Monday, December 23, 2024

Latest Posts

‘ಅಸಡ್ಡೆ ತೋರುವಂತಹ ಮಂತ್ರಿಗಳಿಗೆ ಯಾಕೆ ತೋಟಗಾರಿಕೆ ಖಾತೆ ಕೊಡ್ತಿರಾ..?’

- Advertisement -

ಹಾಸನ : ಹಾಸನದಲ್ಲಿ ಮಾತನಾಡಿದ ಮಾಜಿ ಸಚಿವ ರೇವಣ್ಣ, ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಮಳೆ ಹಾನಿಗೆ ಇದುವರೆಗೂ ಒಂದು ರೂಪಾಯಿ ದುಡ್ಡು ಕೊಟ್ಟಿಲ್ಲ. ರಸ್ತೆ ಗುಂಡಿ ಬಿದ್ದಿವೆ, ಹೊಳೆನರಸೀಪುರ-ಚನ್ನರಾಪಟ್ಟಣ ಸಂಪೂರ್ಣ ಗುಂಡಿ ಬಿದ್ದಿದೆ. ವಾರದಲ್ಲಿ ನಾಲ್ಕು ಅಪಘಾತಗಳಾಗುತ್ತಿವೆ, ಬೈಕ್‌ನಿಂದ ಬಿದ್ದು ಕೈಕಾಲು ಮುರಿದುಕೊಳ್ಳುವವರು ಜಾಸ್ತಿಯಾಗಿದ್ದಾರೆ. ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಲಕ್ಷಾಂತರ ರೂ ಬಿಲ್ ಆಗುತ್ತಿದೆ. ಗಾಯಾಳುಗಳಿಗೆ ಏನಾದ್ರು ಪರಿಹಾರ ಕೊಡ್ತಾರ..? ಗುಂಡಿ ಮುಚ್ಚುದೇ ಇರೋದು ತಪ್ಪಲ್ವ..? ಎಂದು ರಾಜ್ಯ ಸರ್ಕಾರಕ್ಕೆ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.

ಮನೆ ಬಳಕೆಯ ಸಿಲಿಂಡರ್ ಸ್ಫೋಟ, ಒಂದೇ ಕುಟುಂಬದ ನಾಲ್ವರಿಗೆ ಗಂಭೀರ ಗಾಯ

ರಾಜ್ಯ ಹೆದ್ದಾರಿ ಗುಂಡಿ ಬಿದ್ದಿದೆ, ಪಿಡಬ್ಲ್ಯೂಡಿ ಮಿನಿಸ್ಟರ್ ಹತ್ತಿರ ಹೋಗಿದ್ದೆ ಅವರಿಲ್ಲ. ಬೆಂಗಳೂರು ಪೊಲೀಸ್ ಕಮೀಷನರ್ ಮತ್ತು ಡಿಜಿಪಿ ಮನವಿ ಮಾಡುತ್ತೇನೆ. ತೋಟಗಾರಿಕೆ ಮಂತ್ರಿಗಳನ್ನು ಹುಡುಕಿಕೊಡಬೇಕು. ಏಕೆಂದರೆ ಅವರು ಫೋನ್ ರಿಸೀವ್ ಮಾಡ್ತಿಲ್ಲ. ರಾಜ್ಯದಲ್ಲಿ ಇಂತಹ ತೋಟಗಾರಿಕೆ ಮಂತ್ರಿ ನೋಡಿಲ್ಲ. ಮಳೆಯಿಂದ ರೈತರ ಬೆಳೆ ನಾಶವಾಗಿದೆ. ಏನೇನು ಆಗಿದೆ ಅದರ ಬಗ್ಗೆ ಪ್ರಗತಿ ಪರಿಶೀಲನೆ ಮಾಡಬೇಕೆನ್ನುವ ಸೌಜನ್ಯವಿಲ್ಲ ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ನೊಂದು ಹೇಳುತ್ತಿದ್ದೇನೆ, ಅವರ ಆಫೀಸ್‌ಗೆ ನಮ್ಮವರನ್ನ ಕಳ್ಸಿದ್ರೆ ಸಿಗೋಲ್ಲ. ನನ್ನ ಜೀವನದಲ್ಲೇ ಇಂತಹವರನ್ನು ನೋಡಿಲ್ಲ, ನಾನು 25 ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ. ಎಂಟು ವರ್ಷ ಮಂತ್ರಿಯಾಗಿ ಕೆಲಸ ಮಾಡಿದ್ದೀನಿ. ಕೆಲಸ ಮಾಡಿಕೊಡುವುದು ಬೇಡ, ಫೋನ್ ಮಾಡಿದ್ರೆ ರಿಸೀವ್ ಮಾಡು ಅಂತ ಮುಖ್ಯಮಂತ್ರಿಗಳು ಸೂಚನೆ ಕೊಡಬೇಕು ಎಂದು ಹೇಳಿದ್ದಾರೆ.

ಸುಂದರಿಯ ಕೊಲೆಯಲ್ಲಿ ಅಂತ್ಯಗೊಂಡ ಪ್ರೇಮಕಥೆ..

ಆ ಮಂತ್ರಿ ಫೋನ್ ರಿಸೀವ್ ಮಾಡಲ್ಲ. ಇಂತವರಿಗೆಲ್ಲ ತೋಟಗಾರಿಕೆ ಖಾತೆ ಕೊಟ್ಟಿದ್ದಾರೆ. ಆ ರೈತರ ಮನೆ ಯಾಕೆ ಹಾಳು ಮಾಡ್ತಿರಾ. ಅವಕ್ಕೆ ಯಾವುದಾದರು ಲೇಔಟ್ ಮಾಡವು, ಇಂತಹ ದೊಡ್ಡ ದೊಡ್ಡ ಖಾತೆ ಕೊಡಲು ಹೇಳಿ. ಅಸಡ್ಡೆ ತೋರುವಂತಹ ಮಂತ್ರಿಗಳಿಗೆ ಯಾಕೆ ತೋಟಗಾರಿಕೆ ಖಾತೆ ಕೊಡ್ತಿರಾ ಎಂದು ತೋಟಗಾರಿಕಾ ಸಚಿವರ ವಿರುದ್ಧ ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.

ಅವರಿಗೆ ಬೇರೆ ಕೆಲಸ ಇದೆ, ನಾನ ನೊಂದು ಹೇಳುತ್ತಿದ್ದೇನೆ. ಅವರ ಬಗ್ಗೆ ಗೌರವವಿತ್ತು, ಅವರ ನಡವಳಿಕೆ ನೋಡಿ ಬೇಜಾರ್ ಆಗಿ ನೊಂದು ಹೇಳುತ್ತಿದ್ದೇನೆ. ರೈತರಿಗೋಸ್ಕರ ಹೀಗೆ ಹೇಳುತ್ತುದ್ದೇನೆ ಬೇರೆ ಏನು ಉದ್ದೇಶ ಇಲ್ಲಎಂದು ರೇವಣ್ಣ ಹೇಳಿದ್ದಾರೆ.

- Advertisement -

Latest Posts

Don't Miss