ಹಾಸನ: ಹಾಸನದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮಾತನಾಡಿದ್ದು, ಮುಸ್ಲಿಂ ಮೀಸಲಾತಿ ರದ್ದು ಮಾಡಿದ್ದ ಸರ್ಕಾರದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ವಿಚಾರಕ್ಕೆ ಸಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.
ಅಲ್ಪ ಸಂಖ್ಯಾತರಿಗೆ 2b ಮೀಸಲಾತಿ ಕೊಟ್ಟಿದ್ದು ದೇವೇಗೌಡರು. ದೇವೇಗೌಡರು ಬರೋವರೆಗೆ ಸಾಕಷ್ಟು ಜಾತಿಗಳಿಗೆ ಮೀಸಲಾತಿ ಇರಲಿಲ್ಲ. ಅವರು ಜನರಲ್ ನಲ್ಲಿ ಹೋರಾಟ ಮಾಡಬೇಕಿತ್ತು. ದೇವೇಗೌಡರು ಬರಲಾಗಿ 108 ಜಾತಿಗಳಿಗೆ ಮೀಸಲಾತಿ ಸಿಕ್ಕಿತು. ಮೀಸಲಾತಿ ಇಲ್ಲದೆ ಇದ್ದಾಗ ಶೇಕಡಾ 4 ಮುಸ್ಲಿಂರಿಗೆ ಶೇಕಡಾ 18 ಹಿಂದುಳಿದವರಿಗೆ ಕೊಟ್ಟಿದ್ದು ದೇವೇಗೌಡರು. ಎಸ್ಟಿ ಸಮಾಜಕ್ಕೆ ಚಂದ್ರಶೇಖರ್ ಪಿಎಂ ಇರುವಾಗ ಹೋರಾಟ ಮಾಡಿ ಮಾಡಿಸಿದರು. ಮುಸ್ಲಿಂರು ಬಿಜೆಪಿಗೆ ಓಟ್ ಕೊಡಲ್ಲ ಎಂದು ಮೀಸಲಾತಿ ರದ್ದು ಮಾಡಿದ್ರು. ನಾನು ಮುಸ್ಲಿಂರಿಗೆ ಕೇಳಿಕೊಳ್ತೇನೆ ಬಿಜೆಪಿ ತೊಲಗಿಸಿ. ಬಿಜೆಪಿ ಕಾಂಗ್ರೆಸ್ ನಡುವೆ ಅಡ್ಜೆಸ್ಡಮೆಂಟ್ ಇದೆ. ಅದನ್ನ ಬಿಟ್ಟು ನೀವು ಜೆಡಿಎಸ್ ಗೆ ಮತ ನೀಡಿ ಎಂದು ರೇವಣ್ಣ ಮನವಿ ಮಾಡಿದ್ದಾರೆ.
ಮುಸ್ಲಿಂ ಮೀಸಲಾತಿ ರದ್ದು ಆದೇಶಕ್ಕೆ ತಡೆ ಸ್ವಾಗತಾರ್ಹ. ಎಲ್ಲಾ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕಿದೆ. ಗಾಂಧೀಜಿಯವರ ಆಸೆ ಈಡೇರಿಸಬೇಕಿದೆ. ದೇವೇಗೌಡರು ಮೀಸಲಾತಿ ಇಲ್ಲದಿದ್ದಾಗ ಹಿಂದುಳಿದ ಜಾತಿಗೆ ಅವಕಾಶ ನೀಡಿದ್ರು. ಎಲ್ಲಾ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗೋದು ದೇವೇಗೌಡರ ಗುರಿ. ಹಾಗಾಗಿ ದೇವೇಗೌಡರು 60 ವರ್ಷ ಈ. ಜಿಲ್ಲೆಯಲ್ಲಿ ರಾಜ್ಯದಲ್ಲಿ ಉಳಿದಿದ್ದಾರೆ. ಹಾಸನ ಜಿಲ್ಲೆಯಲ್ಲಿ ಏಳಕ್ಕೆ ಏಳು ಸ್ಥಾನ ಗೆಲ್ತೇವೆ. ನಾಲ್ಕು ವರ್ಷ ಬಿಜೆಪಿ ಸರ್ಕಾರ ಇದ್ದು ಪ್ರದಾನಿ ಯನ್ನು ಪ್ರಚಾರಕ್ಮೆ ಕರೆಸೊ ಸ್ಥಿತಿ ಇದೆ ಎಂದರೆ ನಾನು ಏನು ಹೇಳಲಿ. ನಡ್ಡ, ಬರಬೇಕು ಮೋದಿ ಬರಬೇಕು ಅಂದರೆ ಇವರ ಇವರ ಮುಖ ನೋಡಿದ್ರೆ ಓಟ್ ಹಾಕಲ್ಲಾ ಅಂತಾಯ್ತಲ್ಲ ಎಂದು ಬಿಜೆಪಿ ನಾಯಕರ ವಿರುದ್ದ ರೇವಣ್ಣ ಕಿಡಿಕಾರಿದ್ದಾರೆ.
ಕರ್ನಾಟಕ ಟಿವಿ ಪ್ರಾಂತ್ಯವಾರು ಸರ್ವೆ: ಬೆಂಗಳೂರು ನಗರ 28 ವಿಧಾನಸಭಾ ಕ್ಷೇತ್ರ
ಕರ್ನಾಟಕ ಟಿವಿ ಪ್ರಾಂತ್ಯವಾರು ಸರ್ವೆ: ಕರಾವಳಿ ಕರ್ನಾಟಕ 19 ವಿಧಾನಸಭಾ ಕ್ಷೇತ್ರ..