Saturday, September 21, 2024

Latest Posts

‘ತಾಯಿಯ ಆಶೀರ್ವಾದಿಂದ ಇವತ್ತು ಸರ್ಕಾರ ಎಸ್ಸಿ, ಎಸ್ಟಿ ಜನಾಂಗಕ್ಕೆ ಮೀಸಲಾತಿ ಜಾಸ್ತಿ ಮಾಡಿದೆ’

- Advertisement -

ಹಾಸನ: ಸಾರಿಗೆ ಸಚಿವ ಶ್ರೀರಾಮುಲು ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಕುಟುಂಬ ಸಮೇತರಾಗಿ ಬಂದು, ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆಯ ಬಳಿಕ ಮಾತನಾಡಿದ ಶ್ರೀರಾಮುಲು, ಹಾಸನಾಂಬೆ ದೇವಿ ಬಹಳ ದಿನಗಳಿಂದ ಸಂಕಲ್ಪ, ಇಚ್ಛೆಯಿತ್ತು. ಇವತ್ತು ಕುಟುಂಬ ಸಮೇತರಾಗಿ ಬಂದು ಹಾಸನಾಂಬೆ ದೇವಿ ಆಶೀರ್ವಾದ ಪಡೆದುಕೊಂಡಿದ್ದೇನೆ. ಇದರಿಂದ ಸಂತೋಷ, ಸಮಾಧಾನ, ಸಾರ್ಥಕತೆ ಆಗಿದೆ. ಒಂದು ಕಡೆ ದೀಪಾವಳಿ ಹಬ್ಬ, ಇನ್ನೊಂದು ಕಡೆ ಹಾಸನಾಂಬೆ ದೇವಿ ಆಶೀರ್ವಾದ ಪಡೆದುಕೊಂಡಿದ್ದೇನೆ ಎಂದರು.

ಅಲ್ಲದೇ, ಆ ತಾಯಿಯ ಆಶೀರ್ವಾದಿಂದ ಇವತ್ತು ಸರ್ಕಾರ ಎಸ್ಸಿ, ಎಸ್ಟಿ ಜನಾಂಗಕ್ಕೆ ಮೀಸಲಾತಿ ಜಾಸ್ತಿ ಮಾಡಿದೆ. ಈ ರಾಜ್ಯದ ರಾಜ್ಯಪಾಲರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಿಗೆ 150 ಸಮುದಾಯಗಳ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಸರ್ಕಾರ ಎಸ್ಸಿ, ಎಸ್ಟಿ ಜನಾಂಗಕ್ಕೆ ಮೀಸಲಾತಿ ಹೆಚ್ಚಿಸಿ ಸುಗ್ರೀವಾಜ್ಞೆ ಹೊರಡಿಸಿದೆ. ಎಸ್ಸಿ ಜನಾಂಗಕ್ಕೆ 17%, ಎಸ್ಟಿ ಜನಾಂಗಕ್ಕೆ 7% ಮೀಸಲಾತಿ ಹೆಚ್ಚಿಸಿರುವ ಕಾರಣ ಇವತ್ತು ದೀಪಾವಳಿ ಹಬ್ಬ ಆಚರಣೆ ಆಗುತ್ತಿದೆ. ಆ ತಾಯಿಯ ಆಶೀರ್ವಾದದಿಂದ ಈ‌ ನಾಡಿನ ಜನತೆಗೆ ಒಳ್ಳೆಯದಾಗಲಿ ಎಂದು ಆ ದೇವಿಯಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದೇನೆ ಎಂದಿದ್ದಾರೆ.

ಶಾಸಕ ಪ್ರೀತಂ ಗೌಡ್ರ ನೇತೃತ್ವದಲ್ಲಿ ಬರುವ ಭಕ್ತರಿಗೆ ನಿರಂತರ ಅನ್ನದಾನ..

- Advertisement -

Latest Posts

Don't Miss