Saturday, July 5, 2025

Latest Posts

‘ಉತ್ತರದಲ್ಲಿ ಗ್ಯಾರೆಂಟಿ ಕೊಟ್ಟು ಜನರೇ ಮನೆಗೆ ಕಳಿಸಿದ್ದಾರೆ. ಕರ್ನಾಟಕ‌ ಮಾತ್ರ ಬಾಕಿ ಇದೆ‌’

- Advertisement -

ಹಾಸನ: ಹಾಸನದಲ್ಲಿ ಮಾತನಾಡಿದ ಮಾಜಿ ಸಚಿವ ರೇವಣ್ಣ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಚುನಾವಣೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ. ಕುಮಾರಸ್ವಾಮಿಯವರು ನಿನ್ನೆ ನಮ್ಮ ಪ್ರಣಾಳಿಕೆ ಬಿಡುಗಡೆ ‌ಮಾಡಿದ್ದಾರೆ.  ಪ್ರಾದೇಶಿಕ ಪಕ್ಷಗಳಿರುವ ರಾಜ್ಯಗಳಲ್ಲಿ ಅಭಿವೃದ್ಧಿ ‌ಆಗುತ್ತಿದೆ. ಎರಡೂ ರಾಷ್ಟ್ರೀಯ ‌ಪಕ್ಷಗಳಿಗೆ ಸೆಡ್ಡು ಹೊಡೆದು ಅಭಿವೃದ್ಧಿ ‌ದಿಕ್ಕಿನತ್ತ ಹೋಗುತ್ತಿದೆ. ಈ ರಾಷ್ಟ್ರೀಯ ‌ಪಕ್ಷಗಳು ಚುನಾವಣೆ ಬಂದಾಗ ಮಾತ್ರ ಹೋರಾಡ್ತವೆ ಎಂದು ಹೇಳಿದ್ದಾರೆ.

ಅಲ್ಲದೇ, ಪರ್ಸೆಂಟೇಜ್ ತಾಂಡವವಾಡುತ್ತಿದೆ. ಚುನಾವಣೆ ‌ಸಂದರ್ಭ ಕೇಂದ್ರ ನಾಯಕರನ್ನ ಕರೆದುಕೊಂಡು ಬರುತ್ತಾರೆ. ಬೇರೆ ಸಂದರ್ಭ ಇತ್ತ ತಿರುಗಿ ನೋಡಲ್ಲ. ರಾಷ್ಟ್ರೀಯ ಪಕ್ಷಗಳ ಕೊಡುಗೆ ಈ ರಾಜ್ಯಕ್ಕೆ ಏನು ಎಂದು ರೇವಣ್ಣ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ‌ಈಗ ಗ್ಯಾರೆಂಟಿ ಕಾರ್ಡ್ ಕೊಡುತ್ತಿದೆ. ಪೂರ್ಣ ಪ್ರಮಾಣದ‌‌ ಐದು ವರ್ಷ ಅಧಿಕಾರದ ಅವಧಿಯಲ್ಲಿ ಯಾಕೆ‌ ಗ್ಯಾರೆಂಟಿ ಕೊಡಲಿಲ್ಲ..? ಅವರ ಆಡಳಿತದಲ್ಲಿ ಸರಿಯಾಗಿ ಮೂಲಭೂತ ಸೌಕರ್ಯಗಳನ್ನ ಕೊಡೋದಕ್ಕೆ ಆಗಲಿಲ್ಲ. ಕೃಷ್ಣ ಉಳಿಸುತ್ತೇವೆ ಎಂದು ಹೋಗಿದ್ದರು. ಅದನ್ನ ಅರ್ಧಕ್ಕೆ ಬಿಟ್ಟು ಈಗ ಕಾವೇರಿ ಮೇಕೇದಾಟು ಉಳಿಸೋಕೆ ಹೊರಟಿದ್ದಾರೆ. ಮಾನ ಮರ್ಯಾದೆ‌ ಇದ್ರೆ ಇವರು ಜನರ ಓಟು ಕೇಳಬಾರದು ಎಂದು ರೇವಣ್ಣ ವಾಗ್ದಾಳಿ ಮಾಡಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ಇವರು ಮತ ಕೇಳೋದಕ್ಕೆ ಯೋಗ್ಯರಲ್ಲ. ಕಾವೇರಿಗೆ ಇವರು ಮೋಸ ಮಾಡಿದ್ದಾರೆ. ದೇವೇಗೌಡರು 60 ವರ್ಷ ಕಾವೇರಿಗಾಗಿ ಹೋರಾಟ ಮಾಡಿದ್ದಾರೆ. ಅದೇ ರೀತಿ ಬಿಜೆಪಿ ಕೂಡ ರಾಜ್ಯದಲ್ಲಿ ನೀರಾರವರಿಗೆ ಅನ್ಯಾಯ ಮಾಡಿದೆ. ಬೆಂಗಳೂರು ಕುಡಿಯುವ ನೀರು ಕೊಡೋದಕ್ಕೂ ದೇವೇಗೌಡರು ಬರಬೇಕಾಯ್ತು ಎಂದು ರೇವಣ್ಣ ಹರಿಹಾಯ್ದಿದ್ದಾರೆ.

