ಹಾಸನ : ಹಾಸನದಲ್ಲಿ ಮಾಜಿಸಚಿವ ಎಚ್.ಡಿ.ರೇವಣ್ಣ ಮಾತನಾಡಿದ್ದು, ಹಾಸನ ಜಿಲ್ಲೆಯೊಳಗೆ, ಹಾಸನ ವಿಧಾನಸಭಾ ಕ್ಷೇತ್ರ, ಅರಸೀಕೆರೆ, ಬೇಲೂರು ಈ ಕಡೆಯಲ್ಲಿ ಬಿಜೆಪಿಯವರು ಒಂದು ಓಟಿಗೆ ಮೂರು ಸಾವಿರ ರೂಪಾಯಿ ಕೊಡ್ತಾವ್ರೆ ಎಂದು ಆರೋಪಿಸಿದ್ದಾರೆ.
ಓಟು ಹಾಕಿ ಮೊಬೈಲ್‌ನಲ್ಲಿ ಫೋಟೋ ಹೊಡೆದುಕೊಂಡು ಬಂದರೆ ಕ್ಯಾಶ್ ಕೊಡೋದು. ಜಿಲ್ಲಾಧಿಕಾರಿಗಳಿಗೆ, ರಾಜ್ಯ ಚುನಾವಣೆ ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ. ಬೂತ್‌ನ ಒಳಗೆ ಪೋನ್ ಒಳಗಡೆ ಬಿಡಬಾರದು. ಕೆಲವರು ಸೋಲುತ್ತೇನೆ ಎನ್ನುವ ಭಯದಲ್ಲಿ ಪೋಟೋ ಹೊಡೆದುಕೊಂಡು ಬನ್ನಿ, ಐಡಿ ಕಾರ್ಡ್ ಕೊಡಿ, ಚುನಾವಣೆಗೆ ಬರಬೇಡಿ ಎಂದು ಆಮಿಷ ಒಡ್ಡುತ್ತಿದ್ದಾರೆ ಎಂದು ರೇವಣ್ಣ ಆರೋಪಿಸಿದ್ದಾರೆ.
ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ರೇವಣ್ಣ ವಾಗ್ದಾಳಿ ನಡೆಸಿದ್ದು, ಎರಡು ರಾಷ್ಟ್ರೀಯ ಪಕ್ಷಗಳು ಕಾಂಗ್ರೆಸ್ 140, ಬಿಜೆಪಿ 120 ಅಂತ ಹೇಳ್ತಿದ್ದಾರೆ. ಈಗ ಜನರಿಗೆ ಗ್ಯಾರೆಂಟಿ ಕಾರ್ಡ್ ಕೊಡ್ತಿನಿ ಅಂತಿದ್ದಾರೆ. ಅರವತ್ತು ವರ್ಷದಿಂದ ಗ್ಯಾರೆಂಟಿ ಕಾರ್ಡ್ ಕೊಡಲು ಆಗಲಿಲ್ಲ. ಜಿಲ್ಲೆಯ ಇಬ್ಬರು ನಮ್ಮ ಪಕ್ಷದ ಶಾಸಕರಿಗೆ ಗ್ಯಾರೆಂಟಿ ಕಾರ್ಡ್ ಕೊಡ್ತಿನಿ ಅಂತ ಕರ್ಕೊಂಡು ಹೋದ್ರು. ಒಬ್ಬರಿಗೆ ಕಾರ್ಡ್ ಕೊಟ್ಟಿದ್ದಾರೆ, ಇನ್ನೊಬ್ಬರಿಗೆ ಗ್ಯಾರೆಂಟಿ ಕೊಡ್ದಲೆ ಬಿಟ್ರು. ಈ ರಾಜ್ಯದ ಪ್ರಭಾವಿ ಕಾಂಗ್ರೆಸ್ ಮುಖಂಡರು ಬಂದು ಭಾಷಣ ಮಾಡಿ ಹೋಗಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಕಳೆದ ಬಾರಿ ಇದ್ದ ಕಾಂಗ್ರೆಸ್- ಜೆಡಿಎಸ್ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದ ರೇವಣ್ಣ, ಕುಮಾರಸ್ವಾಮಿ ಜೊತೆ ಜೊಡೆತ್ತು ಓಡಾಡುತ್ತಿತ್ತಲ್ಲಾ, ಆ ಜೋಡೆತ್ತಿನಿಂದಲೇ ಕುಮಾರಸ್ವಾಮಿ ಸರ್ಕಾರ ಹೋಗಿದ್ದು, ಜೋಡೆತ್ತು ಬಿಟ್ಟಿದ್ರೆ ಕುಮಾರಣ್ಣನ ಸರ್ಕಾರ ಐದು ವರ್ಷ ಇರೋದು, ಏನು ಆಗ್ತಿರಲಿಲ್ಲ, ಕುಮಾರಸ್ವಾಮಿ ಒಳಗೆ ಇದ್ದು ಚಾಕು ಹಾಕಿದ್ರು, ಹದಿನಾಲ್ಕು ತಿಂಗಳು ಕುಮಾರಸ್ವಾಮಿಗೆ ಯಾರ್ಯಾರು ನೋವು ಕೊಟ್ಟರು. ನಮ್ಮ ಸರ್ಕಾರ ಇದ್ದು ಒಬ್ಬ ಸರ್ಕಲ್ ಇನ್ಸ್‌ಪೆಕ್ಟರ್ ಪೋಸ್ಟಿಂಗ್ ಹಾಕಿಸಲು ಆಗಲಿಲ್ಲ ಎಂದು ರೇವಣ್ಣ ಹೇಳಿದ್ದಾರೆ.
