್ರಮಾಣ ವಚನ ತಗೋ. ಐದು ವರ್ಷ ಯಾವುದೇ ತೊಂದರೇ ಇಲ್ಲದೆ ಅಧಿಕಾರ ಮಾಡು ಅಂದ್ರು. ಧರ್ಮಸ್ಥಳ ಮಂಜುನಾಥನ ಮೇಲೆ ಆಣೆ ಮಾಡಲಿ ಬೇಕಾದ್ರೆ. ನಾವು ಕೋಮುವಾದಿಗಳ ಜೊತೆ ಹೋಗಬಾರದು. ಈ ಪರ್ಸಂಟೇಜ್ ಗಿರಾಕಿಗಳ ಜೊತೆ ಹೋಗಬಾರದು ಎಂದು ಹೋಗಲಿಲ್ಲ. ಹೋಗಿ ಮಜಾ ಮಾಡ್ಕೊಂಡು ಅಧಿಕಾರ ಮಾಡಬಹುದಿತ್ತು. ಆದ್ರೆ ನಮಗೆ ಆ ರೀತಿ ಅಧಿಕಾರದ ಆಸೆ ಇಲ್ಲ ಎಂದು ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.
ನಾವು ಅಡ್ಜಸ್ಟ್ಮೆಂಟ್ ಮಾಡೋದಾಗಿದ್ರೆ ಸೀಟ್ ಹಂಚಿಕೆ ವೇಳೆಯಲ್ಲೇ ಮಾಡ್ಕೋಬಹುದಿತ್ತು. ನಾವು 123 ಗುರಿ ಇಟ್ಟುಕೊಂಡು ಹೊರಟಿದ್ದೇವೆ, ಕುಮಾರಣ್ಣ ಆರೋಗ್ಯ ಲೆಕ್ಕಿಸದೆ ಎರಡು ವರ್ಷದಿಂದ ಹೋರಾಟ ಮಾಡುತ್ತಿದ್ದಾರೆ. ಎಲ್ಲಾ ಸಮುದಾಯಕ್ಕೂ ನಾವು ಅನುಕೂಲ ಮಾಡಬೇಕು ಎನ್ನುವ ಉದ್ದೇಶ ನಮ್ಮದು ಎಂದು ರೇವಣ್ಣ ಹೇಳಿದ್ದಾರೆ.
‘ನಿಮ್ಮ ಮನೆ ಮಗ ನಾನು. ಮಂಡ್ಯದ ಸಮಗ್ರ ಅಭಿವೃದ್ಧಿಗೆ ನನಗೆ ಅವಕಾಶ ಕೊಡಿ’