Saturday, May 25, 2024

Latest Posts

ಮಾಜಿ ಶಾಸಕನ ಕಣ್ಣೀರು ರಾಜಕೀಯಕ್ಕೆ ಹಾಲಿ ಶಾಸಕನ ವ್ಯಂಗ್ಯ..!

- Advertisement -

ಮಂಡ್ಯ: 2023ರ ವಿಧಾನ ಸಭಾ ಚುನಾವಣೆ ಘೋಷಣೆ ಬೆನ್ನಲ್ಲೇ, ಮಾಜಿ ಶಾಸಕರು ಹೈ ಡ್ರಾಮಾ ಕ್ರಿಯೇಟ್ ಮಾಡಿದ್ದಾರೆ. ಶ್ರೀರಂಗಪಟ್ಟಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಕಣ್ಣೀರು ಹಾಕಿದ್ದಾರೆ.

ಮಾಜಿ ಶಾಸಕ ರಮೇಶ್ ಬಾಬು ಶ್ರೀರಂಗಪಟ್ಟಣದ ಬೆಳಗೋಳದಲ್ಲಿ ನಡೆದಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಇವತ್ತು ತನಗೆ ಅತ್ಯಂತ ಕಷ್ಟದ ದಿನಗಳು ಎದುರು ಬರ್ತಿವೆ. ಎಲ್ಲಾ ಕಷ್ಟಗಳು ತನಗೆ ಬರ್ತಿವೆ ಎಂದು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

‘’ನಾನು ಜನ ಸೇವೆ ಮಾಡೋದೆ ತಪ್ಪಾ?. ಅಥವಾ ಭಾರ ಹೊರ್ತಾನೆ ಅಂತಾ ಇಂತಾ ಕಷ್ಟ ಕೋಡುದು ಸರಿನಾ..?” ಎಂದು ಕಣ್ಣೀರು ಸಭೆಯಲ್ಲಿ ಕಣ್ಣೀರಾಕುತ್ತಲೇ ಈ ಬಾರಿ ಕೈ ಹಿಡಿಯುವವಂತೆ ಶಾಸಕರು ಜನರಲ್ಲಿ ಮನವಿ ಮಾಡಿದ್ದಾರೆ.

ಇನ್ನು ಮಾಜಿ ಶಾಸಕರು ಕಣ್ಣೀರು ಹಾಕಿದ್ದಕ್ಕೆ, ಹಾಲಿ ಶಾಸಕರು ವ್ಯಂಗ್ಯವಾಡಿದ್ದಾರೆ. ಶಾಸಕ ರವೀಂದ್ರ ಶ್ರೀಕಂಠಯ್ಯ, ಮತ ಕೇಳು, ಅದು ಬಿಟ್ಟು ಕಣ್ಣೀರು ಹಾಕಿ ಮತ ಕೇಳುವುದು ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಸೇರಿದ ಬಳಿಕ ಮೊದಲ ಸುದ್ದಿಗೋಷ್ಠಿ-ಎ.ಟಿ ರಾಮಸ್ವಾಮಿ

‘ದ್ವೇಷ ಮಾಡೋದು ಕುಮಾರಸ್ವಾಮಿ ಒಬ್ಬರೇ’

ಕಿಚ್ಚನ ಬಿಜೆಪಿ ಸೇರ್ಪಡೆ ವಿಚಾರಕ್ಕೆ ನಟ ಪ್ರಕಾಶ್ ರಾಜ್ ಟ್ವೀಟ್

- Advertisement -

Latest Posts

Don't Miss