ಇವೆರಡು ರಾಷ್ಟ್ರೀಯ ಪಕ್ಷಗಳು ಜನಸಾಮಾನ್ಯರ ನೋವು ಅರಿಯಲು ಸಾಧ್ಯವಾಗಿಲ್ಲ. ಇನ್ನೊಬ್ರು ಕುಟುಂಬ ರಾಜಕಾರಣ ಅಂತ್ಯ ಹಾಡಿ ಅಂತಾರೆ. ಅವರ ಮನೆಯವರನ್ನೇ ರಾಜಕಾರಣದಲ್ಲಿ ಇಟ್ಕಂಡು ಕುಟುಂಬ ರಾಜಕಾರಣ ಅಂತಾರೆ. ಕುಟುಂಬ ರಾಜಕಾರಣ ಎನ್ನಲು ಯಾವ ನೈತಿಕತೆ ಇದೆ ಇವರಿಗೆ. ಅದು ಅಂತ್ಯವಾಗುವ ಕಾಲ ಬರುತ್ತೆ. ಬೆಳಿಗ್ಗೆ ಎದ್ದಕೂಡಲೆ ಅಣ್ಣಾ ಸಹಿ ಹಾಕು ಅನ್ನೋರು. ಕುಮಾರಣ್ಣನ ಮುಗಿಸಿ ಆಯ್ತು. ಈಗ ನನ್ನ ಮುಗಿಸುತ್ತಾರೋ ಮುಗಿಸಲಿ. ನಮ್ಮನ್ನು ಮುಗಿಸುವವರು ಜನ ಎಂದು ಹೇಳಿದ್ದಾರೆ.
ಬೆಳಿಗ್ಗೆ ಎದ್ರೆ ಕುಮಾರಣ್ಣನ ಹತ್ರ ಕಡತಕ್ಕೆ ರೇವಣ್ಣ ಸಹಿ ಹಾಕಿಸಿಕೊಳ್ಳಲು ಹೋಗಿರಲಿಲ್ಲ. ಅವರು ಕಾಂಗ್ರೆಸ್ ಪಕ್ಷ ಬಿಟ್ಟು ಸ್ವತಂತ್ರವಾಗಿ ಸ್ಪರ್ಧಿಸಿ ಗೆಲ್ಲಲಿ. ಕಾಂಗ್ರೆಸ್ ಅಧ್ಯಕ್ಷರು ಪಕ್ಷ ಬಿಟ್ಟು ಸ್ಪರ್ಧೆ ಮಾಡಿ ಗೆಲ್ಲಲಿ. ಆಗ ಅವರು ಮುಗಿಯುತ್ತಾರೋ ಉಳಿಯುತ್ತಾರೋ ನೋಡೋಣ. ಅರವತ್ತು ವರ್ಷ ಕಾಂಗ್ರೆಸ್ ಬಸ್ ಓಡಿ ಓಡಿ ಗೇರ್ ಬಾಕ್ಸ್, ಟೈರ್ ಸವಿದಿದೆ. ಯಾವಾಗ ಬಸ್ಟ್ ಆಗುತ್ತೋ ಗೊತ್ತಿಲ್ಲ. ಕೋಲಾರದಲ್ಲಿ ನಾಲ್ಕು ಜೆಡಿಎಸ್ ಸೋಲಿಸಲು ಬಿಜೆಪಿ ಕಾಂಗ್ರೆಸ್ ಅಡ್ಜೆಸ್ಟ್ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಕ್ಷೇತ್ರ ಬಿಟ್ಟು ಎಲ್ಲಾ ಕಡೆ ಸೀಟ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ರೇವಣ್ಣ ಆರೋಪಿಸಿದ್ದಾರೆ.
‘ನಮಗೆಲ್ಲ ಶಕ್ತಿ ತುಂಬಿದರೆ ಮಂಡ್ಯವನ್ನ ರಾಜ್ಯಕ್ಕೆ ನಂಬರ್ ಒನ್ ಮಾಡೋಣ’