ಹಾಸನ: ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಹೊಳೆನರಸಿಪುರದಲ್ಲಿ ರೇವಣ್ಣ ಕಾರ್ಯಕರ್ತರ ಸಭೆ ಕರೆದಿದ್ದಾರೆ. ಚನ್ನಾಂಬಿಕಾ ಮಂಟಪದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಮಾಜಿ ಸಚಿವ ಎ.ಮಂಜುನಾಥ್ ಮತ್ತು ಭವಾನಿ ರೇವಣ್ಣ ಸೇರಿ, ಹಲವು ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ರೇವಣ್ಣ, ದೇವೇಗೌಡರು ಮಂತ್ರಿ, ಸಿಎಂ, ಪ್ರಧಾನಿಯಾಗಿ ಈ ಕ್ಷೇತ್ರಕ್ಕೆ ಸಾಕಷ್ಟು ಕೆಲಸ ಮಾಡಿದ್ದಾರೆ. ಕುಮಾರಸ್ವಾಮಿ ಅವರು 485 ಕೋಟಿ ಹಣವನ್ನು ನೀರಾವರಿಗೆ ಕೊಟ್ಟಿದಾರೆ. ದುದ್ದ ಶಾಂತಿಗ್ರಾಮ ಹೋಬಳಿಯ ಕೆರೆ ತುಂಬಿಸಲು ಐದು ನೂರು ಕೋಟಿ ಅನುದಾನ ಕೊಟ್ಟಿದಾರೆ. ಕೆಲವರು ಇವತ್ತು ಚುನಾವಣೆ ಗೆ ನಿಂತು ಹೋದ್ರೆ ಮತ್ತೆ ಐದು ವರ್ಷ ಈಕಡೆಗೆ ಬರೋದಿಲ್ಲ. ಈ ಕ್ಷೇತ್ರಕ್ಕೆ ಸಾವಿರಾರು ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆ ಆಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಇಂಜಿನಿಯರಿಂಗ್ ಕಾಲೇಜು, ಲಾ ಕಾಲೇಜು ಕೂಡ ತೆರೆಯಲಾಗಿದೆ.
ಇಡೀ ರಾಜ್ಯದಲ್ಲಿ ಸುಸಜ್ಜಿತವಾದ ತಾಲ್ಲೂಕು ಆಸ್ಪತ್ರೆ ಸಾಲಿನಲ್ಲಿ ನಮ್ಮ ಹೊಳೆನರಸೀಪುರ ಮೊದಲ ಸ್ಥಾನದಲ್ಲಿದೆ. ಕುಮಾರಣ್ಣ ಅವರು ಹಾಸನದ ಇಂಜಿನಿಯರಿಂಗ್ ಕಾಲೇಜಿಗೆ, ಮೆಡಿಕಲ್ ಕಾಲೇಜಿಗೆ ಅನುದಾನ ಕೊಟ್ಟರು. ಜಿಲ್ಲೆಯ 580 ಕೋಟಿ ಸಾಲ ಮನ್ನಾ ಆಗಿದೆ. ಯಾರ್ಯಾರು ಸ್ತ್ರೀ ಶಕ್ತಿ ಸಾಲಾ ಮಾಡಿದಿರಿ ಅವರ ಎಲ್ಲಾ ಸಾಲಾ ಮನ್ನಾ ಆಗುತ್ತೆ. 60 ವಯಸ್ಸು ಆದ ಎಲ್ಲರಿಗೂ ತಿಂಗಳಿಗೆ ಐದು ಸಾವಿರ ಗೌರವ ಧನ ಕೊಡುತ್ತೇನೆ.
ದೇವೇಗೌಡರು ಪ್ರಧಾನಿ ಆದಾಗ ಮಾಡಿದ ಅಭಿವೃದ್ಧಿ ಈಗ ಗಾರ್ಮೆಂಟ್ಸ್ ಗಳಲ್ಲಿ 60 ಸಾವಿರ ಮಹಿಳೆಯರು ಕೆಲಸ ಮಾಡ್ತಾರೆ. ಮುಂದಿನ ದಿನಗಳಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲು ಕೂಡ 15 ಸಾವಿರ ಮಹಿಳೆಯರಿಗೆ ಉದ್ಯೋಗ ಕೊಡೊ ಗಾರ್ಮೆಂಟ್ಸ್ ಮಾಡಿಸುತ್ತೇವೆ. ಈ ರಾಜ್ಯದಲ್ಲಿ ಜೆಡಿಎಸ್ ಬಿಟ್ಟು ಯಾರೂ ಸರ್ಕಾರ ಮಾಡೋಕೆ ಆಗಲ್ಲ. ನಮ್ಮದೇ 123 ಸ್ಥಾನ ಬರುತ್ತೆ ಇವತ್ತೇ ಬರೆದಿಟ್ಟುಕೊಳ್ಳಿ ಎಂದು ರೇವಣ್ಣ ಭವಿಷ್ಯ ನುಡಿದಿದ್ದಾರೆ.
‘ಹೊಳೆನರಸೀಪುರಕ್ಕೆ ಬಂದು ಟೀ ಕುಡಿದು ದೋಸೆ ತಿನ್ನೋದು ಬಿಡಿ. ನಿಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿ’
ಬಿಜೆಪಿ ಮುಖಂಡ ಪದ್ಮರಾಜ್ ಕಾಂಗ್ರೆಸ್ ಸೇರ್ಪಡೆ, ಪಕ್ಷದಲ್ಲಿ ಬಿರುಗಾಳಿ ಆರಂಭ ಎಂದ ಡಿಕೆಶಿ..