ಹಾಸನ: ಹಾಸನದ ಬೇಲೂರಿನಲ್ಲಿ ಮಾತನಾಡಿ ಮಾಜಿ ಸಚಿವ ರೇವಣ್ಣ, ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೇ, ಮುಸ್ಲಿಮರ ಮೀಸಲಾತಿ ತೆಗೆದ ಬಗ್ಗೆಯೂ ಮಾತನಾಡಿದ್ದಾರೆ.
ಮುಸ್ಲಿಂ ಸಮುದಾಯಕ್ಕೆ ಕೊಟ್ಟಿದ್ದ ಮೀಸಲಾತಿ ತೆಗೆದಿದ್ದಾರೆ. ರಂಜಾನ್ ಇರುವಾಗಲೇ ಹೀಗೆ ಮಾಡಿದ್ದಾರೆ. ಅವರು ಭಕ್ತಿಯಿಂದ ಉಪವಾಸ ಮಾಡ್ತಿದ್ದಾರೆ. ಹೀಗೆ ಮಾಡಿದ್ದಕ್ಕೆ ಬಿಜೆಪಿಯರಿಗೆ ಶಾಪ ತಟ್ಟುತ್ತೆ, ಒಂದು ತಿಂಗಳು ಉಒವಾಸ ಮಾಡ್ತಿದ್ದಾರೆ, ಆ ಭಕ್ತಿಯೇ ಈ ಸರ್ಕಾರವನ್ನು ತೆಗೆದು ಹಾಕುತ್ತೆ, ನಾವ್ಯಾರು ತೆಗೆಯಬೇಕಿಲ್ಲ, ಬರೆದಿಟ್ಟುಕೊಳ್ಳಿ ಎಂದಿದ್ದಾರೆ.
ಅಲ್ಲದೇ, ರಾತ್ರಿ ಟೈಂ ಇಬ್ಬರು ಮಾತಾಡ್ಕೋತಾರೆ. ಇಬ್ಬರು ಅಡ್ಜಸ್ಟ್‌ಮೆಂಟ್ ರಾಜಕೀಯ. ಬೆಳಿಗ್ಗೆ ಎದ್ದರೆ ಅವರನ್ನು ಇವರು ಇವರನ್ನ ಅವರು ಬೈಯ್ಯೋದು. ಜಾತಿ ಸಂಘರ್ಷ ಮಾಡಿಕೊಂಡು ರಾಜಕೀಯ ಮಾಡಲು ಹೊರಟಿದ್ದಾರೆ. ಜನರು ಎಚ್ಚರಿಕೆಯಿಂದ ಮತ ಚಲಾವಣೆ ಮಾಡಬೇಕು ಎಂದು ರೇವಣ್ಣ ಎಚ್ಚರಿಕೆಯ ಮಾತನ್ನಾಡಿದ್ದಾರೆ.
ಇದೇ ವೇಳೆ ಅರಸಿಕೆರೆ ಮಾಜಿ ಶಾಸಕ ಶಿವಲಿಂಗೇಗೌಡ ವಿರುದ್ದ ಮಾಜಿ ಸಚಿವ ಹೆಚ್ ಡಿ ರೇವಣ್ಣ , ಆಕ್ರೋಶ ಹೊರಹಾಕಿದ್ದಾರೆ. ಇವನ್ನ ಗಿಣಿ ಸಾಕಿದಂಗೆ ಸಾಕಿದಿನಿ 15 ವರ್ಷ . ಅದ್ಯಾವುದೋ ಸಿನಿಮಾ ಹಾಡಿದ್ಯಲ್ಲ ಹಂಗೆ ಸಾಕಿದಿನಿ . ಆ ಹಾಡಂಗೆ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ ಅನ್ನೊಹಂಗೆ , ಈಗ ಇವನಿಗೆ ಕುರುಬರು ಓಟು ಹಾಕೋದಿಲ್ವ ..? ಈಗ ಶಿರಸಿ ತನಕ ರಾಜಿನಾಮೆ ಕೊಡೋಕೆ ಹೋಗಿದ್ದಾರೆ ಎಂದು ಹೇಳಿದ್ದಾರೆ.