Tuesday, October 14, 2025

Latest Posts

2 ಕಡೆ ಸ್ಪರ್ಧೆ ವಿಚಾರಕ್ಕೆ ಮಾಜಿ ಸಚಿವ ರೇವಣ್ಣ ಖಡಕ್ ಪ್ರತಿಕ್ರಿಯೆ..

- Advertisement -

ಹಾಸನ: ಹಾಸನ ಕ್ಷೇತ್ರದ ಜೆಡಿಎಸ್ ಟಿಕೇಟ್ ದಂಗಲ್ ನಡುವೆ ಕುಟುಂಬ ಸಮೇತವಾಗಿ ರೇವಣ್ಣ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಆನೆಕೆರೆಯ ಆನೆಕೆರೆಯಮ್ಮ ದೇವಾಲಯದಲ್ಲಿ ಇಂದು ಜಾತ್ರೆ ನಡೆಯುತ್ತಿದ್ದು, ಪ್ರತೀ ವರ್ಷದಂತೆ, ರೇವಣ್ಣ ಕುಟುಂಬಸ್ಥರು ದೇವಸ್ಥಾನಕ್ಕೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರೇವಣ್ಣ, ದೇವೇಗೌಡರ ಮಾತನ್ನು ನಾನು ಮೀರುವುದಿಲ್ಲ. ಅವರು ನಮ್ಮ ಸರ್ವೋಚ್ಚ ನಾಯಕರು. ಹಿಂದೆಯೂ ನಾನು ಮೀರಿಲ್ಲ. ಮುಂದೆಯೂ ಮೀರುವುದಿಲ್ಲ. ಅವರು ಹೇಳಿದ್ದನ್ನು ಯಾವತ್ತೂ ನಾವು ದಾರಿ ತಪ್ಪಿಲ್ಲ ಎಂದು ಹೇಳಿದ್ದಾರೆ.

ನೀವು ಎರಡು ಕಡೆ ಸ್ಪರ್ಧೆ ಮಾಡುತ್ತಿರುವ ವಿಚಾರಕ್ಕೆ ರೇವಣ್ಣ ಕಡಕ್ ಪ್ರತಿಕ್ರಿಯೆ ನೀಡಿದ್ದು, ನಾನ್ಯಾಕೆ ಎರಡು ಕಡೆ ನಿಲ್ಲೋದಕ್ಕೆ ಹೋಗಲಿ..? ನನ್ನ ಕ್ಷೇತ್ರ ಹೊಳೆನರಸೀಪುರ. ಕಳೆದ 30 ವರ್ಷಗಳಿಂದ ಈ ಕ್ಷೇತ್ರ ಜನ ನನನ್ನು ಸಾಕಿದ್ದಾರೆ. ಈ ಜನರನ್ನ ನಾನು ನನ್ನ ಜೀವನದಲ್ಲಿ ಎಂದೂ ಮರೆಯುವುದಿಲ್ಲ. ನಾನಾಗಲಿ ನನ್ನ ಕುಟುಂಬ ಆಗ್ಲಿ ಬಿಡುವ ಪ್ರಶ್ನೆಯೇ ಇಲ್ಲ. ನನ್ನ ಮೊದಲ ಪ್ರಾಮುಖ್ಯತೆ ಏನಿದ್ರೂ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಎಂದಿದ್ದಾರೆ.

ಇನ್ನು ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಯಾವಾಗ ಪರಿಹಾರ ಆಗುತ್ತೆ ಎಂಬ ಪ್ರಶ್ನೆಗೆ ಉತ್ತರಿಸಿದ ರೇವಣ್ಣ, ಅದನ್ನ ದೇವೇಗೌಡರನ್ನು ಕೇಳಿ. ನೀವು ಸುಮ್ಮನೆ ಪ್ರಚಾರ ಮಾಡುತ್ತಿದ್ದೀರಿ. ನಿಮ್ಮದು ಡೂಪ್ ಆಗುತ್ತದೆ ಹೋಗಿ ಎಂದು ರೇವಣ್ಣ ನಕ್ಕಿದ್ದಾರೆ.

ಚುನಾವಣೆ ವೇಳೆ ಅಕ್ರಮ ನಡೆಯದಂತೆ ಚೆಕ್ ಪೋಸ್ಟ್, ಹೆಚ್ಚಿನ ಪೊಲೀಸ್ ಬಿಗಿ ಬಂದುಬಸ್ತ್.

ಹಾಸನ ಟಿಕೇಟ್ ಗೊಂದಲದ ಬಗ್ಗೆ ಮೊದಲ ಪ್ರತಿಕ್ರಿಯೆ ಕೊಟ್ಟ ಸೂರಜ್ ರೇವಣ್ಣ..

‘ಕಾದು ನೋಡುತ್ತೇನೆ, ಟಿಕೆಟ್ ಸಿಗದಿದ್ದರೆ ನಮ್ಮ ಕಾರ್ಯಕರ್ತರ ತೀರ್ಮಾನಕ್ಕೆ ನಾನು ಬದ್ಧ’

- Advertisement -

Latest Posts

Don't Miss