ಹಾಸನ: ಬಿಜೆಪಿ ಪಕ್ಷ ಎಣ್ಣೆ ಅಂಗಡಿ ಮಾಲೀಕರ ಪಾದದಡಿಯಲ್ಲಿ ಇದೆ. ಕಾನೂನು ಬಾಹಿರವಾಗಿ ಅಬಕಾರಿ ಇಲಾಖೆ ಅಧಿಕಾರಿಗಳು ಎರಡರಿಂದ ಮೂರು ಕೋಟಿ ವಸೂಲಿ ಮಾಡುತ್ತಿರೊ ಬಗ್ಗೆ ಜನರು ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ರೇವಣ್ಣ ಲೇವಡಿ ಮಾಡಿದ್ದಾರೆ.
ಈ ಬಗ್ಗೆ ಹಾಸನದಲ್ಲಿ ಮಾತನಾಡಿದ ಅವರು, ಜನ ಏನು ಮಾತನಾಡುತ್ತಿದ್ದಾರೆ ಅದನ್ನ ನಾನು ಹೇಳುತ್ತಿದ್ದೇನೆ. ಜಿಲ್ಲೆಯಲ್ಲಿ ರಸ್ತೆ ಗುಂಡಿಮುಚ್ಚಲು ಹಣ ಕೊಟ್ಟಿಲ್ಲ. ರಾಗಿ ಖರೀದಿ ಮಾಡೊಕೆ ರೈತರಿಗೆ ನೆರವಾಗುತ್ತಿಲ್ಲ ಎಂದು ಬಿಜೆಪಿ ವಿರುದ್ಧ ರೇವಣ್ಣ ಗುಡುಗಿದ್ದಾರೆ.
ಅಲ್ಲದೇ, ದೇವೇಗೌಡರು ಹಾಕಿದ ಅಡಿಗಲ್ಲನ್ನು ಏನು ಮಾಡ್ತಾರೊ ಗೊತ್ತಿಲ್ಲ. ಹಾಸನಕ್ಕೆ ತಾಂತ್ರಿಕ ವಿವಿ ಕೊಡಿ ನಾವೇ ಹಾರ ಹಾಕ್ತಿವಿ, ತೋಟಗಾರಿಕೆ ಕಾಲೇಜು ಮಾಡಿ ನಾವೇ ಸನ್ಮಾನ ಮಾಡ್ತಿವಿ. ವಿಶ್ವೇಶ್ವರಯ್ಯ ನಿಗಮದ ಅಧ್ಯಕ್ಷ ಐದು ವರ್ಷ ಸಂಬಳವನ್ನೇ ಪಡೆದಿಲ್ಲ. ಸಂಬಳವನ್ನೇ ಡ್ರಾ ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ರೇವಣ್ಣ ವಾಗ್ದಾಳ ನಡೆಸಿದ್ದಾರೆ.
ಸಿಎಂ ಬಗ್ಗೆ ನನಗೆ ಗೌರವ ಇದೆ, ಅವರು ಜಿಲ್ಲೆಗೆ ಬರೋದು ಬೇಡಾ ಅನ್ನಲ್ಲ. ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ರು ನಾನು ಹಾಸನಕ್ಕೆ ಅನುದಾನ ಕೊಟ್ಟಿಲ್ಲ ಎಂದು ಅವರೇ ಅಧಿಕಾರದಿಂದ ಇಳಿಯೋ ವೇಳೆ ಹೇಳಿದ್ರು. ಯಾವ ಮುಖ ಇಟ್ಟುಕೊಂಡು ಇವರು ಓಟ್ ಕೇಳ್ತಾರೆ..? ನೆಕ್ಸ್ಟ್ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅವರು ಹಾಕೊ ಕಲ್ಲನ್ನು ಹೇಮಾವತಿ ನದಿಗೆ ಬಿಡ್ತಿನಿ ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಳೆಯಿಂದ ಹಾಸನದಲ್ಲಿ ಪಂಚರತ್ನ ಯಾತ್ರೆ ಆರಂಭವಾಗಲಿದೆ. ಬೇಲೂರು ಕ್ಷೇತ್ರದಿಂದ ಯಾತ್ರೆ ಆರಂಭ ಆಗಲಿದೆ. ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಾಳೆಯಿಂದ ಪಂಚರತ್ನ ಯಾತ್ರೆ ಆರಂಭ ಎಂದು ರೇವಣ್ಣ ಮಾಹಿತಿ ನೀಡಿದ್ದಾರೆ.
‘ಬಿಜೆಪಿ ಮುಖಂಡರು ಮಾನಾ ಮಾರ್ಯಾದೆ ಇಲ್ಲದೆ ಅಡಿಗಲ್ಲು ಹಾಕೋಕೆ ಹೊರಟಿದ್ದಾರೆ’