ಎರಡೂ ರಾಷ್ಟ್ರೀಯ ‌ಪಕ್ಷಗಳು ಅಡ್ಜಸ್ಟ್ಮೆಂಟ್ ಮಾಡಿಕೊಂಡಿವೆ. ತುಮಕೂರಲ್ಲಿ ಹೊಂದಾಣಿಕೆ ಮಾಡಿಕೊಂಡು ದೇವೇಗೌಡರಿಗೆ ಚಾಕು‌ ಹಾಕಿದ್ದಾರೆ. ಒಂದು ಕಡೆ ಕೋಮುವಾದಿಗಳನ್ನ ದೂರ ಇಡಬೇಕು ಅನ್ನುತ್ತಾರೆ. ಮಂಡ್ಯದಲ್ಲಿ‌ ಕುಮಾರಸ್ವಾಮಿ ‌ಮಗನನ್ನ ಸೋಲಿಸೋದಕ್ಕೆ ತಬ್ಬಿಕೊಂಡಿದ್ದಾರೆ. ಉತ್ತರದಲ್ಲಿ ಗ್ಯಾರೆಂಟಿ ಕೊಟ್ಟು ಜನರೇ ಮನೆಗೆ ಕಳಿಸಿದ್ದಾರೆ. ಇನ್ನು ಕರ್ನಾಟಕ‌ಮಾತ್ರ ಬಾಕಿ ಇದೆ‌ ಎಂದು ಕಾಂಗ್ರೆಸ್ ವಿರುದ್ಧ ರೇವಣ್ಣ ವ್ಯಂಗ್ಯವಾಡಿದ್ದಾರೆ.

ಹಾಸನ ಜಿಲ್ಲೆ ಕಾಂಗ್ರೆಸ್ ಟಿಕೆಟ್ ಮಾರಿಕೊಂಡಿದ್ದಾರೆ. ಈಗ ಇವರ ದುರಾಡಳಿತ ಮುಚ್ಚಿಹಾಕಲು ಪ್ರಧಾನಿ ಕರ್ಕೊಂಡ್ ಬರ್ತಿದ್ದಾರೆ. ಬಿಜೆಪಿಗೆ ಇಂತಹ ಮಟ್ಟಕ್ಕೆ ಬಂದೋಯ್ತಲ್ಲಾ. ಮೋದಿ ಬಂದು ಏನ್ ಮಾಡ್ತಾರೆ ಸರ್..? ಕೆಲವು ಪೊಲೀಸರಿಗೆ ಬ್ಯಾಟಾ ಕೊಡ್ತಾರೆ ಅಷ್ಟೇ. ಒಂದೆರಡು ದಿನ ಪೊಲೀಸರು ಮನೆ ಬಿಟ್ಟು ಹಮಿರಬೇಕಾಗುತ್ತೆ ಇನ್ನೇನು ಆಗೊಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಇಂದು ಕಾಂಗ್ರೆಸ್ ಸೇರಲಿದ್ದಾರೆ ದೊಡ್ಮನೆ ಸೊಸೆ..

‘ನಿಮ್ಮ ಮನೆ ಮಗ ನಾನು. ಮಂಡ್ಯದ ಸಮಗ್ರ ಅಭಿವೃದ್ಧಿಗೆ ನನಗೆ ಅವಕಾಶ ಕೊಡಿ’

ಪ್ರಿಯಾಂಕಾ ವಾದ್ರಾ ವಿರುದ್ಧ ಮೈಸೂರಿನಲ್ಲಿ ದೂರು ದಾಖಲು

- Advertisement -

Latest Posts

Don't Miss