ಹಾಸನ: ಬೇರೆ ಪಕ್ಷದವರು ಸಂಪರ್ಕ ಮಾಡಿದ್ದಾರಾ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಹೊಳೆನರಸಿಪುರ ಸಭೆಯಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪ್ರತಿಕ್ರಿಯಿಸಿದ್ದಾರೆ.
ಬೇರೆಪಕ್ಷದ ನಾಯಕರು ನನ್ನನ್ನ ಯಾಕ್ರೀ ಸಂಪರ್ಕ ಮಾಡ್ತಾರೆ..?. ಸಿದ್ದರಾಮಯ್ಯವರು ನಮ್ಮ ಬಾಂಧವ್ಯ ಬೇರೆ. ಪಾರ್ಟಿ ಸೇರ್ತೀನಿ ಅಂತಾ ನಾನು ಎಲ್ಲೂ ಮಾತಾಡೋಕೆ ಹೋಗಿಲ್ಲ. ಜೆಡಿಎಸ್ ದೇವೇಗೌಡರು ನಮ್ಮ ನಾಯಕರು ಕುಮಾರಣ್ಣ ಇರೋವಗಾ ನಾನ್ಯಾಕೆ ಬೇರೆ ಪಕ್ಷಕ್ಕೆ ಹೋಗಲ್ರೀ..? ಎಂದು ರೇವಣ್ಣ ಮರುಪ್ರಶ್ನಿಸಿದ್ದಾರೆ. ಇಲ್ಲಿ ನೆಲೆ ಇಲ್ಲ ಅಂತ ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಒಬ್ರಿಗೆ ಕಾಂಗ್ರೆಸ್ ನಿಂದ ಸೀಟ್ ಕೊಟ್ಟಿದ್ದಾರೆ ಇನ್ನೊಬ್ರು ಗೆಲ್ಲೊಲ್ಲ ಅಂತಾ ವಾಪಾಸ್ ಕಳಿಸಿದ್ದಾರೆ ಎಂದು, ಶಿವಲಿಂಗೇಗೌಡ, ಎ.ಟಿ ರಾಮಸ್ವಾಮಿ ಬಗ್ಗೆ ರೇವಣ್ಣ ವ್ಯಂಗ್ಯವಾಡಿದ್ದಾರೆ.
ಹಾಸನ ಕ್ಷೇತ್ರ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ನಾನು ಕುಮಾರಣ್ಣ ಕೆಲ ವಿಚಾರವನ್ನ ಮುಂಚೆಯೇ ಮಾತನಾಡಿದ್ದೇವೆ. ಅದನ್ನೆಲ್ಲ ಹೇಳೋಕಾಗಲ್ಲ, ದೇವೇಗೌಡರು ಹೇಳಿದ್ದೇ ಫೈನಲ್ ಎಂದಿದ್ದಾರೆ. ಅಲ್ಲದೇ, ರೇವಣ್ಣನವರ ತಲೆಕೆಡಿಸುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಮಾತನಾಡಿದ ರೇವಣ್ಣ, ರೀ ನಾನು ತಲೆ ಕೆಡಿಸಿಕೊಳ್ಳುವ ವ್ಯಕ್ತಿ ಅಲ್ಲ. ಮೂವತ್ತು ವರ್ಷದಿದ ದೇವೇಗೌಡರ ಜೊತೆ ೧೯೭೮ ರಿಂದ ಇದ್ದೇನೆ. ನನಗೆ ತಲೆ ಕೆಡಿಸೋದು ಅದು ಇದು ಏನಿಲ್ಲ. ಕುಮಾರಣ್ಣ ರೆವಣ್ಣನ್ನ ಹೊಡೆಸಾಡೋಕೆ ಯಾರ ಕೈಲು ಆಗೊಲ್ಲ ನಡಿರಿ. ನಾವಿಬ್ರು ಹೊಡೆದಾಡ್ತಾರೆ ಅನ್ಕೊಂಡ್ರೆ ಬೆಳಿಗ್ಗೆ ಎದ್ದು ನಾವು ಸರಿಯಾಗಿರ್ತಿವಿ ನಿಮಗೆ ಗೊತ್ತಿಲ್ಲ ನಡೀರಿ ಎಂದು ರೇವಣ್ಣ ಕುಮಾರಸ್ವಾಮಿಯನ್ನು ಬಿಟ್ಟುಕೊಡದೇ, ಮಾತನಾಡಿದ್ದಾರೆ.
ಎರಡೂ ಕಡೆ ಸ್ಪರ್ಧೆ ಮಾಡು ಎಂದು ದೇವೇಗೌಡರು ಹೇಳಿದ್ದಾರಾ ಎಂಬ ಬಗ್ಗೆ ರೇವಣ್ಣ ಪ್ರತಿಕ್ರಿಯಿಸಿದ್ದು, ಅದು ನನಗೆ ಗೊತ್ತಿಲ್ಲಪ್ಪ ದೇವೇಗೌಡ್ರು ಏನ್ ಹೇಳಿದ್ರು ಕೇಳ್ತೀನಿ ಎಂದು ಹೇಳಿದ್ದಾರೆ.
‘ಹುಣಸೆಹಣ್ಣು ಬೀಜ ಆಯುತ್ತಿದ್ದವರನ್ನು ಕರೆತಂದು ನಗರಸಭೆ ಸದಸ್ಯನಾಗಿ ಮಾಡಿದೆ’
‘ಹೊಳೆನರಸೀಪುರಕ್ಕೆ ಬಂದು ಟೀ ಕುಡಿದು ದೋಸೆ ತಿನ್ನೋದು ಬಿಡಿ. ನಿಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿ’
ಬಿಜೆಪಿ ಮುಖಂಡ ಪದ್ಮರಾಜ್ ಕಾಂಗ್ರೆಸ್ ಸೇರ್ಪಡೆ, ಪಕ್ಷದಲ್ಲಿ ಬಿರುಗಾಳಿ ಆರಂಭ ಎಂದ ಡಿಕೆಶಿ..

